ತುಮಕೂರು.ನ.೧೩:ಸಹಕಾರಿ ಮಹಾಮಂಡಳದವತಿಯಿAದ ೭೦ನೇ ರಾಷ್ಟ್ರೀಯ ಸಹಕಾರ ಸಪ್ತಾಹ ಪಂಡಿತ ಜವಹರ್ಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ ೧೪ ರಿಂದ ಒಂದು ವಾರಗಳ ಕಾಲ ನಡೆಯಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಕ್ಯಾತ್ಸಂದ್ರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು,ನವೆಂಬರ್ ೧೪ ರಂದು ಶಿವಮೊಗ್ಗದಲ್ಲಿ ಆರಂಭವಾಗುವ ಸಪ್ತಾಹದ ಕಾರ್ಯಕ್ರಮಗಳು,ನವೆಂಬರ್ ೧೫ ರಂದು ರಾಯಚೂರು,ನ.೧೬ರಂದು ಕಲ್ಲಗಟಗಿ,೧೭ರಂದು ಶಿರಸಿ,೧೮ ರಂದು ಮಂಗಳೂರು, ೧೯ ಬೆಂಗಳೂರು ಮತ್ತು ೨೦ರಂದು ಬಿಜಾಪುರದಲ್ಲಿ ನಡೆಯಲಿದೆ.ಒಂದೊAದು ದಿನ ಒಂದೊAದು ವಿಚಾರದ ಬಗ್ಗೆ ಸಹಕಾರ ಕ್ಷೇತ್ರದ ತಜ್ಞರು ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರಿಗೆ ಮತ್ತು ಸಹಕಾರಿ ಕ್ಷೇತ್ರದ ಸದಸ್ಯರುಗಳಿಗೆ ಸಹಕಾರಿ ಆಂದೋಲನದ ಬಗ್ಗೆ ಮಾಹಿತಿ ನೀಡಲಿದ್ದಾರೆ.ನವೆಂಬರ್ ೨೦ ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಹಕಾರಿ ರತ್ನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಲಿದ್ದಾರೆ ಎಂದರು.
ರಾಜ್ಯ ಸಹಕಾರಿ ಮಹಾಮಂಡಳ ಹಾಗೂ ಸ್ಥಳೀಯ ಸಹಕಾರಿ ಸಂಸ್ಥೆಗಳ ಮೂಲಕ ನಡೆಯುವ ಈ ಕಾರ್ಯಕ್ರಮಕ್ಕೆ ಸಹಕಾರ ಇಲಾಖೆ ಮೊದಲಿನಿಂದಲೂ ಸಹಕರಿಸುತ್ತಾ ಬಂದಿದೆ.
ರಾಷ್ಟ್ರೀಯ ಸಹಕಾರ ಸಪ್ತಾಹ
Leave a comment
Leave a comment