ತುಮಕೂರು : ಮಕ್ಕಳು ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪೋಷಕರು ಪ್ರೋತ್ಸಾಹ ನೀಡಬೇಕು ಮಕ್ಕಳ ಮಾನಸಿಕ ಆರೋಗ್ಯ ಜೊತೆಗೆ ದೈಹಿಕವಾಗಿಯೂ ಅವರನ್ನು ಸದೃಢರನ್ನಾಗಿ ಬೆಳೆಸಿ ಎಂದು ಸಾಹೇ ವಿವಿ ಉಪಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ ಅವರು ಕರೆ ನೀಡಿದ್ದಾರೆ.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಎಂಜಿನಿಯರಿAಗ್ ವಿಭಾಗದ ವತಿಯಿಂದ ಶಿಕ್ಷಣ ಭೀಷ್ಮ ಡಾ.ಎಚ್.ಎಂ.ಗAಗಾಧರಯ್ಯನವರ ಸ್ಮರಣಾರ್ಥವಾಗಿ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ‘ಸ್ಥಳದಲ್ಲೇ ಚಿತ್ರ ಬಿಡಿಸುವ’ ಸ್ಪರ್ಧೆಯ ಬಹುಮಾನ ವಿತರಣೆ ಮಾಡಿ ಮಾತನಾಡಿದರು.
ಶಾಲೆಗಳ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರೀಯವಾಗಿ ಭಾಗವಹಿಸಲು ಪೋಷಕರು ಗಮನಹರಿಸಬೇಕು. ಶಿಕ್ಷಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದು, ಸಕ್ರೀಯ ಚಟುವಟಿಕೆಗಳ ಜೊತೆಗೆ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯವಾಗಿ ಅವರನ್ನು ಸದೃಢರನ್ನಾಗಿ ಬೆಳೆಸಿ ಎಂದರು.
ಮಕ್ಕಳ ಬೌದ್ಧಿಕ ವಿಕಾಸದತ್ತ ಪೋಷಕರು ಗಮನ ಹರಿಸಬೇಕು
Leave a comment
Leave a comment