ಸಾಮಾಜಿಕ ಶಕ್ತಿ ತುಂಬಲು ಸರ್ಕಾರಕ್ಕೆ ಒತ್ತಾಯ
ಪಿಂಜಾರ ನದಾಫ್ ಸಮುದಾಯದ ನೆರವಿಗೆ ಮನವಿ
ತುಮಕೂರು: ತುಳಿತಕ್ಕೊಳಗಾಗಿರುವ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅತಿ ಹಿಂದುಳಿದಿರುವ ಪಿಂಜಾರ ನದಾಫ್ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅಗತ್ಯ ನೆರವಿನ ಕಾರ್ಯಕ್ರಮ ನೀಡಬೇಕು ಎಂದು ಜಿಲ್ಲಾ ಪಿಂಜಾರ ನದಾಫ್ ಸಂಘದ ಅಧ್ಯಕ್ಷ ಬಷೀರ್ ಅಹ್ಮದ್ ಸರ್ಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮತನಾಡಿದ ಅವರು, ಸಂಘಟನೆ ಮೂಲಕ ಸಮುದಾಯದ ಶಕ್ತಿ ವೃದ್ಧಿಸಿಕೊಳ್ಳಬೇಕು, ಸಂಘದ ಚಟುವಟಿಕೆಯನ್ನು ರಾಜ್ಯಾದ್ಯಂತ ವಿಸ್ತರಿಸಿ ಸಮುದಾಯವನ್ನು ಶಕ್ತಿಯುತವಾಗಿ ಸಂಘಟಿಸಬೇಕು ಎಂದು ಹೇಳಿದರು.
ಪಿಂಜಾರ ನದಾಫ್ ಸಮುದಾಯಕ್ಕೆ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಭರವಸೆ ನೀಡಿತ್ತು. ಆದರೆ ಈವರೆಗೂ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ, ಅನುದಾನ ನೀಡಿ ಕಾರ್ಯಚಟುವಟಿಕೆ ಆರಂಭ ಮಾಡಿಲ್ಲ ಎಂದು ಹೇಳಿದರು.
ಪಿಂಜಾರ ನದಾಫ್ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ವಂಚಿತರಾಗಿದ್ದಾರೆ. ಇವರ ವಿದ್ಯಾರ್ಜನೆ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರ ತುಮಕೂರಿನಲ್ಲಿ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಅಬ್ದುಲ್ ಲತೀಫ್, ಕಾರ್ಯದರ್ಶಿ ಮೆಹಬೂಬ್ ಪಾಷ, ಸಹಕಾರ್ಯದರ್ಶಿ ಮೊಯಿನ್ ಬಾಬು, ಖಜಾಂಚಿ ಅಸ್ಮಾ ಸುಲ್ತಾನ್ ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಾಮಾಜಿಕ ಶಕ್ತಿ ತುಂಬಲು ಸರ್ಕಾರಕ್ಕೆ ಒತ್ತಾಯಪಿಂಜಾರ ನದಾಫ್ ಸಮುದಾಯ

Leave a comment
Leave a comment