ರಟಗೆರೆ ಆ.೨:- ನಮ್ಮ ಸಂಸ್ಕೃತಿಯನ್ನು ರಕ್ಷಣೆ ಮಾಡುವ ಯೋಧರಾಗಿ ಸಂಸ್ಕೃತ ಶಿಕ್ಷಕರು ಇದ್ದು ನಾವು ಇವರನ್ನು ರಕ್ಷಣೆ ಮಾಡಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂಥನಾಥಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠದಲ್ಲಿ ಬುಧವಾರ ರ್ನಾಟ ಕ ಸಂಸ್ಕೃತ ವಿಶ್ವವಿದ್ಯಾನಿಲಯ,ಸದ್ವಿದ್ಯಾ ಸಂಸ್ಕೃತ ಪಾಠಶಾಲೆ ಮತ್ತು ಕುಂಚಿಟಿಗರ ಮಹಾಂಸ್ಥಾನ ಮಠದ ಸಯೋಗದಲ್ಲಿ ಸೇತುಬಂಧ-೦೧ ಪುನಶ್ಚೇತನ ಶಿಭಿರ ೨೦೨೩-೨೪ರ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ೧೦ ದಿನಗಳ ಕಾಲ ತರಬೇತಿಯನ್ನು ಮಠದಲ್ಲಿ ಪಡೆಯುತ್ತಿರುವಂತಹ ಸಂಸ್ಕೃತ ಶಿಕ್ಷಕರು ತಮ್ಮಲ್ಲಿರುವಂತಯ ಶಿಕ್ಷಕ ವೃತ್ತಿಯಲ್ಲಿರುವಂತಹ ನೂನ್ಯತೆಯನ್ನು ಸರಿಪಡಿಸಿಕೊಂಡು ಹೊಸ ರೀತಿಯಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಲು ಅಣಿಯಾಗಬೇಕು ಈ ಶಿಭಿರತ ಸರ್ಥಕತೆಯಾಗಬೇಕು ಎಂದು ಕರೆ ನೀಡಿದರು.
ಇಡೀ ವಿಶ್ವವೇ ನಮ್ಮ ದೇಶದ ಕಡೆ ನೋಡುವಂತೆ ಮಾಡಿರುವುದು ನಮ್ಮ ಸಂಸ್ಕೃತಿಗೆ ಇರುವಂತಹ ಶಕ್ತಿ ಇದನ್ನು ನಮ್ಮಲ್ಲಿ ಮೂಡಿಸಿರುವುದು ಸಂಸ್ಕೃತ ಆದ್ದರಿಂದ ಸಂಸ್ಕೃತ ಬಾಷೆಯನ್ನು ಕೇವಲ ದೇವರ ಬಾಷೆಯನ್ನಾಗಿ ಬಳಸದೇ ಮನೆ-ಮನೆ, ಮನ-ಮನದ ಬಾಷೆಯನ್ನಾಗಿ ಮಾಡಬೇಕಿದ್ದು ಇದನ್ನು ಸಂಸ್ಕೃತ ಶಿಕ್ಷಕರು ಸನ್ನದ್ದರಾಗಬೇಕಿದೆ ಎಂದು ಹೇಳಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ವೇದೋಪನಿಷತ್ತು ಗಳು,ರಾಮಾಯಣ,ಮಹಾ ಭಾರತ ಕತೆಗಳು,ಭಗವದ್ಗೀತೆ, ಪುರಾಣಗಳು,ರ್ಮಶಾಸ್ತ್ರಗಳು ಹೀಗೆ ಈ ನಾಡಿಗೆ ಪೂಜ್ಯ ವೆನಿಸುವ ಮತ್ತು ಇಡೀ ಮನು ಕುಲದ ಉನ್ನತಿಯನ್ನು ಸಾಧಿ ಸಬಲ್ಲ ಸಾಹಿತ್ಯವೆಲ್ಲವೂ ಈ ಸಂಸ್ಕೃತ ಭಾಷೆಯಲ್ಲಿದೆ ವಿಜ್ಞಾನ,ತಂತ್ರಜ್ಞಾನ,ಕಲೆ ಹಾಗೂ ಸಾಹಿತ್ಯ ಕ್ಷೇತ್ರಗಳ ಅದ್ಭುತ ಕೊಡುಗೆಗಳಲ್ಲಿ ಬಹುಪಾಲು ಈ ಪ್ರಾಚೀನ ಭಾಷೆಯಲ್ಲಿದ್ದು ಸಂಸ್ಕೃತ ಇಂಡೋ ಯುರೋಪಿಯನ್ ಭಾಷಾ ಬಳಗಕ್ಕೆ ಸೇರಿದ ಪ್ರಾಚೀನ ಭಾಷೆ,ಭಾರತದಲ್ಲಿ ಸಂಸ್ಕೃತ ಹೊಂದಿರುವ ಸ್ಥಾನಮಾನ ವನ್ನು ಯುರೋಪ್ ನಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಹೊಂದಿವೆ,ಭಾರತ ಸಂವಿಧಾನದಲ್ಲಿ ಘೋಷಿಸಿರುವ ೨೨ ಅಧಿಕೃತ ಭಾಷೆಗಳಲ್ಲಿ ಇದೂ ಒಂದು ಹಾಗೂ ಶಾಸ್ತ್ರೀಯ ಸ್ಥಾನ ಮಾನವನ್ನೂ ಹೊಂದಿದೆ ಒಂದಾನೊಂದು ಕಾಲದಲ್ಲಿ ಭಾರತದ ಆಡುಭಾಷೆಯಾಗಿದ್ದ ಸಂಸ್ಕೃತಕ್ಕೆ ಇಂದು ಯೋಗ್ಯ ಮಾನ್ಯತೆ ದೊರೆಯ ದಿರುವುದು ವಿರ್ಯಾಸವೇ ಸರಿ ಎಂದು ವಿಷಾಧಿಸಿದರು.
