ಡಿಸೆಂಬರ್ ೯ರಂದು ರಾಷ್ಟ್ರೀಯ ಲೋಕ್ ಅದಾಲತ್ತುಮಕೂರು, ಅ.೧೧- ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಡಿ.೯ ರಂದು ತುಮಕೂರು ಜಿಲ್ಲೆಯಾದ್ಯಂತ ಇರುವ ಎಲ್ಲಾ ನ್ಯಾಯಾಲಯಗಳಲ್ಲಿ ೪ನೇ ಮತ್ತು ಈ ವರ್ಷದ ಕಡೆಯ ರಾಷ್ಟಿçÃಯ ಲೋಕ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಬಿ.ಗೀತಾ ರವರು ತಿಳಿಸಿದರು. ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕ್ ಅದಾಲತ್ನ ಮೂಲ ಉದ್ದೇಶ ಪಕ್ಷಗಾರರು ರಾಜೀ ಅಥವಾ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಯಾವುದೆ ಶುಲ್ಕವಿಲ್ಲದೆ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ದು, ಪಕ್ಷಗಾರರ ಮಧ್ಯದಲ್ಲಿರುವ ವೈಮನಸ್ಸು ಕಡಿಮೆ ಮಾಡಿ ಸೌಹಾರ್ಧತೆ ಹೆಚ್ಚಾಗುತ್ತದೆ. ಇದರಿಂದ ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಹೆಚ್ಚು ಅವಶ್ಯಕತೆ, ಕಾನೂನಿನ ಸಂಕೀರ್ಣತೆ ಇರುವಂತಹ ಪ್ರಕರಣಗಳಿಗೆ ನ್ಯಾಯಾಧೀಶರು ಹೆಚ್ಚು ಒತ್ತು ಕೊಟ್ಟು ಚಾಲ್ತಿಯಲ್ಲಿರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ ಎಂದರು. ೧ ವರ್ಷದ ಅವಧಿಯಲ್ಲಿ ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ೪ ರಾಷ್ಟಿçÃಯ ಜನತಾ ನ್ಯಾಯಾಲಯ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದ್ದು, ಡಿಸೆಂಬರ್ ೯ ರಂದು ನಡೆಯುವ ಜನತಾ ನ್ಯಾಯಾಲಯ ಈ ವರ್ಷದ ಕೊನೆಯ ಹಾಗೂ ೪ನೇ ಕಾರ್ಯಕ್ರಮವಾಗಿರುತ್ತದೆ. ಉಭಯ ಪಕ್ಷಗಾರರು ಲೋಕ ಅದಾಲತ್ನ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸೆ.೯ರಂದು ನಡೆದಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ೯೩,೨೧೯ ಪ್ರಕರಣಗಳಲ್ಲಿ ೧೦೪೬೮ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ೧,೬೧,೭೯೫ ಪ್ರಕರಣಗಳು ವಿಲೇವಾರಿ ಮಾಡಲಾಗಿದ್ದು, ಒಟ್ಟು ೧,೭೨,೨೬೩ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಜೊತೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ೧೨ ಜೋಡಿಗಳನ್ನು ಮತ್ತೆ ಒಂದು ಮಾಡಲಾಗಿದೆ ಎಂದರು. ಲೋಕ್ ಅದಾಲತ್ನಲ್ಲಿ ತೀರ್ಮಾನವಾದ ಪ್ರಕರಣಗಳು ಯಾವುದೇ ರೀತಿಯ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಈ ತೀರ್ಪಿಗೆ ಕಾನೂನಿನ ಸಂಪೂರ್ಣ ಮಾನ್ಯತೆ ಇದ್ದು ಇತ್ಯರ್ಥ ಪ್ರಕರಣಗಳಲ್ಲಿ ಸಂಪೂರ್ಣ ಶುಲ್ಕವನ್ನು ವಾಪಸ್ ಪಡೆಯಬಹುದಾಗಿದ್ದು, ಯಾವುದೇ ಪಕ್ಷಗಾರರಿಗೆ ಅನ್ಯಾಯವಾಗಿದ್ದಲ್ಲಿ ಅಥವಾ ಗಮನಕ್ಕೆ ತರದೆ ರಾಜಿಮಾಡಿಕೊಂಡಿದ್ದಲ್ಲಿ ಅಂತಹ ಸಂದರ್ಭದಲ್ಲಿ ಅನ್ಯಾಯಕ್ಕೆ ಒಳಗಾದ ಕಕ್ಷಿದಾರರು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದರು. ತೀವ್ರ ಸ್ವರೂಪದ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ರಾಜಿ ಮಾಡಿಕೊಳ್ಳಬಹುದಾದ ಎಲ್ಲಾ ಪ್ರಕರಣಗಳನ್ನು ಲೋಕ್ ಅದಾಲತ್ನಲ್ಲಿ ಇತ್ಯರ್ಥಪಡಿಸಲಾಗುವುದು ಎಂದರು. ಸಾರ್ವಜನಿಕರ ಅನುಕೂಲಕ್ಕಾಗಿ ನ್ಯಾಯಾಲಗಳ ಬಿಡುವಿನ ವೇಳೆಯಲ್ಲಿ ಪ್ರತಿದಿನ ಬೈಠಕ್ಗಳನ್ನು ನಡೆಸಿ, ಉಭಯ ಪಕ್ಷಗಾರರೊಂದಿಗೆ ಪ್ರಕರಣಗಳಿಗೆ ಸಂಬAಧಿಸಿದAತೆ ಚರ್ಚಿಸಿ, ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ, ಜನತಾ ನ್ಯಾಯಾಲಯದಲ್ಲಿ ರಾಜೀಸಂದಾನ ಮಾಡಿಕೊಳ್ಳುವಂತೆ ಅವರ ಮನ ಒಲಿಸುತ್ತಿರುವುದಾಗಿ ತಿಳಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ನೂರುನ್ನೀಸಾರವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.