ವಿದ್ಯಾರ್ಥಿಯ ಶಾಲಾ ದಾಖಲಾತಿಯ ವಹಿಯಲ್ಲಿ ಪಿಂಜಾರ ನದಾಫ್ ಎಂಬ ಜಾತಿಯನ್ನು ನಮೂದು ಮಾಡಲು : ಬಷೀರ್ ಅಹಮ್ಮದ್ರಿಂದ ಮನವಿ ಸಲ್ಲಿಕೆ
ತುಮಕೂರು : ಮುಸ್ಲಿಂ ಸಮುದಾಯದ ಉಪಜಾತಿಗಳಲ್ಲಿ ಒಂದಾದ ಪಿಂಜಾರ / ನದಾಫ್ ಸಮುದಾಯಕ್ಕೆ ಈಗಾಗಲೇ ರಾಜ್ಯ ಸರ್ಕಾರವು ಪ್ರವರ್ಗ-೧ ರಡಿಯಲ್ಲಿ ಜಾತಿ ಪ್ರಮಾಣ ನೀಡಲು ಆದೇಶ ನೀಡಿದ್ದು ಹಾಲಿ ರಾಜ್ಯದ ಎಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವ ಸಂದರ್ಭದಲ್ಲಿ ನಮ್ಮ ಸಮುದಾಯದವರಿಗೆ ಫಿಂಜಾರ/ನದಾಫ್ ಎಂದು ನಮೂದಾಗಿ ಬರುತ್ತಿದೆ. ಆದುದರಿಂದ ನಮ್ಮ ಸಮುದಾಯದ ಮಕ್ಕಳು ಶಾಲೆಗಳಿಗೆ ದಾಖಲಾಗುವ ಸಂದರ್ಭದಲ್ಲಿ ಶಾಲಾ ದಾಖಲಾತಿಯ ವಹಿಯಲ್ಲಿನ ಜಾತಿ/ಸಮುದಾಯ ನಮೂದಿಸುವ ಕಾಲಂನಲ್ಲಿ ಯಾವುದೇ ರೀತಿಯಾದ ತಿದ್ದುಪಡಿ ಮಾಡದೆ ಈ ಹಿಂದೆ ಇದ್ದ ೨ಬಿ ಮುಸ್ಲಿಂ ಎಂದೇ ನಮೂದಾಗುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ತುಮಕೂರು ಜಿಲ್ಲಾ ಪಿಂಜಾರ್/ನದಾಫ್ ಸಮುದಾಯದ ಜಿಲ್ಲಾಧ್ಯಕ್ಷ ಬಷೀರ್ ಅಹಮ್ಮದ್ರವರು ಈ ಕೂಡಲೇ ಶಿಕ್ಷಣ ಇಲಾಖೆಯವರು ತಿದ್ದುಪಡಿ ಮಾಡಿಕೊಂಡು ಶಾಲಾ ದಾಖಲಾತಿ ವಹಿಯಲ್ಲಿ ನಮ್ಮ ಸಮುದಾಯದ ಮಕ್ಕಳು ನಮೂದಿಸಿರುವ / ತಂದಿರುವ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ನಮೂದು ಮಾಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಹಾಗೂ ಇದೇ ವೇಳೆ ತುಮಕೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಈ ಕುರಿತು ಮನವಿ ಪತ್ರವನ್ನು ನೀಡಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶಾಲಾ ದಾಖಲಾತಿಯ ವೇಳೆ ಮತ್ತು ಈಗಾಗಲೇ ದಾಖಲಾತಿಯಾಗಿದ್ದರೆ ಅದರಲ್ಲಿ ೨ಬಿ ಮುಸ್ಲಿಂ ಬದಲಾಗಿ ಪಿಂಜಾರ / ನದಾಫ್ ಎಂದು ತಿದ್ದುಪಡಿ ಮಾಡಲು ಆದೇಶ ನೀಡಬೇಕೆಂದು ತಮ್ಮ ಮನವಿ ಪತ್ರದಲ್ಲಿ ಕೋರಿದ್ದಾರೆ. ಅಲ್ಲದೇ ಶಾಲಾ ವರ್ಗಾವಣೆ ಪತ್ರದಲ್ಲಿಯೂ ಸಹ ಇನ್ಮುಂದೆ ಪಿಂಜಾರ / ನದಾಫ್ ಎಂದು ನಮೂದಿಸಿ ವರ್ಗಾವಣೆ ಪತ್ರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಂಜಾರ / ನದಾಫ್ ಸಂಘದ ಜಿಲ್ಲಾಧ್ಯಕ್ಷ ಬಷೀರ್ ಅಹಮ್ಮದ್, ಉಪಧ್ಯಾಕ್ಷ ಅಬ್ದುಲ್ ಲತೀಫ್, ನಿರ್ದೇಶಕ ಜಿಯಾವುಲ್ಲಾ, ಹಜರತ್ ಸಾಹೇಬ್ ನದಾಫ್, ನಜೀರ್ ಅಹಮ್ಮದ್, ಅಜೀಂ ಪಾಷ, ಉಮರ್, ಹುಸೇನ್, ವಾಹೀದ್, ಮುಬಾಷೀರ ಬಾನು, ನೂರುಲ್ಲ, ಹರ್ಷಾರಾಮ್ ಹಾಗೂ ಇತರರು ಉಪಸ್ಥಿತರಿದ್ದರು.