ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತುಮಕೂರು ಜಿಲ್ಲಾ ಶಾಖೆಯ ಮಾಸಿಕ ಸಭೆಯಲ್ಲಿ ತುಮಕೂರು ವಿಶ್ವ ವಿದ್ಯಾನಿಲಯದ ಗೌರವ ಡಾಕ್ಟರೇಟ್ ಪಡೆದ ಸಮಾಜ ಸೇವಾ ಕರ್ತರು,ರೈಸ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷರು,ಸಂಸ್ಕಾರ ಭಾರತೀ ಮುಂತಾದ ಸಂಸ್ಥೆಗಳಲ್ಲಿ ಸೇವಾ ನಿರತರಾಗಿರುವ ಡಾ. ಆರ್.ಎಲ್.ರಮೇಶ್ ಬಾಬು ಅವರನ್ನು ಅಭಿನಂದಿಸಿ,ಗೌರವ ಸನ್ಮಾನ ನೀಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಬಡತನದಿಂದ ಬಂದ ತಾವು ಚಿಕ್ಕಂದಿನಲ್ಲಿ ಶಿಕ್ಷಕರು ಹೇಳುತ್ತಿದ್ದ ರಾಮಾಯಣ ಮತ್ತು ಮಹಾಭಾರತ ಕಥೆಗಳನ್ನು ಕೇಳುತ್ತಾ ಉತ್ತಮ ಸಂಸ್ಕಾರ ಬಂದ ಪರಿಣಾಮ ಇಂದು ಈ ಸ್ಥಿತಿಯಲ್ಲಿ ನಿಲ್ಲಲು ಕಾರಣ ವಾಗಿದೆ ಎಂದು ತಮ್ಮ ಸಾಧನೆಯ ಪರಿಶ್ರಮವನ್ನು ಹಂಚಿಕೊAಡರು.
ರೈಸ್ ಮಿಲ್ ಬೆಳೆದು.ಬಂದ ರೀತಿ,ಅದರ ಮೂಲಕ ಸಂಪಾದಿಸಿದ ಹಣ ಮತ್ತು ಕೀರ್ತಿ ಕೇವಲ ತನಗೋಸ್ಕರ ತಾನು ಬದುಕುವುದಲ್ಲಾ ಸಮಾಜಕ್ಕಾಗಿ ಬದುಕುವುದರ ಲ್ಲಿ.ಸಾರ್ಥಕತೆ ಇದೆ. ಸಾವಿರಾರು ವರ್ಷ ಗಳಿಂದ ಸನಾತನ ರು ಪ್ರಾಪಂಚಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಅವಲೋಕನ ಮಾಡಿ ಎಸ್ಟೊಂದು ಮೌಲ್ಯಗಳನ್ನು ನಮಗೆ ಬಿಟ್ಟಿದ್ದಾರೆ.ಅದರಂತೆ ನಡೆಯೋಣ ಎಂದು ತಿಳಿಸಿದರು. ಬ್ಯಾಂಕಿನ ಮೆನೇಜರ್ ತೇಜಸ್ವಿನಿ, ಶ್ರೀನಾಥ್,ಅಶೋಕ್,ಶಶಿಧರ್ ಇವರುಗಳು ತಮ್ಮ ಬ್ಯಾಂಕಿನ ಕಾರ್ಯ ಚಟುವಟಿಕೆ ಸಾಲ,ಬಡ್ಡಿ ವಿವರ,ಹಾಗೂ ಅನುಕೂಲತೆಗಳನ್ನು ಕುರಿತು ತಿಳಿಸಿದರು. ಸಂಘದ ಅಧ್ಯರಾದ ಬಾ. ಹ.ರಮಾ ಕುಮಾರಿ ಯವರು ಅಧ್ಯಕ್ಷತೆ.ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಪುಟ್ಟ ನರಸಯ್ಯ ಅವರು ಸ್ವಾಗತಿಸಿ ವಂದಿಸಿದರು.
ನಾವು ಎಷ್ಟೇದುಡಿದರೂ ಸಮಾಜಕ್ಕೆ.ಋಣಿಯಾಗಿರಬೇಕು.

Leave a comment
Leave a comment