ತುಮಕೂರು ಜಿಲ್ಲಾ ಚಾಲನ ತರಬೇತಿ ಶಾಲೆಗಳ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಚಾಲನ ತರಬೇತಿ ಶಾಲೆಗಳ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಮಾತನಾಡಿ,ಚಾಲನಾ ಕ್ಷೇತ್ರದಲ್ಲಿ ಡ್ರೆöÊವಿಂಗ್ ಕ್ಲಾಸ್ಗಳ ಪಾತ್ರ ಮಹತ್ವದ್ದಾಗಿದ್ದು,ವಾಹನ ಚಾಲನೆಯಲ್ಲಿ ಆತ ಎಷ್ಟೇ ಪ್ರಾವಿಣ್ಯತೆಯನ್ನು ಖಾಸಗಿಯಾಗಿ ಹೊಂದಿದ್ದರೂ ಸಹ ಎಲ್.ಎಲ್.ಆರ್, ಡ್ರೆöÊವಿಂಗ್ ಲೈಸನ್ಸ್,ಬ್ಯಾಡ್ ಪಡೆಯಲು ಡ್ರೆöÊವಿಂಗ್ ಸ್ಕೂಲ್ಗಳನ್ನೇ ಹೆಚ್ಚು ಆಶ್ರಯಿಸುವುದನ್ನು ಕಾಣಬಹುದಾಗಿದೆ.ಹಾಗಾಗಿ ಚಾಲನಾ ತರಬೇತಿ ನೀಡುವ ಶಾಲೆಯಲ್ಲಿ ಒಳ್ಳೆಯ ಟ್ರೆöÊನರ್ ಇದ್ದರೆ,ಅಲ್ಲಿ ಕಲಿತ ಪ್ರತಿಯೊಬ್ಬರು ಉತ್ತಮ ಚಾಲಕರಾಗಿ ಹೊರಹೊಮ್ಮಲು ಸಾಧ್ಯ.ಈ ನಿಟ್ಟಿನಲ್ಲಿ ಎಲ್ಲಾ ಡ್ರೆöÊವಿಂಗ್ ಸ್ಕೂಲ್ಗಳ ಮಾಲೀಕರು ತಾವು ತರಬೇತಿ ನೀಡುವ ಸಂದರ್ಭದಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಗುಣಮಟ್ಟದ ತರಬೇತಿ ನೀಡುವಂತೆ ಸಲಹೆ ನೀಡಿದರು.
ತುಮಕೂರು ಜಿಲ್ಲಾ ಚಾಲನಾ ತರಬೇತಿ ಶಾಲೆಗಳ ಸಂಘದ ಗೌರವಾಧ್ಯಕ್ಷ ಟಿ.ಆರ್.ಸದಾಶಿವಯ್ಯ ಮಾತನಾಡಿ,ಡ್ರೆöÊವಿಂಗ್ ಸ್ಕೂಲ್ಗಳು ಸಮಾಜಕ್ಕೆ ಉತ್ತಮ ಚಾಲಕರನ್ನು ನೀಡುವತ್ತಾ ಅತ್ಯಂತ ಜವಾಬ್ದಾರಿಯುತ ಕಾರ್ಯನಿರ್ವಹಿಸಬೇಕಿದೆ. ಕಾಟಾಚಾರಕ್ಕೆ ತರಬೇತಿ ನೀಡಿ, ಅರ್ಧ ಕಲಿತವರಿಗೆ ಡ್ರೆöÊವಿಂಗ್ ಲೈಸನ್ಸ್ ನೀಡುವುದರಿಂದ ಅಪಘಾತಗಳ ಹೆಚ್ಚಾಗಿ, ಸಮಾಜದಲ್ಲಿ ಸಾವು, ನೋವುಗಳ ಸಂಖ್ಯೆ ಹೆಚ್ಚಲಿದೆ.ಇದನ್ನು ತೆಡೆಯುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಅಲ್ಲದೆ ಆಸಕ್ತರಿಗೆ ಸೂಕ್ತ ತರಬೇತಿ ನೀಡಿ, ಅವರು ನಿರುದ್ಯೋಗಿಗಳಾಗದೆ ಉದ್ಯೋವಂತರನ್ನಾಗಿ ಮಾಡುವ ಕೆಲಸವೂ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಪಿ.ಮೂರ್ತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ತುಮಕೂರು ಜಿಲ್ಲಾ ಚಾಲನಾ ತರಬೇತಿ ಶಾಲೆಗಳ ಸಮಘದ ಗೌರವಾಧ್ಯಕ್ಷರಾದ ಟಿ.ಆರ್.ಸದಾಶಿವಯ್ಯ,ಅಧ್ಯಕ್ಷರಾದ ಆ ಶಿವಕುಮಾರ್ ಉಪಾಧ್ಯಕ್ಷರಾದ ಸುರೇಶ,ಕಾರ್ಯದರ್ಶಿ ಬಸವರಾಜ್,ಖಜಾಂಚಿ ಊಖ ನಾಗೇಶ್ ಇನ್ನು ಮುಂತಾದವರು ಭಾಗವಹಿಸಿದ್ದರು.
ರಾಷ್ಟ್ರೀಯ ಚಾಲನ ತರಬೇತಿ ಶಾಲೆಗಳ ದಿನಾಚರಣೆ
Leave a comment
Leave a comment