ಜಿಎನ್ವಿ: ೧೧ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆಹ್ವಾನ
ತುಮಕೂರು(ಕ.ವಾ)ಮೇ.೨೩: ಜಿಲ್ಲೆಯ ಗೊಲ್ಲಹಳ್ಳಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯ(ಜಿಎನ್ವಿ)ವು ೨೦೨೩-೨೪ನೇ ಸಾಲಿಗಾಗಿ ಲ್ಯಾಟರಲ್ ಎಂಟ್ರಿ ಮೂಲಕ ೧೧ನೇ ತರಗತಿಗೆ ಪ್ರವೇಶ ನೀಡಲು ೨೦೨೩ರ ಜುಲೈ ೨೨ರಂದು ಆಯ್ಕೆ ಪರೀಕ್ಷೆ ನಡೆಸಲು ಉದ್ದೇಶಿಸಿದ್ದು, ಆಸಕ್ತ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲಿಚ್ಛಿಸುವವರು ಆನ್ಲೈನ್ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಯನ್ನು ನವೋದಯ ವಿದ್ಯಾಲಯದ ವೆಬ್ಸೈಟ್ www.navodaya.gov.in ನಲ್ಲಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಮೇ ೩೧ರೊಳಗಾಗಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಯ್ಕೆ ಪರೀಕ್ಷೆ ವಿವರಗಳನ್ನು ಪಡೆಯಲು ಜವಾಹರ್ ನವೋದಯ ವಿದ್ಯಾಲಯದಿಂದ ಸಹಾಯಕೇಂದ್ರವನ್ನು ತೆರೆಯಲಾಗುವುದು. ಅರ್ಜಿ ಸಲ್ಲಿಸುವವರು ೨೦೨೨-೨೩ರ ಶೈಕ್ಷಣಿಕ ಅವಧಿ(೨೦೨೨ರ ಏಪ್ರಿಲ್ ಮಾಹೆಯಿಂದ ೨೦೨೩ರ ಮಾರ್ಚ್ವರೆಗಿನ ಅವಧಿ ಅಥವಾ ೨೦೨೨(೨೦೨೨ರ ಜನವರಿ ಮಾಹೆಯಿಂದ ೨೦೨೨ರ ಡಿಸೆಂಬರ್ವರೆಗೆ)ರ ಅವಧಿಯಲ್ಲಿ ಸರ್ಕಾರಿ/ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ೧೦ನೇ ತರಗತಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ೨೦೦೬ರ ಜೂನ್ ೧ ರಿಂದ ೨೦೦೮ರ ಜುಲೈ ೩೧ರ (ಎರಡೂ ದಿನಗಳೊಳಗೊಂಡAತೆ) ನಡುವೆ ಜನಿಸಿದವರಾಗಿರಬೇಕು.
ಆಯ್ಕೆ ಪರೀಕ್ಷೆಯಲ್ಲಿ ಮಾನಸಿಕ ಸಾಮರ್ಥ್ಯ, ಇಂಗ್ಲೀಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಭಾಗಗಳ ಪ್ರಶ್ನೆ, ಪ್ರತಿ ವಿಭಾಗದಲ್ಲಿ ಓಎಂಆರ್ ಆಧಾರಿತ ೨೦ಆಬ್ಜೆಕ್ಟೀವ್ ಪ್ರಶ್ನೆಗಳನ್ನು ಹೊಂದಿರುವ ದ್ವಿಭಾಷಾ(ಇಂಗ್ಲೀಷ್ ಮತ್ತು ಹಿಂದಿ) ಪ್ರಶ್ನೆ ಪತ್ರಿಕೆಯನ್ನೊಳಗೊಂಡಿರುತ್ತದೆ. ಆಯ್ಕೆ ಪರೀಕ್ಷೆಯು ಜುಲೈ ೨೨ರ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧.೩೦ರವರೆಗೆ ಎರಡೂವರೆ ಗಂಟೆಗಳ ಅವಧಿಯದಾಗಿರುತ್ತದೆ. ಯಾವುದೇ ಋಣಾತ್ಮಕ ಅಂಕಗಳಿರುವುದಿಲ್ಲ. ವಿಕಲಚೇತನ ವಿದ್ಯಾರ್ಥಿಗಳಿಗಾಗಿ ೩೦ ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗುವುದು. ಪಠ್ಯಕ್ರಮ ಮತ್ತು ಹೆಚ್ಚಿನ ಮಾಹಿತಿಗಾಗಿ ಎನ್ವಿಎಸ್ ಅಧಿಸೂಚನೆ ಅಥವಾ ವೆಬ್ಸೈಟ್ www.navodaya.gov.in ಅನ್ನು ನೋಡಬಹುದು.
