ಪತ್ತಿನ ಸಹಕಾರ ಸಂಘಗಳು,
ತುಮಕೂರು:ಪತ್ತಿನ ಸಹಕಾರ ಸಂಘಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊAಡು ೨೦೨೩ರ ಡಿಸೆಂಬರ್ ೨ ಮತ್ತು ೩ ರಂದು ದೆಹಲಿಯಲ್ಲಿ ಪತ್ತಿನ ಸಂಘಗಳ ಬೃಹತ್ ಸಮಾವೇಶವನ್ನು ಸಹಕಾರಿ ಭಾರತಿ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಪತ್ತಿನ ಸಂಘಗಳ ಮಹಾಮಂಡಳ ನಿ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ರಾಜ್ಯದ ಸಹಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ರಾಜ್ಯ ಸಹಕಾರಿ ಪತ್ತಿನ ಸಂಘಗಳ ಮಹಾಮಂಡಳ, ನಿರ್ದೇಶಕ ಹಾಗೂ ರಾಜ್ಯ ಸಂಯೋಜಕ ಜಿ.ಮಲ್ಲಿಕಾರ್ಜುನಯ್ಯ ಮನವಿ ಮಾಡಿದ್ದಾರೆ.
ಗುರುಕುಲ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಪತ್ತಿನ ಸಹಕಾರಿ ಸಂಘಗಳು ಡಿಫಾಸಿಟ್ ಇನ್ಸೂರೆನ್ಸ್ ಲಾಭ ಪಡೆಯುವುದು,ಅದಾಯ ತೆರಿಗೆ ಇಲಾಖೆಯ ಕಿರುಕುಳ ತಪ್ಪಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು,ಇವುಗಳ ಕುರಿತು ಚರ್ಚೆ ನಡೆಸಿ,ಕೇಂದ್ರದ ಸಹಕಾರಿ ಸಚಿವರಾದ ಅಮಿತ್ ಷಾ ಅವರ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ಸಮಾವೇಶ ಸಹಕಾರಿಯಾಗಲಿದೆ ಎಂದರು.
ಡಿಸೆAಬರ್ ೨ಮತ್ತು ೩ ರಂದು ದೆಹಲಿಯಲ್ಲಿ ನಡೆಯುವ ಪತ್ತಿನ ಸಹಕಾರಿಗಳ ಸಮಾವೇಶದಲ್ಲಿ ಕನಿಷ್ಠ ೧೦ ಮಂದಿ ಸೇರುವ ನಿರೀಕ್ಷೆಯಿದೆ.ಸಮಾವೇಶದಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಷಾ ಅವರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.ಈ ಸಂಬAಧ ರಾಜ್ಯದ ಸುಮಾರು ೨೦೦೦ಕ್ಕೂ ಹೆಚ್ಚು ಜನ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಚಲೋ ದಿಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಪತ್ತಿನ ಸಹಕಾರಿಗಳೆಲ್ಲರೂ ಸ್ವಯಂ ಪ್ರೇರಿತರಾಗಿ ಚಲೋ ದಿಲ್ಲಿಯಲಿ ಪಾಲ್ಗೊಳ್ಳುವಂತೆ ಜಿ.ಮಲ್ಲಿಕಾರ್ಜುನಯ್ಯ ಕೋರಿದರು.