ಕೊರಟಗೆರೆ:- ಹಣವಿದ್ದವರು ಮಾತ್ರ ಶೃಂಗೇರಿ ಸೇರದಂತೆ ಇತರೆ ಧಾರ್ಮಿಕ ಕ್ಷೇತ್ರಗಳಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು ಆದರೆ ಇತ್ತೀಚೆಗೆ ಶಾಲೆಗಳು ಈ ಪದ್ಧತಿಯನ್ನು ಅಳವಸಿಕೊಂಡಿರುವುದು ಅತ್ಯುತ್ತಮ ಬೆಳವಳಿಗೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠದಲ್ಲಿನ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಶನಿವಾರ ಕನ್ನಿಕಾ ವಿದ್ಯಾಪೀಠ ಶಾಲೆಯ ಪೂರ್ವಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಕೇವಲ ಮಕ್ಕಳನ್ನು ವಿದ್ಯಾವಂತರಾಗಿ ದೊಡ್ಡ ಡಾಕ್ಟರ್, ಇಂಜಿನೀಯರ್ ಆಗಬೇಕು ಎನ್ನುದ ಪೂರ್ವ ನಿರ್ಧಾರಗಳನ್ನು ಮಾಡದೇ ಮಗುವಿನ ಸರ್ವತೋಮು ಅಭಿವೃದ್ಧಿಗೆ ಪೂರಕವಾಗುವಂತಹ ವಾತಾವರಣವನ್ನು ಕಲ್ಪಿಸಬೇಕು ಅದೇ ರೀತಿ ಮುಗುವಿಗೆ ಕೇವಲ ಅಂಕಗಳಿಸುವ ಶಿಕ್ಷಣವನ್ನು ಕಲಿಸದೇ ಪೋಷಕರನ್ನು ಪ್ರೀತಿಸುವ ಮತ್ತು ಪೋಷಿಸುವ ಸಂಸ್ಕಾರವನ್ನು ಕಲಿಸಬೇಕಿದ್ದು ಕೇವಲ ಹಣಗಳಿಗೆಯನಷ್ಟೇ ಕಲಿಸಬೇಡಿ ಎಂದು ಶ್ರೀಗಳು ಹೇಳಿದರು.
ರಾಜ್ಯದಲ್ಲಿ ಹಲವಾರು ಶಾಲೆಗಳಿಗೆ ಆದರೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸುವಂತ ಶಾಲೆಗಳು ಅತ್ಯಂತ ವಿರಳವಾಗಿದ್ದು ಇತಹ ಕೆಲಸವನ್ನು ಕನ್ನಿಕಾ ವಿದ್ಯಾಪೀಠ ಶಾಲೆಯು ಮಕ್ಕಳಿಗೆ ಅಕ್ಷರದ ಜೊತೆ ಜೊತೆಗೆ ಸಂಸ್ಕಾರವನ್ನು ಕಲಿಸುತ್ತಿದ್ದು ಪ್ರಶಂಸನೀಯ ಎಂದರು.
ಈ ಸಂದರ್ಭದಲ್ಲಿ ಕನ್ನಿಕಾ ವಿದ್ಯಾಪೀಠ ಶಾಲೆಯ ಕಾರ್ಯದರ್ಶಿ ಕೆಎಸ್ ವಿ ರಘು, ಮುಖ್ಯ ಶಿಕ್ಷಕ ಡಿ.ಎಂ ರಾಘವೇಂದ್ರ, ನಿರ್ದೇಶಕ ರಾಧಾ ಕೃಷ್ಣ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಇದ್ದರು.
ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಪಾಲ್ಗೊಂಡು ಶಾರದೆ,ಮಹಾಗಣಪತಿ ಮತ್ತು ಐಗ್ರೀವ ಮಹಾಪೂಜೆಯನ್ನು ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಮಕ್ಕಳಿಗೆ ಅಕ್ಷಾರಾಭ್ಯಾಸವನ್ನು ಮಾಡಿಸಿದರು,ದೇವಾಲಯ ಪ್ರಧಾನ ಅರ್ಚಕ ಸುದರ್ಶನ್ ಅವರ ನೇನೃತ್ವದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.( ಚಿತ್ರ ಇದೆ )
24ಕೆಆರ್ ಟಿ_ಚಿತ್ರ:- ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿರುವಂತಹ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಶನಿವಾರ ಅಕ್ಷರಾಭ್ಯಾಸ ಮಾಡಿದ ಮಕ್ಕಳು ಮತ್ತು ಪೋಷಕರೊಂದಿಗೆ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ, ಪ್ರಧಾನ ಅರ್ಚಕ ಸುದರ್ಶನ್, ಶಾಲೆಯ ಕಾರ್ಯದರ್ಶಿ ಕೆಎಸ್ ವಿ ರಘು, ಮುಖ್ಯ ಶಿಕ್ಷಕ ಡಿ.ಎಂ ರಾಘವೇಂದ್ರ ಸೇರಿದಂತೆ ಇತರರು.
ಹಣವಿದ್ದವರು ಮಾತ್ರ ಶೃಂಗೇರಿ ಸೇರದಂತೆ ಇತರೆ ಧಾರ್ಮಿಕ ಕ್ಷೇತ್ರಗಳಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು

Leave a comment
Leave a comment