ತುಮಕೂರು:ಗುಬ್ಬಿ ತಾಲೂಕು ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರದಿಂದ ಕೂಡಿದ್ದು,ಪಿಂಚಿಣಿ,ಕಾರ್ಮಿಕರ ಕಾರ್ಡು ನವೀಕರಣ,ಹೊಸ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿ,೨-೩ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಇಂದು ತುಮಕೂರು ಜಿಲ್ಲಾ ಕೃಷಿಕೂಲಿ ಕಾರ್ಮಿಕರ ಯೂನಿಯನ್ (ರಿ) ವತಿಯಿಂದ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತುಮಕೂರು ಜಿಲ್ಲಾ ಕೃಷಿ ಕೂಲಿ ಕಾರ್ಮಿಕರ ಯೂನಿಯನ್ನ ಜಿಲ್ಲಾಧ್ಯಕ್ಷ ಸಿ.ಜಿ.ಲೋಕೇಶ್ ನೇತೃತ್ವದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಕಾರ್ಮಿಕ ಮಹಿಳೆಯರು ಗುಬ್ಬಿ ಕಾರ್ಮಿಕ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ ಹಾಗೂ ಬೇಜಾಬ್ದಾರಿತನದ ವಿರುದ್ದ ಕಿಡಿ ಕಾರಿದರು.
ಈ ವೇಳೆ ಮಾತನಾಡಿದ ತುಮಕೂರು ಜಿಲ್ಲಾ ಕೃಷಿ ಕೂಲಿ ಕಾರ್ಮಿಕರ ಯೂನಿಯನ್ ಜಿಲ್ಲಾಧ್ಯಕ್ಷ ಸಿ.ಜಿ.ಲೋಕೇಶ್,ಸರಕಾರ ಕಾರ್ಮಿಕರು ಕಾರ್ಮಿಕರ ಕಲ್ಯಾಣ ಮಂಡಳಿ ಸವಲತ್ತುಗಳನ್ನು ಪಡೆಯಲು ಅನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಆದರೆ ಬಹುತೇಕ ಕಾರ್ಮಿಕರು ಅನಕ್ಷರಸ್ಥರಾಗಿರುವ ಕಾರಣ,ಅರ್ಜಿ ಸಲ್ಲಿಸುವ ವೇಳೆ ಸಣ್ಣ,ಪುಟ್ಟ ತಪ್ಪುಗಳಾದರೆ ೨-೩ ವರ್ಷವಾದರೂ ಸರಿ ಹೋಗದೆ ಕಾರ್ಮಿಕರಿಗೆ ಸೌಲಭ್ಯ ದೊರೆಯುತ್ತಿಲ್ಲ.ಗುಬ್ಬಿ ತಾಲೂಕಿನ ಶ್ರೀಮತಿ ರಂಗಮ್ಮ ಕೋಂ ಕೃಷ್ಣಪ್ಪ ಬಿಳಿಗೆರೆ ಗ್ರಾಮದವರು ೨೦-೧೧-೨೦೨೧ರಂದು ನಿವೃತ್ತಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಗಂಡನ ವಯಸ್ಸು ತಿದ್ದಿದ್ದಾರೆ ಎಂಬ ಕಾರಣಕ್ಕೆ ಅರ್ಜಿ ತಿರಸ್ಕೃತಗೊಂಡಿದೆ.ಸರಿಪಡಿಸಿ ಅರ್ಜಿ ಸಲ್ಲಿಸುವ ವೇಳೆ ಅರ್ಜಿದಾರರಿಗೆ ೬೦ ವರ್ಷ ತುಂಬಿದ ಕಾರಣ ಅನ್ಲೈನ್ ಅರ್ಜಿ ತೆಗೆದುಕೊಂಡಿಲ್ಲ.ಕಾರ್ಮಿಕ ಅಧಿಕಾರಿಗಳ ಸಲಹೆಯಂತೆ ಅಫ್ಲೈನ್ನಲ್ಲಿ ಅರ್ಜಿ ಸಲ್ಲಿಸಿದರೂ ಇದುವರೆಗೂ ಯಾವ ಕ್ರಮ ಆಗಿದೆ ಎಂಬ ಮಾಹಿತಿಯೇ ಇಲ್ಲದಂತಾಗಿದೆ
ಪಿಂಚಿಣಿ,ಕಾರ್ಮಿಕರ ಕಾರ್ಡು ನವೀಕರಣ,ಹೊಸ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿ
Leave a comment
Leave a comment