ತುಮಕೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತುಮಕೂರು ತಾಲೂಕು ಸ್ಥಳೀಯ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ನಗರದ ಉಪ್ಪಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸಸಿಗಳನ್ನು ನೆಡುವುದರೊಂದಿಗೆ ಶಾಲೆಯ ಪರಿಸರ ಸ್ವಚ್ಛ ಮಾಡುವ ಮೂಲಕ ಇಂದು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷರಾದ ಉಪ್ಪಾರಹಳ್ಳಿ ಕುಮಾರ್ರವರು ಮಾತನಾಡಿ ಪ್ರಸ್ತುತ ಜಗತ್ತಿನಲ್ಲಿ ಪರಿಸರ ನಾಶ ಸಿಕ್ಕಾಪಟ್ಟೆ ಆಗುತ್ತಿದೆ, ಅದರಿಂದಲೇ ಪ್ರಕೃತಿ ವಿಕೋಪಗಳು ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವುದು, ನಾವುಗಳು ಪರಿಸರವನ್ನು ಸಂರಕ್ಷಣೆ ಮಾಡುವುದನ್ನು ಬಿಟ್ಟು ಅದನ್ನು ವಿನಾಶ ಮಾಡುವುದರಲ್ಲಿಯೇ ಮುಂದೆ ಇದ್ದೇವೆ, ಆದುದರಿಂದ ಮಕ್ಕಳು ಜಾಗೃತರಾಗಿ ಸಸ್ಯ ಸಂಕುಲವನ್ನು ರಕ್ಷಿಸುವುದರೊಂದಿಗೆ ಇತರರಿಗೆ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸ ನಮ್ಮಿಂದ ಆಗಬೇಕಿದೆ ಎಂದು ಹೇಳಿದರು, ಜೊತೆಗೆ ನಾವು ಇಂದು ಶಾಲೆಯಲ್ಲಿ ಸಸಿಯನ್ನು ನೆಟ್ಟ ಮಾತ್ರಕ್ಕೆ ಸಾಲದು ಅದನ್ನು ಪೋಷಿಸಬೇಕು ಎಂದು ಸಹ ಕಿವಿ ಮಾತುಗಳನ್ನು ಮಕ್ಕಳಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಉಪ್ಪಾರಹಳ್ಳಿ ಕುಮಾರ್, ತಾಲ್ಲೂಕು ಸ್ಥಾನಿಕ ಆಯುಕ್ತಾರಾದ ಈಶ್ವರಯ್ಯ, ಕಾರ್ಯದರ್ಶಿಗಳಾದ ಬಿ.ಎಸ್.ದಯಾನಂದ್, ಖಜಾಂಚಿ ನಂದಿನಿ ಮತ್ತು ಶಾಲೆಯ ಶಿಕ್ಷಕ ವೃಂದದವರು ಭಾಗವಹಿಸಿದ್ದರು.
ಪರಿಸರ ನಾಶದಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ ; ಉಪ್ಪಾರಹಳ್ಳಿ ಕುಮಾರ್
Leave a comment
Leave a comment