ಮಾನವತಾವಾದವಿದೆ.ಎಲ್ಲಾ ಸಮುದಾಯಗಳ ಅಭಿವೃದ್ದಿಗೆ ಅವಕಾಶ ಕಲ್ಪಿಸಿದ ಕುರುಹುಗಳಿವೆ.ಶೋಷಿತ ಸಮುದಾಯಗಳು ಸಾವಲಂಬಿ ಬದುಕು ಕಟ್ಟಿಕೊಳ್ಳಲು ಅವರು ಅವಕಾಶ ಕಲ್ಪಿಸಿದ್ದರು.ಓರ್ವ ರಾಜಕಾರಣಿಗೆ ರಾಜಕೀಯ ಮುಖ್ಯವಾದರೆ,ಓರ್ವ ದಾರ್ಶಾನಿಕನಿಗೆ ಇಡೀ ಸಮುದಾಯ ಮುಖ್ಯವಾಗುತ್ತದೆ ಎಂಬುದಕ್ಕೆ ಕೆಂಪೇಗೌಡ ಆಡಳಿತವೇ ಸಾಕ್ಷಿ ಎಂದರು.ಯಾವುದೇ ಒಂದು ಸಮುದಾಯ ರಾಜಕೀಯ ಅಧಿಕಾರ ಪಡೆಯಬೇಕೆಂದರೆ ಒಗ್ಗಟ್ಟು ಮುಖ್ಯ. ಬಹಳ ವರ್ಷಗಳ ನಂತರ ಒಕ್ಕಲಿಗ ಸಮಾಜ ಇಂತಹ ಒಂದು ಕಾರ್ಯಕ್ರಮ ಆಯೋಜಿಸಿದೆ.ಮುಂದಿನ ದಿನಗಳಲ್ಲಿ ಹೀಗೆಯೇ ಮುಂದುವರೆಯಲಿ ಎಂಬ ಆಶಯ ವ್ಯಕ್ತಪಡಿಸಿದ ಸಹಕಾರ ಸಚಿವರು,ಕೆಂಪೇಗೌಡರ ಆಶಯಗಳನ್ನು ಯುವಜನರು ತಿಳಿದು ಮುನ್ನೆಡೆಯುವಂತಹ ವಾತಾವರಣ ಸೃಷ್ಟಿಯಾಗಬೇಕೆಂದರು.ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀಶ್ರೀಡಾ.ನಿರ್ಮಲಾನಾಥನಂದಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಒಕ್ಕಲಿಗ ಸಮುದಾಯವೆಂದರೆ ಎಲ್ಲಾ ಸಮುದಾಯವನ್ನು ತನ್ನೊಟ್ಟಿಗೆ ತೆಗೆದುಕೊಂಡು ಹೋಗುವ ವಿಶ್ವಮಾನವ ಪರಿಕಲ್ಪನೆ ಹೊಂದಿರುವ ಸಮುದಾಯ. ಇದೇ ಪರಿಕಲ್ಪನೆಯಲ್ಲಿ ಕೆಂಪೇಗೌಡರು ಎಲ್ಲ ಸಮುದಾಯಗಳಿಗೆ ಅರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಬೆಳೆಯಲು ಅವಕಾಶ ಕಲ್ಪಿಸಿದ್ದರು. ಕೌಶಲ್ಯವನ್ನು ಆಧರಿಸಿ ಸುಮಾರು ೬೪ ಪೇಟೆಗಳನ್ನು ನಿರ್ಮಿಸಿ,ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದ್ದರು. ಅವರ ಆಶಯದಂತೆ ನಾವೆಲ್ಲರೂ ನಡೆಯಬೇಕಾಗಿದೆ ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ
