ಇಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ೧೫೪ನೇ ಗಾಂಧಿ ಜಯಂತಿ ಅಂಗವಾಗಿ ತುಮಕೂರು ಶಿರಾಗೇಟ್ನ ಎಸ್.ಎನ್ ಪಾಳ್ಯ ಸ್ಲಂನಲ್ಲಿ ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಇತ್ತೀಚಿಗೆ ರಾಜ್ಯ ಸರ್ಕಾರದ ಅಬಕಾರಿ ಸಚಿವರು ಒಂದು ಸಾವಿರ ಮಧ್ಯದ ಅಂಗಡಿ ಲೈಸೆನ್ಸ್ ನೀಡುವ ಬಗ್ಗೆ ಮಾದ್ಯಮಗಳಿಗೆ ಹೇಳಿಕೆ ನೀಡಿರುವುದು ಬಡಜನ ವಿರೋಧಿ ನೀತಿಯಾಗಿರುವುದು ವಿಶೇಷವಾಗಿ ನಗರಪ್ರದೇಶಗಲ್ಲಿ ಕೂಲಿ ಮಾಡುವ ಬಡಜನರ ನೆಮ್ಮದಿಯ ಜೀವನವನ್ನು ಹಾಳು ಮಾಡುವ ನೀತಿಗೆ ದಿಕ್ಕಾರ ಜನತೆಯನ್ನು ನಶೆಗೆ ತಳ್ಳುವ ಸರ್ಕಾರದ ನಡೆಯಿಂದ ಹಿಂದೆ ಬರಬೇಕು, ನಾಗರೀಕ ಸಮಾಜಕ್ಕೆ ಬೇಕಿರುವುದು ನೀರು,ನೈರ್ಮಲ್ಯ, ಆರೋಗ್ಯ ಮತ್ತು ಆಹಾರ ಈ ಅಂಶಗಳನ್ನು ಸರ್ಕಾರಗಳು ಬಲಿಷ್ಠಗೊಳಿಸಬೇಕೆ ಹೊರತು ಮಧ್ಯದ ನಶೆಯನ್ನಲ್ಲ.. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಬೇಕೆಂದು ಸ್ಲಂ ಜನರು ಒತ್ತಾಯಿಸುತ್ತಿದ್ದೇವೆ. ಈ ನಡೆಯಿಂದ ಸರ್ಕಾರ ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ಜನಾಂದೋಲನ ಹಮ್ಮಿಕೊಂಡು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಭಾರತಕ್ಕೆ ಮಾಧರಿಯಾಗಿದ್ದು ಈ ಮಾಧರಿಯ ಹಲವಾರು ಸಮಸ್ಯೆಗಳು ಮತ್ತು ವೈರುಧ್ಯಗಳನ್ನು ಸೃಷ್ಠಿಸುತ್ತಿವೆ ಜನೋಪಕಾರಿ ೫ ಗ್ಯಾರಂಟಿಗಳನ್ನು ಆಧರಿಸಿ ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕರ್ನಾಟಕದ ಮಾಧರಿ ಅಭಿವೃದ್ಧಿ ಮತ್ತು ಫ್ಯಾಸಿಸಂಗೆ ಪ್ರತಿರೋಧವೆಂಬ ಪ್ರತಿಪಾಧನೆಗಳು ದೇಶಾದ್ಯಂತ ಚರ್ಚೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮಧ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದರೇ ಫ್ಯಾಸಿಸಂ ಮತ್ತು ಬಡಜನರ ಅಭಿವೃದ್ಧಿ ವಿರೋಧಿಗಳಿಗೆ ಉತ್ಪೆçÃಕ್ಷೆಯಾಗಬೇಕಾಗುತ್ತದೆ ಎಂದರು.
ಜಿಲ್ಲಾ ಸಮಿತಿಯ ಕಾರ್ಯಕರ್ತರಾದ ಗುಲ್ನಾಜ್ ಮತ್ತು ಹನುಮಕ್ಕ ಸರ್ಕಾರ ಗೃಹಲಕ್ಷಿö್ಮÃ, ಗೃಹ ಜ್ಯೋತಿ ಮತ್ತು ಅನ್ನ ಭಾಗ್ಯದಿಂದ ಬಡಜನರಿಗೆ ಅನುಕೂಲವಾಗಿದೆ, ಗಿರಾಣಿ ಅಂಗಡಿಗಳಲ್ಲಿ ಮಧ್ಯ ಮಾರಾಟಕ್ಕೆ ಮುಂದಾದರೇ ನಮ್ಮ ಕುಟುಂಬದ ಆಧಾಯ ಲಿಕ್ಕರ್ ಪಾಲಾಗುತ್ತದೆ ಹಾಗಾಗಿ ರೇಷನ್ ಅಂಗಡಿಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸರ್ಕಾರ ಚಿಂತಿಸಬೇಕೆAದರು.
ಕಾರ್ಯದರ್ಶಿ ಅರುಣ್ ಮತ್ತು ಉಪಾಧ್ಯಕ್ಷರಾದ ಶಂಕರಯ್ಯ ಮಾತನಾಡಿ ಈ ಜಾಗೃತಿ ಸಭೆಯನ್ನು ತುಮಕೂರಿನ ೨೦ ಸ್ಲಂಗಳಿಗೂ ಮೇಲ್ಪಟ್ಟು ತುಮಕೂರು ಸ್ಲಂ ಸಮಿತಿಯಿಂದ ಹಮ್ಮಿಕೊಳ್ಳುತ್ತಿದ್ದು ಸರ್ಕಾರದ ನಡೆಯಿಂದ ಬೇಸರವಾಗಿದೆ, ಮಧ್ಯಕ್ಕೆ ಬದಲಾಗಿ ಬಡತನವನ್ನು ಕಡಿಮೆ ಮಾಡುವ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಇನ್ನಷ್ಟು ಹೆಜ್ಜೆ ಹಿಡುವ ಜೊತೆಗೆ ಕೊಳಗೇರಿಗಳಿಗೆ ಮೂಲ ಸೌಕರ್ಯ ಕಲ್ಪಿಸಿಕೊಡಬೇಕೆಂದು ಒತ್ತಯಿಸಿದರು.
ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ತಿರುಮಲಯ್ಯ, ಕೃಷ್ಣಮೂರ್ತಿ, ಮುಬಾರಕ್, ಹಾಗೂ ಜಿ.ಜಿ.ವಿ ಎಜುಕೇಷನ್ ಅಂಡ್ ರೂರಲ್ ಡೆವಲಪ್ಮೆಂಟ್ನ ಸೊಸೈಟಿಯ ಮೋಹನ್ಕುಮಾರ್ ಮತ್ತು ಶಿವಪ್ಪ ಮತ್ತು ಎಸ್.ಎನ್ ಪಾಳ್ಯ ಸ್ಲಂ ಶಾಖಾ ಮುಖಂಡರಾದ ಗುಲ್ನಾಜ್, ಜಯಣ್ಣ, ಸೈಯದ್ಪೀರ್, ರಫೀಕ್, ಹನುಮಕ್ಕ, ಲಕ್ಷö್ಮಮ್ಮ, ಜಯಮ್ಮ, ಲಲಿತಮ್ಮ, ರೆಹಮಾನ್, ಮುಮ್ತಾಜ್ ಮುಂತಾದವರು ಪಾಲ್ಗೊಂಡಿದ್ದರು.
ಮಧ್ಯದಂಗಡಿಗಳು ಬೇಡ ನೀರು ಆರೋಗ್ಯ, ಆಹಾರ ನೀಡಿ
Leave a comment
Leave a comment