ಆನ್ಲೈನ್ ಅರ್ಜಿ ಭರ್ತಿ ಮಾಡುವ ಮುನ್ನ ಅಧಿಸೂಚನೆಯಲ್ಲಿರುವ ಷರತ್ತುಗಳನ್ನು ಎಚ್ಚರಿಕೆಯಿಂದ ಓದಬೇಕು ಹಾಗೂ ೧-೧೦೦ ಎಂ.ಬಿ. ಅಳತೆಯ ಅಭ್ಯರ್ಥಿಯ ಭಾವಚಿತ್ರ, ಪೋಷಕರ ಸಹಿ ಹಾಗೂ ಅಭ್ಯರ್ಥಿಯ ಸಹಿಯನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.
ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ೬ ರಿಂದ ೧೨ನೇ ತರಗತಿವರೆಗೆ ಸಹ ಶಿಕ್ಷಣ ಪದ್ಧತಿಯಡಿ ಸಂಪೂರ್ಣ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಪ್ರತಿಭಾವಂತ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣ ನೀಡಲಾಗುವುದು. ಉಚಿತ ಶಿಕ್ಷಣ, ಸಮವಸ್ತç, ಪಠ್ಯಪುಸ್ತಕ, ಲೇಖನ ಸಾಮಗ್ರಿಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಶಿಕ್ಷಣದೊಂದಿಗೆ ಕ್ರೀಡೆ, ಯೋಗ, ಎನ್ಸಿಸಿ, ಎನ್ಎಸ್ಎಸ್ ತರಬೇತಿ ನೀಡಲಾಗುವುದು.
ಪ್ರತಿ ವರ್ಷ ಯುಪಿಎಸ್ಸಿ ನಡೆಸುವ ಪರೀಕ್ಷೆಯಲ್ಲಿ ಸುಮಾರು ೨೫ ನವೋದಯ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ. ಅಲ್ಲದೆ ಜೆಇಇ ಮೇನ್-೨೦೨೨ ಪರೀಕ್ಷೆಯಲ್ಲಿ ನವೋದಯ ಶಾಲೆಯ ೭೫೮೫ ವಿದ್ಯಾರ್ಥಿಗಳ ಪೈಕಿ ೪೨೯೬(ಶೇ.೫೬.೬) ವಿದ್ಯಾರ್ಥಿಗಳು ಹಾಗೂ ಜೆಇಇ ಅಡ್ವಾನ್ಸ್÷್ಡ-೨೦೨೨ ಪರೀಕ್ಷೆಯಲ್ಲಿ ೩೦೦೦ ವಿದ್ಯಾರ್ಥಿಗಳ ಪೈಕಿ ೧೦೧೦(ಶೇ.೩೩.೭) ವಿದ್ಯಾರ್ಥಿಗಳು ಅರ್ಹತೆ ಪಡಿದಿದ್ದಾರೆ. ಎನ್ಇಇಟಿ-೨೦೨೨ ಪರೀಕ್ಷೆಯಲ್ಲಿ ೨೪೮೦೭ ವಿದ್ಯಾರ್ಥಿಗಳ ಪೈಕಿ ೧೯೩೫೨(ಶೇ.೭೮) ವಿದ್ಯಾರ್ಥಿಗಳು ಮುಂದಿನ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾಗಿದ್ದಾರೆ. ಜೆಎನ್ವಿ ನಡೆಸುವ ೧೦ ಮತ್ತು ೧೨ನೇ ತರಗತಿ ಬೋರ್ಡ್ ಕ್ಲಾಸ್ ಪರೀಕ್ಷೆ(೨೦೨೧-೨೨)ಯಲ್ಲಿ ೧೦ನೇ ತರಗತಿಯಲ್ಲಿ ಶೇ.೯೯.೭೧, ೧೨ನೇ ತರಗತಿಯಲ್ಲಿ ಶೇ.೯೮.೯೩ರಷ್ಟು ಫಲಿತಾಂಶ ಬಂದಿದ್ದು, ಪೋಷಕರು ತಮ್ಮ ಮಕ್ಕಳನ್ನು ನವೋದಯ ಶಾಲೆ ಪ್ರವೇಶಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ನವೋದಯ ಶಾಲೆಯ ಪ್ರಾಂಶುಪಾಲ ಜಿ. ಬೀನಾ ತಿಳಿಸಿದ್ದಾರೆ.
ಜಿಎನ್ವಿ ಪ್ರವೇಶಕ್ಕೆ ಆನ್ಲೈನ್
Leave a comment
Leave a comment