ಇಂದು ತುಮಕೂರಿನ ಮಾದಿಗ ಸಮುದಾಯ ಅತೀ ಹೆಚ್ಚಾಗಿ ವಾಸಿಸುವ ಎನ್.ಆರ್ ಕಾಲೋನಿಯ ಗ್ರಾಮದೇವತೆಗಳಾದ ಶ್ರೀ ದುರ್ಗಮ್ಮ, ಶ್ರೀ ಪೂಜಮ್ಮ ಮತ್ತು ಶ್ರೀ ದಾಳಮ್ಮ ಪೂಜೆ ಸಲ್ಲಿಸಿದ ಎನ್.ಆರ್ ಕಾಲೋನಿ ಮುಖಂಡರು ಸಂವಿಧಾನ ರಕ್ಷಣೆಗಾಗಿ-ಬಡಜನರ ಸಾಮಾಜಿಕ ನ್ಯಾಯದ ಉಳಿವಿಗಾಗಿ ಕಾಂಗ್ರೇಸ್ ಪರ ಮನೆಮನೆಗೆ ಜಾಗೃತಿ ಕೈಗೊಳ್ಳುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಹಿರಿಯ ಚಿಂತಕರಾದ ಕೆ.ದೊರೈರಾಜ್ ಚಾಲನೆ ನೀಡಿ ಮಾತನಾಡಿದರು ಸಂವಿಧಾನ ಧ್ವನಿ ಇಲ್ಲದ ಅಸ್ಪೃಷ್ಯ ಜಾತಿಗಳಿಗೆ ಬದುಕುವ ಸಮಾನತೆಯ ಹಕ್ಕು ನೀಡಿದೆ 2025ಕ್ಕೆ 100 ವರ್ಷ ಆರ್ಎಸ್ಎಸ್ಗೆ ತುಂಬುತ್ತಿದ್ದು ಅಂಬೇಡ್ಕರ್ ಬರೆದ ಸಂವಿಧಾನವನ್ನು ಒಪ್ಪಿಕೊಳ್ಳದ ಸಂಘಪರಿವಾರ ಪುನಃ ಸನಾತನ ಧರ್ಮವನ್ನು ಜಾರಿಗೆ ತರಲು ಮುಂದಾಗಿದೆ ಹಾಗಾಗಿ ಎನ್.ಆರ್ ಕಾಲೋನಿಯ ಯುವಜನರು ,ಮಹಿಳೆಯರು, ಮುಖಂಡರು ಬಿಜೆಪಿಯ ಈ ಮುಖವಾಡವನ್ನು ಬಯಲುಗೊಳಿಸಲು ಮನೆ ಮನೆಗೆ ತೆರಳಿ ಜಾಗೃತಿ ಮಾಡಿ ಕಾಂಗ್ರೇಸ್ ಪರವಾದ ಮತಚಲಾಯಿಸಲು ಪ್ರೇರೆಪಿಸಬೇಕೆಂದು ಕರೆ ನೀಡಿದ್ದರು.