ತುಮಕೂರು: ಇಲ್ಲಿನ ಅಗಳಕೋಟೆಯ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎದುಕೇಶನ್ (ಸಾಹೇ) ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಪುರುಷರ ನೆಟ್ಬಾಲ್ ಚಾಂಪಿಯನ್ಶಿಪ್–2024 ಇಂದಿನ ಅಂತಿಮ ಹಣಾಹಣಿಯಲಿ ಹಿಂದಿನ ವರ್ಷದ ಚಾಂಪಿಯನ್ಸ್ ಬೆಂಗಳೂರು ವಿಶ್ವವಿದ್ಯಾಲಯವನ್ನು ಮಣಿಸಿದ ಮಂಗಳೂರು ವಿಶ್ವವಿದ್ಯಾಲಯ ಚಾಂಪಿಯನ್ಸ್ ಪಟ್ಟ ಧರಿಸಿತು.
ಅಂತಿಮ ದಿನದಾಟ (ಶುಕ್ರವಾರ 15/03/2024) ಲೀಗ್ ಹಂತದ ಅಂತಿಮ ಹಣಾಹಣಿಯು ಬಹಳ ಪೈಪೋಟಿಯಿಂದ ಕೂಡಿದ ಸ್ಪರ್ದೆಯಾಗಿತ್ತು. 2024ರ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಮೊದಲೆರಡು ಸ್ಥಾನ ಪಡೆದ ಎರಡು ತಂಡಗಳ ಜೊತೆಗೆ ಪ್ರವೇಶಿಸಿದ್ದ ಮಹಾರಾಷ್ಟçದ ಸಾವಿತ್ರಿಭಾಯಿ ಫುಲೆ ಪುಣೆ ವಿಶ್ವವಿದ್ಯಾಲಯ (SಃPP Uಗಿ) ವು ಕೊನೆಯ ಪಂದ್ಯದಲ್ಲಿ ತನ್ನ ಎದುರಾಳಿ ತಂಡ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಂಡವನ್ನು ಮಣಿಸುವುದರ ಮೂಲಕ ಮೂರನೇ ಸ್ಥಾನೆ ಅಲಂಕರಿಸಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಂಡವು ನಾಲ್ಕನೇ ಸ್ಥಾನ ಪಡೆಯಿತು.
ಭಾರತದಾದ್ಯಂತ 61 ವಿಶ್ವವಿದ್ಯಾಲಯಗಳ ತಂಡಗ¼ನ್ನೊಳಗೊoಡ ಒಟ್ಟು 73 ಪಂದ್ಯಗಳ ಪಂದ್ಯಾವಳಿಯು ಇದೇ 12 ರಂದು ಆರಂಭವಾಗಿ 15 ರಂದು ಭೋಜನ ವಿರಾಮಕ್ಕೆ ಮುನ್ನ ಯಶಸ್ವಿಯಾಗಿ ಕೊನೆಗೊಂಡಿತು. ಪಂದ್ಯಾವಳಿಯ ಮೊದಲ 67 ಪಂದ್ಯಗಳು ನಾಕ್ ಔಟ್ ಪಂದ್ಯಗಳಾಗಿದ್ದು ನಂತರ ಉಳಿದ ಅಂತಿಮ 4 ತಂಡಗಳಿಗೆ ಲೀಗ್ ಪ್ರಕಾರವನ್ನು ಅಳವಡಿಸಿಕೊಂಡು ನಡೆಸಿದ್ದು ಅಂತಿಮ ಹಂತದ ‘ಸೂಪರ್ ಲೀಗ್’ನಲ್ಲಿ ನಡೆದ 67 ರಿಂದ 73 ಲೀಗ್ ಪಂದ್ಯಗಳ ಎಲ್ಲಾ 6 ಪಂದ್ಯಗಳು ಪೈಪೂಟಿಯಿಂದ ಕೂಡಿತ್ತು.
ಅಂತಿಮ ದಿನದ ಹಣಾಹಣಿಯು ಎಲ್ಲರನ್ನು ಮೂಕರನ್ನಾಗಿಸುವ ಹಾಗೆ ವೈಭೋಗದಿಂದ ನಡೆಯಿತು. ಹಲವು ಅಚ್ಚರಿ ಮೂಡಿಸುತ್ತಾ ವೈವಿಧ್ಯಮಯ ಚಾಕಚಕ್ಯತೆಯಿಂದ ಗೆಲುವಿನ ಓಟದಲ್ಲಿ ತಂಡಗಳ ಭಾಗವಹಿಸುವಿಕೆಯ ಲವಲವಕೆಯಿಂದ ಕೂಡಿದ ಸಾಹೇ ಕ್ರೀಡಾಂಗಣವು ಗೆದ್ದ ಚಾಂಪಿಯನ್ಸ್ ತಂಡಗಳಿಗೆ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಅಂತ್ಯಗೊoಡಿತು.
ಮಂಗಳೂರು ವಿಶ್ವವಿದ್ಯಾಲಯಕ್ಕೆ ರಾಷ್ಟ್ತ್ರೀಯ ಚಾಂಪಿಯನ್ಸ್ ಪಟ್ಟ
Leave a comment
Leave a comment