ತುಮಕೂರು:ಪಂಚಾಯತ್ ರಾಜ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಗ್ರಾಮೀಣ ಭಾಗದಲ್ಲಿ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸುವ ಕೆಲಸ ಮಾಡಬೇಕೆಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಸರಕಾರವನ್ನು ಒತ್ತಾಯಿಸಿದ್ದಾರೆ.
ಮಧುಗಿರಿ ತಾಲೂಕು ಮೀಡಿಗೇಶಿ ಹೋಬಳಿ ಚಿನ್ನೇನಹಳ್ಳಿ ಗ್ರಾಮದಲ್ಲಿ ಕುಲಷಿತ ನೀರಿನಿಂದ ಇಬ್ಬರು ಸಾವನ್ನಪ್ಪಿದ ಘಟನೆಗೆ ಸಂಬoಧಿಸಿದoತೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಎರಡು ಇಲಾಖೆಯ ಅಧಿಕಾರಿಗಳಿಗೂ ಈ ಸಂಬoಧ ಮನವಿ ಮಾಡಲಾಗಿದೆ.ಮಾನವೀಯತೆ ಇರುವ ಯಾರು ಸಹ ಇದನ್ನು ಅಲ್ಲಗಳೆಯಲಾರರು ಎಂದರು.
ಚಿನ್ನೇನಹಳ್ಳಿಯ ಇಬ್ಬರ ಸಾವಿಗೆ ಸಂಬoಧಿಸಿದoತೆ ತನಿಖೆ ಆರಂಭವಾಗಿದೆ.ತನಿಖಾ ವರದಿ ಬಂದ ತಕ್ಷಣ ಅದನ್ನು ಆಧರಿಸಿ ಸಾವಿಗೆ ನಿಖರ ಕಾರಣ ತಿಳಿದು ನಂತರ ಪರಿಹಾರದ ಬಗ್ಗೆ ಸರಕಾರ ನಿರ್ಧಾರ ಕೈಗೊಳ್ಳಲಿದೆ.ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದ್ದ ಪ್ರಯುಕ್ತ ತಂಬಿಟ್ಟು ನೀಡಲಾಗಿತ್ತು. ಹಾಗಾಗಿ ಸಾವಿಗೆ ನಿಖರ ಕಾರಣ ಪತ್ತೆಯಾದ ನಂತರ ಪರಿಹಾರದ ಬಗ್ಗೆ ಸರಕಾರ ಚಿಂತನೆ ನಡೆಸಲಿದೆ.ಚಿನ್ನೇನಹಳ್ಳಿ ಘಟನೆ ಪಂಚಾಯತ್ ರಾಜ್ ಇಲಾಖೆಗೆ ಒಂದು ಎಚ್ಚರಿಕೆಯ ಗಂಟೆಯಾ ಗಿದೆ.ರಾಜ್ಯದ ಪ್ರತಿಹಳ್ಳಿಗಳಲ್ಲಿಯೂ ರಾಜ್ಯ ಸರಕಾರ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸಬೇಕು. ಹಾಗೆಯೇ ಚಿನ್ನೇನಹಳ್ಳಿ ಘಟನೆಯಿಂದ ಆ ಭಾಗದ ಕತ್ತರಾಜನಹಳ್ಳಿ,ನೀಲಿಹಳ್ಳಿ,ವಿ.ಚಿನ್ನೇನಹಳ್ಳಿ,ಕೃಷ್ಣಾಪುರ ಗ್ರಾಮದ ಜನರು ಗಾಬರಿ ಯಾಗಿದ್ದರು.ಆದರೆ ಜಿಲ್ಲಾಡಳಿತ ನಾಲ್ಕು ದಿನಗಳ ಕಾಲ ಸ್ಥಳದಲ್ಲಿಯೇ ಮೊಕ್ಕಂ ಹೂಡಿ, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ.ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿಯೂ ಉತ್ತಮ ಚಿಕಿತ್ಸೆ ನೀಡಿ,ರೋಗಿಗಳು ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಮುರುಳೀಧರ ಹಾಲಪ್ಪ ತಿಳಿಸಿದರು.
ಜಿಲ್ಲಾ ಶಸ್ತçಚಿಕಿತ್ಸಕ ಡಾ.ಅಸ್ಗರ್ ಬೇಗ್ ಮಾತನಾಡಿ,ಕಳೆದ ಸೋಮವಾರದಂದು ಮಧುಗಿರಿ ತಾಲೂಕು ಚಿನ್ನೇನಹಳ್ಳಿಯಿಂದ ಸುಮಾರು 16 ಜನರು ಅತಿಸಾರ ವಾಂತಿ,ಭೇದಿಯಿoದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.ಇವರಲ್ಲಿ 7 ರೋಗಿಗಳು ಗುಣಮುಖರಾಗಿ ಡಿಸ್ಜಾರ್ಜ ಆಗಿದ್ದಾರೆ.ಆರು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀದೇವಿ ಮೆಡಿಕಲ್ ಕಾಲೇಜಿಗೆ ದಾಖಲಿಸ ಲಾಗಿದ್ದು,ಅವರು ಸಹ ಚೇತರಿಸಿಕೊಂಡಿದ್ದಾರೆ. ಆರಂಭದಲ್ಲಿ ಕೆಂಪನಹಳ್ಳಿ ಪಿಹೆಚ್ಸಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ತೀರ ನಿತ್ರಾಣರಾದವರನ್ನು ಜಿಲ್ಲಾಸ್ಪತ್ರೆಗೆ ದಾಖಲಾಗಿತ್ತು ಎಂದರು.