ಕಲ್ಬುರ್ಗಿ ನಗರದಲ್ಲಿ ಇಂದು ವಿಶ್ವೇಶ್ವರಯ್ಯ ಭವನದಲ್ಲಿ ಮಹರ್ಷಿ ವೇದವ್ಯಾಸ ಮಂಥನ ಮತ್ತು ಟ್ರಸ್ಟ್ ಕಲ್ಬುರ್ಗಿ ಹಾಗೂ ಸ್ವಾಭಿಮಾನಿ ಶ್ರೀ ವಿಟ್ಟಲ್ ಹೇರೂರು ಮೆಟ್ರಿಕ್ ನಂತರದ ಬಾಲಕರ ಉಚಿತ ವಸತಿ ನಿಲಯ ಕಲಬುರ್ಗಿ ವತಿಯಿಂದ ದಿವಂಗತ ವಿಠ್ಠಲ್ ಹೇರೂರು ಅವರ ಹತ್ತನೇ10ನೇ ಪುಣ್ಯ ಸ್ಮರಣೆ ನಿಮಿತ್ಯ ಒಂದು ದಿನದ ಚಿಂತನ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನ ಅಂಬಿಗರ ಚೌಡಯ್ಯ ವೇದವ್ಯಾಸ ಮಹರ್ಷಿ ,ಮಾತಾ ಮಾಣಿಕೇಶ್ವರಿ ಅಮ್ಮನವರ ಹಾಗೂ ವಿಠ್ಠಲ್ ಹೇರೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವೇದಿಕೆ ಮೇಲಿದ್ದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲ್ಬುರ್ಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಶ್ರೀ ಅಲ್ಲಂಪ್ರಭು ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಸಾಬಣ್ಣ ತಳವಾರ್, ತಿಪ್ಪಣ್ಣಪ್ಪ ಕಮಕನೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಂತಹ ಡಾ. ಮಲ್ಲಿಕಾರ್ಜುನ್ ಮುಕ್ಕಾ ಕಾರ್ಯಕ್ರಮವನ್ನು ಚಾಲನೆ ನೀಡಿದರು.
ಜಾತಿಗಣತಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಕುರಿತು ಕೆಎನ್ ಲಿಂಗಪ್ಪನವರು ಮಾಜಿ ಸದಸ್ಯರು ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇವರು ವಿಷಯ ಮಂಡನೆಯನ್ನು ಮಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾಕ್ಟರ್ ಮುಕ್ಕರ್ ಅವರು ಪೋಲಿ ಸಮಾಜವನ್ನು ಮೌಡುತೆಯಿಂದ ಮೂಢನಂಬಿಕೆಯಿಂದ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬದಲಾಗಬೇಕಾದರೆ ಇಂಥ ಚಿಂತನಾಗೋಷ್ಠಿಗಳು ನಡೆಯಬೇಕು ಎಂದರು.
ನಂತರ ವಿಠ್ಠಲ್ ಹೇರೂರವರು ಸಮಾಜವನ್ನು ಹೇಗೆ ಬಡಿಗೇಬ್ಬಿಸಿದರು ಸಮಾಜವನ್ನು ಮೂಢನಂಬಿಕೆಯಿಂದ ಹೊರ ತರಲು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ ಮಾಡುವುದರ ಮುಖಾಂತರ ಜನರಲ್ಲಿ ಅರಿವು ಮೂಡಿಸುವಂತಹ ಕಾರ್ಯ ಮಾಡುತ್ತಿದ್ದರು ಅವರು ನಮ್ಮನ್ನು ಅಗಲಿ 10 ವರ್ಷ ಗತಿಸಿವೆ ಅವರಿಗೆ ಪೂಜಾ ,ಪುನಸ್ಕಾರ ,ದೀಪ ,ಆರತಿ ಹಚ್ಚುವುದರ ಮುಖಾಂತರ ನಮನ ಸಲ್ಲಿಸಿದರೆ ಸಾಲದು ಇಂತಹ ಚಿಂತನೆಗಳ ಮುಖಾಂತರ ಗಮನ ಸಲ್ಲಿಸಿದಾಗ ಮಾತ್ರ ಅವರಿಗೆ ನಿಜವಾದ ನಮನ ಸಲ್ಲಿಸುವಂತಾಗುತ್ತದೆ ಎಂದರು.
ತದನಂತರ ವಿಧಾನ ಪರಿಷತ್ ಸದಸ್ಯರಾದ ಸಾಬಣ್ಣ ತಳವಾರ ಅವರು ಕೂಡ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಟ್ರಸ್ಟಿನ ಉಪಾಧ್ಯಕ್ಷರಾದ ಅಭಿಷೇಕ್ ಸಂಗವಿಕರ್ ಪ್ರಧಾನ ಕಾರ್ಯದರ್ಶಿಗಳಾದ ಗೀತಾ ಸಹಕಾರದರ್ಶಿ ಅನಸೂಯ ಯಲ್ಲಪ್ಪ ತಳವಾರ್ ಸೇರಿದಂತೆ ಸರ್ವ ಸದಸ್ಯರು ಮತ್ತು ವಿಠ್ಠಲ್ ಹೇರೂರ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.