ತುಮಕೂರು:ಆಗಸ್ಟ್ ೧೧ ರಂದು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜರುಗುವ ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತೋತ್ಸವ ಕಾರ್ಯಕ್ರಮದ ಅಂಗವಾಗಿ ಬಡ್ಡಿಹಳ್ಳಿ ರಸ್ತೆಯ ಕೃಷ್ಣಾನಗರದಲ್ಲಿರುವ ರಾಜ್ಯ ಒಕ್ಕಲಿಗರ ಸಂಘದ ಹಾಸ್ಟಲ್ ಕಟ್ಟಡದಲ್ಲಿ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀಮಂಗಳನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಂಬAಧ ಒಕ್ಕಲಿಗ ಸಮುದಾಯದ ಮುಖಂಡರ ಸಲಹೆ, ಸೂಚನೆಗಳನ್ನು ಆಲಿಸಿದ ನಂತರ ಮಾತನಾಡಿದ ಶ್ರೀಮಂಗಳನಾಥ ಸ್ವಾಮೀಜಿಗಳು,ಸರ್ವಜನಾಂಗದ ಹಿತ ಬಯಸಿದ್ದ ಕೆಂಪೇಗೌಡರು ಒಕ್ಕಲಿಗ ಸಮುದಾಯದವರೆಂಬುದು ನಮ್ಮಗೆಲ್ಲರಿಗೂ ಹೆಮ್ಮೆಯ ವಿಷಯ.ಅವರ ಜಯಂತಿಯನ್ನು ಅದ್ದೂರಿಯ ಜೊತೆಗೆ, ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿರುವುದು ಸಂತೋಷದ ವಿಷಯ. ಇದೊಂದು ಜಾತ್ಯಾತೀತ ಕಾರ್ಯಕ್ರಮವಾಗಬೇಕೆಂಬುದು ನಮ್ಮ ಆಶಯ.ಹಾಗಾಗಿ ಒಕ್ಕಲಿಗ ಸಮುದಾಯದ ಜೊತೆಗೆ, ಎಲ್ಲಾ ಸಮುದಾಯದವರನ್ನು ಈ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಒಕ್ಕಲಿಗ ಸಮುದಾಯದ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯನ್ನು ತೋರ್ಪಡಿಸಲು ಇದೊಂದು ಸುವರ್ಣ ಅವಕಾಶ. ಕನಿಷ್ಠ ೧೦ ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ನಾಡುಪ್ರಭುವಿಗೆ ಗೌರವ ಸಲ್ಲಿಸುವಂತಾಗಬೇಕು.ಈ ನಿಟ್ಟಿನಲ್ಲಿ ಇಲ್ಲಿ ಸೇರಿರುವ ಎಲ್ಲಾ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಜನರನ್ನು ಕರೆ ತರಲು ಶಕ್ತಿ ಮೀರಿ ಪ್ರಯತ್ನಿಸುವಂತೆ ಸಲಹೆ ನೀಡಿದ ಸ್ವಾಮಿಜಿಗಳು,ಕೆಂಪೇಗೌಡರು ಜಾತ್ಯಾತೀತ ವ್ಯಕ್ತಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಆಯ್ಕೆಯಾಗಿರುವ ಎಲ್ಲಾ ಶಾಸಕರು,ಸಂಸದರು ಮತ್ತು ಮಾಜಿ ಶಾಸಕರು, ಸಂಸದರನ್ನು ಆಹ್ವಾನಿಸಿ,ಅವರುಗಳನ್ನು ಸನ್ಮಾನಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಯೋಜಕರಿಗೆ ಸೂಚನೆ ನೀಡಿದರು.
ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ರಾಜಕೀಯ ಬೇಡ. ಹಾಗಾಗಿ ವೇದಿಕೆಯ ಮೇಲೆ ಒಕ್ಕಲಿಗ ಶಾಸಕರ ಜೊತೆಗೆ, ಇತರೆ ವರ್ಗಗಳ ಶಾಸಕರು, ಸಚಿವರುಗಳು ಇರುವಂತೆ ನೋಡಿಕೊಳ್ಳಿ, ವಯುಕ್ತಿಕ ಪ್ರತಿಷ್ಠೆ ಮತ್ತು ಭಿನ್ನಾಭಿಪ್ರಾಯ ಮರೆತು ಒಕ್ಕಲಿಗ ಸಮುದಾಯದ ಎಲ್ಲಾ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶ್ರೀಮಂಗಳನಾಥಸ್ವಾಮೀಜಿಗಳು ಕರೆ ನೀಡಿದರು.
ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ
Leave a comment
Leave a comment