ಮಹಿಳಾ ಸಬಲೀಕರಣದ ಶಕ್ತಿ :-ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹಾಗೂ ನಗರ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು ಜೂನ್ ೧೧ ರಿಂದ ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದಿದ್ದು, ತುಮಕೂರು ಜಿಲ್ಲೆಯಾದ್ಯಂತ ತುಮಕೂರು ವಿಭಾಗದ ಸಾರಿಗೆ ಬಸ್ಗಳಲ್ಲಿ ಇಲ್ಲಿಯವರೆಗೆ ೧೧೦.೭೨ಲಕ್ಷ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣಿಸಿರುತ್ತಾರೆ. ತುಮಕೂರು ವಿಭಾಗದಲ್ಲಿ ಪ್ರತಿದಿನ ಸರಾಸರಿ ೨.೭೯ ಲಕ್ಷ ಪ್ರಯಾಣಿಕರಿಗೆ ಸೌಲಭ್ಯವನ್ನು ಒದಗಿಸುತ್ತಿದ್ದು, ಅದರಲ್ಲಿ ೧.೮೭ ಲಕ್ಷಕ್ಕೂ ಅಧಿಕ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಜೂನ್ ೧೧ ರಿಂದ ೩೦ರವರೆಗೆ ಶಕ್ತಿ ಯೋಜನೆಯಡಿ ೨೯.೭೩ಲಕ್ಷ ಮಹಿಳಾ ಪ್ರಯಾಣಿಕರು ತುಮಕೂರು ಹಾಗೂ ರಾಜ್ಯದ ಇತರೆ ಸ್ಥಳಗಳಿಗೆ ಪ್ರಯಾಣಿಸಿದ್ದು, ಇದರಿಂದ ತುಮಕೂರು ವಿಭಾಗಕ್ಕೆ ೮೩೨.೯೯ಲಕ್ಷ ಸಾರಿಗೆ ಆದಾಯ ಹಾಗೂ ಜುಲೈ-೨೦೨೩ರ ಮಾಹೆಯಲ್ಲಿ ೫೭.೯೭ಲಕ್ಷ ಮಹಿಳಾ ಪ್ರಯಾಣಿಕರು ಹಾಗೂ ರೂ.೧೫೭೦.೧೪ಲಕ್ಷ ಸಾರಿಗೆ ಆದಾಯ ಗಳಿಸಲಾಗಿರುತ್ತದೆ. ಆಗಸ್ಟ್-೨೦೨೩ರ ೨೩ನೇ ತಾರೀಖಿನವರೆಗೆ ೩೭.೧೮ಲಕ್ಷ ಮಹಿಳಾ ಪ್ರಯಾಣಿಕರು ಹಾಗೂ ರೂ.೧೧೪೨.೨೫ಲಕ್ಷ ಸಾರಿಗೆ ಆದಾಯ ಗಳಿಸಲಾಗಿರುತ್ತದೆ. ಒಟ್ಟಾರೆ ಶಕ್ತಿ ಯೋಜನೆಯ ಪ್ರಾರಂಭದಿAದ ಇಲ್ಲಿಯವರೆಗೆ ೩೫೪೪.೯೮ಲಕ್ಷ ಮಹಿಳಾ ಸಾರಿಗೆ ಆದಾಯವನ್ನು ಗಳಿಸಲಾಗಿರುತ್ತದೆ. ಶಕ್ತಿ ಯೋಜನೆ ಅನುಷ್ಟಾನಗೊಂಡ ಮೇಲೆ ಸಾರ್ವಜನಿಕ ಬೇಡಿಕೆಗನುಸಾರವಾಗಿ ಕೆಲವು ಮಾರ್ಗಗಳಿಗೆ ಸುತ್ತುವಳಿಯನ್ನು ಹೆಚ್ಚಿಸಲಾಗಿದ್ದು, ಬಸ್ಗಳ ಕೊರತೆ ನೀಗಿಸಲು ಅನುಸೂಚಿಗಳ ವೇಳಾಪಟ್ಟಿ/ ಮಾರ್ಗಪರಿಷ್ಕರಣೆ ಮಾಡಲಾಗಿರುತ್ತದೆ. ಮುಂಗಡ ಬುಕ್ಕಿಂಗ್ ಸೌಲಭ್ಯವಿರುವ ಬಸ್ಗಳಲ್ಲಿ ಮಹಿಳೆಯರಿಗೆ ಮುಂಗಡ ಆಸನ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಯಿಂದ ಮಹಿಳಾ ಪ್ರಯಾಣಿಕರು ಸಂತಸಗೊAಡಿದ್ದು, ಇವರುಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು, ಶ್ರೀ ಕ್ಷೇತ್ರಗಳಾದ ಗೊರವನಹಳ್ಳಿ, ದೇವರಾಯನದುರ್ಗ, ಧರ್ಮಸ್ಥಳ, ಸಿಂಗದೂರು, ಕುಕ್ಕೇಸುಬ್ರಮಣ್ಯ ಇತ್ಯಾದಿ ಸ್ಥಳಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅಗತ್ಯಕ್ಕೆ ತಕ್ಕಂತೆ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.