ಪೋಷಕರು ಮತವನ್ನು ಹಣ ಹೆಂಡಕ್ಕೆ ಮಾರಿಕೊಳ್ಳಬೇಡಿ
ನಗರದ ಎನ್,ಆರ್ ಕಾಲೋನಿ ದಸರಾ ಮೈದಾನದಲ್ಲಿ ಪರಿವರ್ತನಾ ಕಲಾ ಮತ್ತು ಕ್ರೀಡಾ ಯುವಕರ ಸಂಘದವತಿಯಿAದ ಸಂವಿಧಾನ ಶಿಲ್ಪಿ ಭಾರತರತ್ನ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರ ೧೩೨ನೇ ಹಾಗೂ ಡಾ|| ಬಾಬು ಜಗಜೀವನ್ರಾಂ ರವರ ೧೧೬ನೇ ಜಯಂತಿಯನ್ನ ಆಚರಿಸಲಾಯಿತು.
ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಸಂವಿಧಾನ ಶಿಲ್ಪಿಯನ್ನು ಇಡೀ ದೇಶ ಸ್ಮರಿಸುವುದರ ಜೊತೆಗೆ ಅವರ ಆಶಯಗಳನ್ನು ಅಳವಿಡಿಸಿಕೊಳ್ಳಬೇಕಿದೆ. ಮತ್ತು ಅಂಬೇಡ್ಕರ್ ರವರ ಜಯಂತಿ ಮತ್ತು ಚುನಾವಣೆ ಸಮೀಪವಿರುವ ಕಾರಣ ಸಾಂಕೇತಿಕವಾಗಿ ಜನ ಆಚರಿಸುತ್ತಿರಿಸುದ್ದಾರೆ, ಅದರಲ್ಲು ಎನ್,ಆರ್ ಕಾಲೋನಿ ಪರಿವರ್ತನಾ ಕಲಾ ಸಂಘದ ಯುವಜನರು ಒಟ್ಟು ಗೂಡಿ ಡಾ|| ಅಂಬೇಡ್ಕರ್ ಮತ್ತು ಡಾ|| ಬಾಬೂಜಿ ರವರ ಜಯಂತಿ ಆಚರಿಸುತ್ತಿರುವುದು ಸಂತೋಷಕರವಾಗಿದೆ. ಮಕ್ಕಳು ಕ್ರೀಡಾ ಆಸಕ್ತಿ ಜೊತೆಗೆ ಶಿಕ್ಷಣದ ಅರಿವು ಬಹಳ ಮುಖ್ಯ ಇವೆರಡು ಇದಲ್ಲಿ ಎಂತಹ ಸಾಧನಗು ಸುಲಭದ ಹಾದಿ ನಿಮ್ಮದಾಗುತ್ತದೆ. ದೇಶದಲ್ಲಿ ಬಡವರು, ಶೋಷಿತರು, ಈ ದೇಶದ ಚುಕ್ಕಾಣಿಯನ್ನು ಹಿಡಯಬೇಕೆನ್ನುವುದು ಬಾಬಾ ಸಾಹೇಬರ ಕನಸಾಗಿತ್ತು, ಆದರೆ ಹಣಬಲ, ಜಾತಿಬಲ ರಾಜಕೀಯ ಹಿತಾಸಕ್ತಿಗಳಿಗೆ ರಾಜಕಾರಣ ಮಾರಿಹೋಗಿದೆ, ದೇಶದ ಅಭಿವೃದ್ಧಿಯಲ್ಲಿ ಮಕ್ಕಳದ್ದು ಪಾತ್ರ ಬಹಳಷ್ಟಿದೆ ನಮ್ಮ ವಿಮೋಚನೆಗಾಗಿ ನಮ್ಮ ಹಕ್ಕನ್ನು ಚಲಾಯಿಸಲು ಮಕ್ಕಳು ಪೋಷಕರಿಗೆ ಮನದಟ್ಟು ಮಾಡಬೇಕು, ಖಾಸಗೀಕರಣ ಉದಾರೀಕರಣ ನೆಪದಲ್ಲಿ ಬಡವರನ್ನು ಒಡೆದು ಆಳುವ ನೀತಿಗಳ ವಿರುದ್ದ ನಿಲ್ಲಬೇಕಿದೆ ಎಂದರು.
ನಂತರ ಮಾತನಾಡಿದ ಪರಿವರ್ತನಾ ಕಲಾ ಮತ್ತು ಕ್ರೀಡಾ ಸಂಘದ ಮೋಹನ್ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಏನಾದರು ಬರೆಯದೆ ಇದಿದ್ರೆ ನಾವ್ಯಾರು ವಿದ್ಯಾವಂತರಾಗುತ್ತಿರಲಿಲ್ಲ, ಗುಲಾಮಿ ಪದ್ದತಿಯಲ್ಲೆ ಜೀವನ ಕಳೆಯಬೇಕಾಗಿತ್ತು. ಶಿಕ್ಷಣ, ಸಂಘಟನೆ, ಹೋರಾಟ ಮೂರು ಹಸ್ತçಗಳು ನಮ್ಮ ಎದೆಗೆ ನಾಟಿದಾಗ ಮಾತ್ರ ನಾವು ಉತ್ತಮ ಪ್ರಜೆಗಳಾಗಲು ಸಾಧ್ಯ, ಚುನವಾಣೆಯಲ್ಲಿ ಆಸೆ ಆಮಿಷಕ್ಕೆ ಒಳಗಾಗದೇ ಸಂವಿಧಾನ ಉಳಿಸಲು ಮತ ಚಲಾಯಿಸಬೇಕಿದೆ, ನಮ್ಮ ಮತ ನಮ್ಮ ಹಕ್ಕು ಎಲ್ಲರು ಮತ ಚಲಾಯಿಸೋಣ ಪ್ರಜಾಪ್ರಭುತ್ವ ಗಟ್ಟಿಗೊಳಿಸೊಣ ಎಂದರು.
ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್, ಪದಾಧಿಕಾರಿಗಳಾದ ಶಂಕ್ರಯ್ಯ, ತಿರುಮಲಯ್ಯ, ಕ್ರಷ್ಣಮೂರ್ತಿ, ಮುಬಾರಕ್, ಪರಿವರ್ತನಾ ಕಲಾ ಮತ್ತು ಕ್ರೀಡಾ ಸಂಘದ ಕೃಷ್ಣ, ಶ್ರೀನಿವಾಸ್, ತರುಣ್, ಲಕ್ಷಿö್ಮÃಶ, ದುರ್ಗ ಮುಂತಾದವರು ಪಾಳ್ಗೊಂಡಿದ್ದರು