ತುಮಕೂರಿನ ಸಿದ್ದವಿನಾಯಕ ಸೇವಾ ಮಂಡಳಿಯವರು ತುಮಕೂರು ಹಾಲು ಒಕ್ಕೂಟದ ಸಹಕಾರದೊಂದಿಗೆ ಶಾಲಾಮಕ್ಕಳಿಗಾಗಿ ೧೫ನೇ ವರ್ಷದ ಸ್ಥಳದಲ್ಲಿಯೇ ಗಣೇಶ್ ಚಿತ್ರ ಬಿಡಿಸುವ ಸ್ಪರ್ಧೆಯನ್ನು ವಿನಾಯಕನಗರದ ಶ್ರೀಸಿದ್ದಿವಿನಾಯಕ ಸೇವಾ ಮಂಡಳಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ತುಮಕೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳ ೧ ರಿಂದ ೧೦ನೇ ತರಗತಿಯ ಸುಮಾರು ೩೦೦ ಕ್ಕು ಹೆಚ್ಚು ಮಕ್ಕಳು ಈ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡು,ಗಣೇಶನ ವಿವಿಧ ಚಿತ್ರಗಳ ರಚನೆಯ ಜೊತೆಗೆ, ನಂದಿನಿ ಹಾಲಿನ ಪ್ರಮುಖ ಆಸರೆಯಾದ ಹಸುವಿನ ಚಿತ್ರ ಬಿಡಿಸಿದರು. ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆ ಈ ಮೂರು ವಿಭಾಗಗಳಲ್ಲಿ ಪ್ರಥಮ,ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನ ಸೇರಿದಂತೆ ೨೪ ಬಹುಮಾನಗಳನ್ನು ವಿತರಿಸಲಾಗುತ್ತಿದ್ದು,ಬಹುಮಾನಗಳಲ್ಲಿ ತುಮಕೂರು ಹಾಲು ಒಕ್ಕೂಟ ನೀಡುತ್ತಿದೆ.ಮಕ್ಕಳಿಗೆ ಚಿತ್ರ ಬರೆಯಲು ಬೇಕಾದ ಪರಿಕರಗಳನ್ನ ಸಿದ್ದಿವಿನಾಯಕ ಸೇವಾ ಮಂಡಲಿ ವಿತರಿಸಿದ್ದು,ಚಿತ್ರ ಬರೆದ ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಬಾದಾಮಿ ಹಾಲು ನೀಡಿ ಪ್ರೋತ್ಸಾಹಿಸಲಾಯಿತು.ಈ ವೇಳೆ ತುಮಲ್ ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ದೇವರಾಜು, ಸಿದ್ದಿವಿನಾಯಕ ಸೇವಾ ಮಂಡಳಿಯ ಅಧ್ಯಕ್ಷರಾದ ಜಿ.ಎಸ್.ಪರಮಶಿವಯ್ಯ,ಉಪಾಧ್ಯಕ್ಷರಾದ ಹೆಚ್.ಆರ್,ನಾಗೇಶ್, ಕಾರ್ಯದರ್ಶಿ ರಾಘವೇಂದ್ರ ರಾವ್ ಕೆ.ಎಸ್., ಸಹಕಾರ್ಯ ದರ್ಶಿ ಜಗಜ್ಯೋತಿ ಸಿದ್ದರಾಮಯ್ಯ,ಖಜಾಂಚಿ ಪ್ರಭು.ಎಸ್.ಟಿ,ನಿರ್ದೇಶಕರಾದ ಲಿಂಗಪ್ಪ.ಟಿ.ಎA, ಪ್ರಸನ್ನಕುಮಾರ್ ಟಿ.ಹೆಚ್, ಸಿದ್ದರಾಜು.ಜಿ.ಎಸ್, ನರಸಿಂಹಮೂರ್ತಿ,ನಟರಾಜು.ಟಿ.ಆರ್,ಮಹೇಶ್,ಟಿ.ಎಸ್,ಡಾ.ಎಸ್.ವಿ.ವೆAಕಟೇಶ್,ಹೇಮರಾಜು ಸಿಂಚ, ವಿಜಯಕುಮಾರ್.ಎ.ಎಸ್, ವೆಂಕಟೇಶ್ಬಾಬು.ಟಿ.ಆರ್, ಪದ್ಮರಾಜ್ ಟಿ.ಕೆ, ಉಮಾಶಂಕರ್,ಎA.ಎಸ್., ಆರ್.ಎಲ್.ರಮೇಶ್ ಬಾಬು,ಡಾ.ಅನುಸೂಯ ರುದ್ರಪ್ರಸಾದ್, ಶ್ರೀಮತಿ ರೇಣುಕಾ ಪರಮೇಶ್, ಶ್ರೀಮತಿ ಇಂದ್ರಾಣಿ ಮತ್ತಿತರರು ಉಪಸ್ಥಿತರಿದ್ದರು.