ಇಷ್ಟು ದೊಡ್ಡ ಪ್ರಮಾಣದಲ್ಲಿ ಆಧುನಿಕತೆ ಬೆಳೆದಿದ್ದರೂ ಕೂಡ ಮೌಡ್ಯಕ್ಕೆ ಜಾರಿ ಹಸುಗೂಸನ್ನು ಕಳೆದುಕೊಂಡಿರುವಂತದ್ದು ಬಹಳ ದುರದೃಷ್ಟಕರ ಸಂಗತಿ ಈ ಘಟನೆ ಬಗ್ಗೆ ನೋಡಿ ಕೇಳಿ ನನಗೆ ಬಹಳ ದಿಗ್ಭ್ರಮೆಯಾಗಿರುವುದಾಗಿ ಶಾಸಕ ಬಿ. ಸುರೇಶಗೌಡ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಇಂದು ತುಮಕೂರು ತಾಲ್ಲೂಕು ಮಲ್ಲೇನಹಳ್ಳಿ ಗೊಲ್ಲರಟ್ಟಿಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ತುಮಕೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮಲ್ಲೇನಹಳ್ಳಿ ಗೋಲರಟ್ಟಿಯಲ್ಲಿ ಮೌಡ್ಯದಿಂದಲೋ ಅಥವಾ ಅನಾರೋಗ್ಯದಿಂದ ಈ ಮಗು ಸಾವಿಗೀಡಾಗಿದೆಯೋ ಗೊತ್ತಿಲ್ಲ. ಆದರೆ ಇಂತಹ ಘಟನೆಗಳು ಮರುಕಳಿಸಬಾರದು ಜನರು ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಈ ನಿಟ್ಟಿನಲ್ಲಿ ಇನ್ನಷ್ಟು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಹಸುಗೂಸು ಸಾವನ್ನಪ್ಪಿರುವ ಪ್ರಕರಣ ರಾಜ್ಯಾದ್ಯಾoತ ಸದ್ದು ಮಾಡಿತ್ತು ಈ ಹಿನ್ನೆಲೆಯಲ್ಲಿ ಇಂದು ಸ್ಥಳೀಯ ಶಾಸಕ ಬಿ. ಸುರೇಶ್ ಗೌಡ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪೋಲಿಸ್ ಆರಕ್ಷಣಾಣಾಧಿಕಾರಿ ಮತ್ತು ಶಿಶುಪಾಲನ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತಿ ಅಧ್ಯಕ್ಷ ಶಿವಲಿಂಗಯ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.