ಹನುಮಂತರಾಯಪ್ಪ,ಬಹುಸAಖ್ಯಾತರಿರುವ ಒಕ್ಕಲಿಗ ಸಮುದಾಯ ಕಲೆ,ಸಾಹಿತ್ಯ,ಸಾಂಸ್ಕೃತಿಕವಾಗಿ ಸಾಕಷ್ಟು ಕೊಡುಗೆಯನ್ನು ನೀಡಿದೆ.ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಒಕ್ಕಲಿಗರ ಭವನಗಳಿವೆ.ಆದರೆ ಬೆಂಗಳೂರಿಗೆ ಹತ್ತಿರದಲ್ಲಿರುವ ತುಮಕೂರಿನಲ್ಲಿ ಸಮುದಾಯಭವನವಿಲ್ಲ.ಹಾಗಾಗಿ ಜಿಲ್ಲಾಡಳಿತ ಎರಡು ಎಕರೆ ಭೂಮಿ ನೀಡಿದರೆ ಸುಸಜ್ಜಿತ ಭವನ ನಿರ್ಮಾಣಕ್ಕೆ ಸಹಾಯ ಮಾಡಿದಂತಾಗುತ್ತದೆ.ಇದರ ಜೊತೆಗೆ ನಗರ ಟೌನ್ಹಾಲ್ ಮುಂಭಾಗದಲ್ಲಿ ಶ್ರೀಬಾಲ ಗಂಗಾಧರನಾಥಸ್ವಾಮೀಜಿಯವರ ಪುತ್ಥಳಿ ಹಾಗು ಜಿಲ್ಲಾಡಳಿತದ ಮಿನಿ ವಿಧಾನಸೌಧದ ಮುಂಭಾಗ ಕೆಂಪೇಗೌಡರ ಪುತ್ಥಳಿ ಆನಾವರಣ ಮಾಡಬೇಕೆಂಬ ಮನವಿಯನ್ನು ಗೃಹ ಸಚಿವರು ಹಾಗೂ ಸಹಕಾರ ಸಚಿವರಿಗೆ ಮನವಿ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ೧೦ಜನ ಪ್ರಗತಿಪರ ರೈತರಿಗೆ ಹಾಗೂ ನೂರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೆರವೇರಿ ಸಲಾಯಿತು.ಆದಿಚುಂಚನಗಿರಿ ತುಮಕೂರು ಶಾಖಾ ಮಠದ ಶ್ರೀ ಮಂಗಳನಾಥಸ್ವಾಮೀಜಿ ಉಪಸ್ಥಿತರಿದ್ದರು.ವೇದಿಕೆಯಲ್ಲಿ ಶಾಸಕರಾದ
ಎಸ್.ಆರ್.ಶ್ರೀನಿವಾಸ್,ಬಿ.ಸುರೇಶಗೌಡ,ಡಾ.ಕೆ.ರಂಗನಾಥ್,ಜಿ.ಬಿ.ಜೋತಿಗಣೇಶ್, ಚಿದಾನಂದಗೌಡ,ಮಾಜಿ ಸಂಸದ ಮುದ್ದಹನುಮೇಗೌಡ,ಮೇಯರ್ ಶ್ರಿಮತಿಪ್ರಭಾವತಿ ಸುಧೀಶ್ವರ್,ಮಾಜಿ ಶಾಸಕ ಹೆಚ್.ನಿಂಗಪ್ಪ, ಮುರುಳೀಧರ ಹಾಲಪ್ಪ,ಪಾಲಿಕೆ ಸದಸ್ಯ ಜೆ.ಕುಮಾರ್,ಧರಣೇಂದ್ರಕುಮಾರ್,ಕೇAದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತ ರಾಯಪ್ಪ,ಬಯಲು ಸೀಮೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು,ಗಿರೀಶ್,ಕೃಷ್ಣೇಗೌಡ, ಕೆ.ಮುನು, ಶ್ರೀನಿವಾಸಮೂರ್ತಿ, ಉದಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮುನ್ನ ನಗರದ ಬಿ.ಜಿ.ಎಸ್.ವೃತ್ತದಿಂದ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದವರೆಗೆ ವಿವಿಧ ಕಲಾ ತಂಡಗಳ ಮೆರವಣಿಗೆಯೊಂದಿಗೆ ಕೆಂಪೇಗೌಡರ ಪುತ್ಥಳಿ ಮತ್ತು ಭಾವಚಿತ್ರವನ್ನು ಸಾವಿರಾರು ಜನರೊಂದಿಗೆ ವೇದಿಕೆಗೆ ತರಲಾಯಿತು.