ಮೂಢನಂಬಿಕೆಗಳ ಮೊರೆ ಹೋಗದೆ ವಿಜ್ಞಾನದ ಕಡೆಗೆ ಗಮನ ಕೊಡುವುದರ ಮೂಲಕ ಸಮಾಜಕ್ಕ ಪೂರಕವಾದ ಸಂಶೋಧನೆಗಳನ್ನು ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಇಸ್ರೋ ಉಪಗ್ರಹ ನಿಯಂತ್ರಣ ಕೇಂದ್ರದ ಹಿರಿಯ ವಿಜ್ಞಾನಿ ಜಯಸಿಂಹ. ಪಿ. ಅವರು ಕರೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ವಿಜ್ಞಾನ ಸಂಘ ಹಾಗೂ ಕನ್ನಡ ವಿಭಾಗದ ಸಹಯೋಗದೊಂದಿಗೆ ಡಾ. ಹೆಚ್.ಎಂ.ಗoಗಾಧರಯ್ಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನ’ದ ಉಪನ್ಯಾಸ ಮಾಲೆ-15 ಉದ್ಘಾಟಸಿ, ಮಾತನಾಡಿದರು.
ಭೂಮಿ ಮೇಲಿನ ಕೃಷಿ, ಮೀನು, ನೀರು, ನೈಸರ್ಗಿಕ ಸಂಪನ್ಮೂಲಗಳ ಚಲನವಲನಗಳ ಬಗ್ಗೆ ಉಪಗ್ರಹ ಕಳುಹಿಸಿಕೊಡುವ ಚಿತ್ರಗಳಿಂದ ಸಮಾಜಕ್ಕೆ ಸಾಕಷ್ಟು ಮುನ್ಸೂಚನೆಗಳು ಸಿಗುತ್ತವೆ. ಇಂದಿನ ಅರಣ್ಯದ ವಸ್ತು ಸ್ಥಿತಿ ಸಿಗುತ್ತದೆ ಎಂದು ಅವರು ಹೇಳಿದರು.
ತುಮಕೂರಿನ ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಣ ತಜ್ಞರಾದ ಡಾ.ಹೆಚ್.ಎಸ್.ನಿರಂಜನ್ ಆರಾಧ್ಯ ಮಾತನಾಡಿ, ವಿಜ್ಞಾನವನ್ನು ಕೂಡ ಕನ್ನಡದಲ್ಲಿ ಕಲಿಯಬಹುದು. ಹುಟ್ಟಿನಿಂದಲೇ ನಾವೆಲ್ಲರೂ ವಿಜ್ಞಾನಿಗಳು ಎಂದರು.
ವಿಜ್ಞಾನಿಯಾದ ಸರ್. ಸಿ. ವಿ. ರಾಮನ್ ರಾಷ್ಟ್ರಕ್ಕೆ ನೀಡಿದ ಕೊಡುಗೆ ಅಪಾರ. ವಿದ್ಯಾರ್ಥಿಗಳು ವಿಜ್ಞಾನದ ಕಡೆಗೆ ಗಮನ ಕೊಡಬೇಕು. ತಾಳ್ಮೆ, ಶಾಂತಿ, ಬುದ್ಧನ ಸಲಹೆ ಜೊತೆಗೆ ನಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿ ವಿಜ್ಞಾನಿಗಳಾಗಿ ಪರಿವರ್ತನೆಗೊಳ್ಳಿರಿ ಎಂದು ಅವರು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಾಲತಾ. ಪಿ. ಸಮಾರಂಭದ ಅಧ್ಯಕ್ಷತೆ ವಹಿಸಿ, ವಿಜ್ಞಾನದ ವಿದ್ಯಾರ್ಥಿಗಳು ಹೆಚ್ಚು ಕುತೂಹಲರಾಗಿರಬೇಕು. ಅಜ್ಞಾನದಿಂದ-ಜ್ಞಾನದ ಕಡೆಗೆ ಸಾಗಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿ ವಿಭಾಗದ ಪ್ರೊ.ಜಿ.ಹನುಮಂತರಾಯಪ್ಪ, ಸಾಂಸ್ಕೃತಿಕ ಕಾರ್ಯದರ್ಶಿಗಳು ಹಾಗೂ ಕನ್ನಡ ವಿಭಾಗ ಪ್ರೊ. ರಮೇಶ್ ಮಣ್ಣೆ, ಐಕ್ಯೂಎಸಿ ವಿಭಾಗ ಸೈಯದ್ ಬಾಬು ಸೇರಿದಂತೆ ಭೋದಕ-ಭೋದಕೇತರ ಸಿಬ್ಬಂಧಿ ಹಾಗೂ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.
ಮೂಢನಂಬಿಕೆಗಳ ಮೊರೆ ಹೋಗದೆ ವಿಜ್ಞಾನದ ಕಡೆಗೆ ಗಮನ ಕೊಡಿ
Leave a comment
Leave a comment