ಬಡವರನ್ನು ಶಕ್ತಿವಂತರನ್ನಾಗಿ ಮಾಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಇಚ್ಛೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬಡವರನ್ನು ಶಕ್ತಿವಂತರನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ನಮ್ಮ ಪಕ್ಷ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಈ ಮೂಲಕ ಬಡವರು, ಅಶಕ್ತರು, ಧ್ವನಿ ಇಲ್ಲದವರ ಶ್ರೇಯೋಭಿವೃದ್ಧಿಗೆ ನಮ್ಮ ಪಕ್ಷ ಶ್ರಮವಹಿಸಿ ಕೆಲಸ ಮಾಡುತ್ತಿದೆ ಎಂದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಜಾರಿಗೆ ತಂದಿರುವ ೫ ಗ್ಯಾರಂಟಿಗಳನ್ನು ವಿರೋಧ ಮಾಡುವವರು ಬಡಜನರ ನಿಜವಾದ ವಿರೋಧಿಗಳು ಎಂದರು.
ಸಣ್ಣ ಸಣ್ಣ ಸಮುದಾಯಗಳಿಗೆ ಧ್ವನಿಯಾಗುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ಅವರು ಮಾಡಿದರು. ಹೆಸರನ್ನು ಕೇಳದಿರುವ ಜಾತಿ ಇದೆ ಎಂದು ಸಮಾಜಕ್ಕೆ ಗೊತ್ತಾಗುವ ರೀತಿ ಧ್ವನಿ ಕೊಟ್ಟ ಮಹಾನುಭಾವರು ಅರಸು ಎಂದು ಬಣ್ಣಿಸಿದರು.
ಉಳ್ಳವರು, ಆಸ್ತಿವಂತರು, ಶಕ್ತಿವಂತರಿಗೆ ಸಮಾಜದಲ್ಲಿ ಯಾವಾಗಲೂ ಸೌಲಭ್ಯ ಸಿಗುತ್ತಲೇ ಇರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದವರು ದೇವರಾಜ ಅರಸು ಎಂದರು.
ದೇವರಾಜ ಅರಸು ಅವರಿಂದ ಯಾರು ಜಮೀನು ಪಡೆದುಕೊಂಡರೋ ಅವರೇ ಇಂದು ಅರಸುಗೆ ವಿರೋಧ. ರಾಜೀವ್ಗಾಂಧಿಯವರಿAದ ಯಾರು ಮತದಾನ ಮಾಡುವ ಹಕ್ಕು ಪಡೆದರೋ ಅವರೇ ಇಂದು ನಮ್ಮ ಪಕ್ಷಕ್ಕೆ ವಿರೋಧವಾಗಿರುವುದು ವಿಪರ್ಯಾಸಕರ ಸಂಗತಿ ಎಂದರು.
ದೇವರಾಜ ಅರಸು ಅವರು ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದವರು. ಅವರ ಹಾದಿಯಲ್ಲೇ ನಮ್ಮ ಪಕ್ಷ ಸಾಗುತ್ತಿದೆ. ನಾವೆಲ್ಲ ಶೋಷಿತರು, ಬಡವರು, ಅಶಕ್ತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಧ್ವನಿ ಇಲ್ಲದವರ ಶ್ರೇಯೋಭಿವೃದ್ಧಿಗೆ ನಮ್ಮ ಪಕ್ಷ ಶ್ರಮವಹಿಸಿ ಕೆಲಸ ಮಾಡುತ್ತಿದೆ
Leave a comment
Leave a comment