ತುಮಕೂರು: ನಗರದ ಶ್ರೀ ಸಿದ್ಧಾರ್ಥ ವ್ಯವಹಾರ ನಿರ್ವಹಣೆ ಕೇಂದ್ರವು (ಎಸ್ಎಸ್ಐಬಿಎಂ) ಎರಡು ದಿನಗಳ “ಇನ್ಸ್ಪೆöÊರೋ-೨೦೨೩” ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
“ಇನ್ಸ್ಪೆöÊರೋ-೨೦೨೩” ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ತುಮಕೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎ.ಮೋಹನ ರಾಮ್ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಮೇಣದ ಬತ್ತಿ ಹಲವು ದೀಪಗಳನ್ನು ಬೆಳಗಿಸಬಲ್ಲದು, ಹಾಗೆ ಒಬ್ಬ ಶಿಕ್ಷಕ ನೂರಾರು ವಿದ್ಯಾರ್ಥಿಗಳನ್ನು ಸದೃಢ ನಾಗರಿಕರಾಗಿ ರೂಪಿಸಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ಇದರ ಉಪಯೋಗ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಸಂವಹನ ಅವಶ್ಯಕ, ವಿದ್ಯಾರ್ಥಿಗಳು ಭಾಷಾ ಕೌಶಲ್ಯ ಬೆಳೆಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ವಿದ್ಯಾರ್ಥಿಗಳು ಕೂಡಾ ಓದುವುದರಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು, ಭಾಷೆಯನ್ನು ಪ್ರೀತಿಸಬೇಕು, ಇಂದು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿ ತಮ್ಮ ಚಿಂತನಾ ಕೌಶಲ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಪ್ರತಿದಿನ ತಮ್ಮ ಬಗ್ಗೆ ಮತ್ತು ತಮ್ಮ ವಿದ್ಯಾಭ್ಯಾಸದ ಬಗ್ಗೆ ಪುನರ್ ಪರಿಶೀಲನೆ ಮಾಡಿಕೊಳ್ಳಬೇಕು ಎಂದರು.
ಒಂದು ಮೇಣದ ಬತ್ತಿ ಹಲವು ದೀಪಗಳನ್ನು ಬೆಳಗಿಸಬಲ್ಲದು
Leave a comment
Leave a comment