ಸಂಸ್ಕೃತ ಇದ್ದರೆ ಸಂಸ್ಕೃತಿಯ ಉಳಿವು, ಸಂಸ್ಕೃತ ಭಾಷೆ ಯು ಕೇವಲ ಭಾಷೆಯಲ್ಲ ಇದು ಒಂದು ಅದ್ಭುತ ಜ್ಞಾನ ಭಂಡಾರ,ಇದು ಕೇವಲ ಒಂದು ಭಾಷೆಯಲ್ಲ ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾಗಿದೆ ಎಲ್ಲರೂ ಸಹ ನಮ್ಮ ಸಂಸ್ಕೃತಿ ನಮ್ಮ ಪರಂಪರೆ ಯನ್ನು ಬೆಳಸಿ ಬೆಳಗಬೇಕಿದೆ. ಅದರಲ್ಲೂ ಸಂಸ್ಕೃತ ಭಾಷೆ ಉಳಿವಿಗೆ ಪಣತೊಟ್ಟು ನಮ್ಮ ಎಲ್ಲಾ ಪೀಳಿಗೆಗೆ ನಮ್ಮ ಕ್ಷುದ್ರ ರೂ ಸಹ ಭಾಷೆಯನ್ನು ಕಲಿಯುವಂತಾಗಲಿ ಎಂಬುವ ಸದುದ್ದೇಶದೊಂದಿಗೆ ಪರಮಪೂಜ್ಯ ಶ್ರೀ ಹನುಮಂತನಾಥ ಸ್ವಾಮೀಜಿಯವರು ಇಂತಹ ಶಿಬಿರ ಗಳನ್ನು ಹಾಗೂ ಸಂಸ್ಕೃತ ಶಾಲೆಗಳನ್ನು ಆಯೋಜಿಸಿ ಮುನ್ನಡೆಸುತ್ತಿರುವ ಶ್ರೀಗಳು ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಇದನ್ನು ಸದ್ಬಳಕೆ ಮಾಡಿ ಕೊಂಡು ಪರಂಪರೆಯನ್ನು ಉಳಿಸಬೇಕಿದೆ ಎಂದರು.
ಈ ಸಂರ್ಭದಲ್ಲಿ ರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಗಳಾದ
ಡಾ.ಅಹಲ್ಯಾ ,ಮಧುಗಿರಿ ಶೈಊಕ್ಷಣಿಕ ಜಿಲ್ಲೆಯ ಉಪನರ್ದೇಶಕ ಎಂ.ಆರ್ ಮಂಜುನಾಥ್ ,ಅಖಿಲ ಭಾರತೀಯ ಸಂಘಟನಾ ಸಂಸ್ಕೃತ ಭಾರತೀ ಮಂತ್ರಿ ಸತ್ಯನಾರಾಯಣ್,ಸಂಸ್ಕೃತ ಸಿಂಡಿಕೇಟ್ ಮಾಜಿ ಸದಸ್ಯ ನಂಜುಂಡಯ್ಯ, ಮಠದ ದಾನಿಗಳಾದ ನರಸಿಂಹಮರ್ತಿ,ಸಂಸ್ಕೃತ ಶಿಕ್ಷಣ ನರ್ದೇಶಕರಾದ ಡಾ.ಪಾಲಯ್ಯ,ಶಿಕ್ಷಕರಗಳಾದ ಕುಮಾರ್,ಹನುಮಂತರಾಯಪ್ಪ, ಚಿಕ್ಕಪ್ಪಯ್ಯ ,ರ್ಮೇಂದ್ರ ಎಂ.ಸಿ ಬಸವರಾಜ್ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)
೨-ಕೆಆರ್ ಟಿಚಿತ್ರ೦೧: ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿನ ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ವಿಶೇಷ ತರಬೇತಿ ಹಿನ್ನೆಲೆ ಸೇತುಬಂಧ ಕರ್ಯಕ್ರಮದಲ್ಲಿ ಮಠದ ಪೀಠಾಧ್ಯಕ್ಷ ಡಾ.ಹನುಮಂಥನಾಥಸ್ವಾಮೀಜಿ,ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು