ತುಮಕೂರು: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಕಾವು ತಾರಕ ಏರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳಾಗಿ ಕಣದಲ್ಲಿದ್ದು ಈಭಾರಿ ಕಾಂಗ್ರೆಸ್ ಪಕ್ಷದಿಂದ ಮುದ್ದಹನುಮೇ ಗೌಡ ಅವರು ಅಭ್ಯರ್ಥಿಯಾಗಿ ಏಪ್ರಿಲ್ 4ಕ್ಕೆ ಉಮೇದುವಾರಿಕೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಮುಂಚೂಣಿ ಘಟಕದ ನಾಯಕರು ಈ ಬಾರಿ ಮುದ್ದ ಹನುಮೇ ಗೌಡ ಅವರನ್ನು ಗೆಲ್ಲಿಸಲು ಪಣ ತೊಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ಅವರು ಕರೆ ನೀಡಿದರು.
ನಗರದ ಬಿ ಹೆಚ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭಾ ಚುನಾವಣಾ ಪ್ರಯುಕ್ತ ಜಿಲ್ಲೆಯ ಎಲ್ಲಾ ಮುಂಚೂಣಿ ಘಟಕದ ನಾಯಕರ ಸಭೆಯಲ್ಲಿ ಅವರು ಮಾತನಾಡಿ ಜಿಲ್ಲೆಯಲ್ಲಿ ಈಭಾರಿ ಲೋಕಸಭಾ ಚುನಾವಣೆಯನ್ನು ನಾವು ಚಾಲೆಂಜ್ ಹಾಗಿ ತೆಗೆದುಕೊಳ್ಳಬೇಕು ಎದುರಾಳಿಯ ಮೈತ್ರಿ ಪಕ್ಷವನ್ನು ಮಟ್ಟ ಹಾಕಲು ಸಂಘಟಿತರಾಗಬೇಕು ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮಲ್ಲಿಕಾರ್ಜುನ್ ಖರ್ಗೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನಮ್ಮ ಜಿಲ್ಲಾ ಉಸ್ತುವಾರಿಗಳಾದ ಡಾ. ಜಿ ಪರಮೇಶ್ವರ್, ಸಚಿವರು, ಹಾಗೂ ಏಳು ವಿಧಾನಸಭಾ ಕ್ಷೇತ್ರದ ಶಾಸಕರುಗಳು ಮಾಜಿ ಶಾಸಕರುಗಳು ಮುದ್ದ ಹನುಮೇಗೌಡ ಅವರನ್ನ ಗೆಲ್ಲಿಸಲು ಕಂಕಣ ತೋಟ್ಟಿದ್ದು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ ಪಕ್ಷ ಸಂಘಟನೆಗೆ ಜಿಲ್ಲೆಯಲ್ಲಿ ಅನೇಕರು ಶ್ರಮಿಸಿದ್ದು ಪಕ್ಷದ ಹಿತಕ್ಕಾಗಿ ಸರ್ವರಿಗೂ ಸಮ ಬಾಳು ಸಮಾ ಪಾಲು ಎಂಬAತೆ ಜಾತಿ ಭೇದ ತೊರೆದು ಪಕ್ಷ ಪಕ್ಷ ಸಂಘಟನೆಯಾಗುತ್ತಿದ್ದು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಏಪ್ರಿಲ್ ನಾಲ್ಕರಂದು ಪಕ್ಷದ ಎಲ್ಲಾ ಕಾರ್ಯಕರ್ತರು ಯಾವುದೇ ನೋವುಗಳಿದ್ದು ದೇಶದ ಹಿತ ಚಿಂತನೆಗಾಗಿ ಮುದ್ದಹನುಮೇ ಗೌಡ ಅವರನ್ನು ಗೆಲ್ಲಿಸಲು ಮುಂದಾಗಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್ಟಿ ಶ್ರೀನಿವಾಸ್ ಅವರು ಮಾತನಾಡಿ ಮುದ್ದ ಹನುಮೇಗೌಡ ಅವರು ಪಕ್ಷಕ್ಕೆ ಸೇರ್ಪಡೆ ಯಾದಾಗಿನಿಂದಲೂ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರತಿ ಬೂತ್ ಗಳು ಹಾಗೂ ಗ್ರಾಮ ಪಂಚಾಯಿತಿ ಮಠದಲ್ಲಿ ಕಾರ್ಯಕರ್ತರನ್ನ ಒಗ್ಗೂಡಿಸಿ ಮುದ್ದ ಹನುಮೇಗೌಡ ಅವರ ಪರವಾಗಿ ಸಂಘಟನೆ ಮಾಡುತ್ತಿದ್ದು ಏಪ್ರಿಲ್ 4ರಂದು ನಾಮಪತ್ರ ಸಲ್ಲಿಕೆಗೆ ಸಮರೋಪಾದಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನ ಕರೆ ತರುವುದು ಸೇರಿದಂತೆ ಕಾಂಗ್ರೆಸ್ ಪಕ್ಷದ ನಮ್ಮ ನಾಯಕರ ಆದೇಶದಂತೆ ಈ ಬಾರಿ ಲೋಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವ ಪಣತೊಟ್ಟಿದ್ದೇವೆ ಎಂದರು.
ನಮ್ಮ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯ ನಂತರ ಬೂತ್ ಮಟ್ಟದಲ್ಲಿ ಕಾರ್ಯಕರ್ತರುಗಳನ್ನ ವಿಂಗಡಣೆ ಮಾಡಿ ಮನೆಮನೆಗೂ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನ ಜನರಿಗೆ ಮನವರಿಕೆ ಮಾಡಿ ಮುದ್ದಹನುಮೇಗೌಡ ಅವರಿಗೆ ಮತ ನೀಡುವಂತೆ ಮನವಲಿಸಲಾಗುವುದು ಎಂದರು.
ಅಲ್ಪಸಂಖ್ಯಾತ ಘಟಕದ ಮಾಜಿ ಜಿಲ್ಲಾಧ್ಯಕ್ಷ ಅತಿಕ ಅಹಮದ್ ಅವರು ಮಾತನಾಡಿ ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಸಾಮಾನ್ಯರ ಒಳಿತಿಗಾಗಿ ಶ್ರಮಿಸಿದೆ ತುಮಕೂರು ಜಿಲ್ಲೆಯಲ್ಲಿ ಪಕ್ಷವನ್ನ ಸಂಘಟಿಸಿರುವ ಅನೇಕರು ಸೂಕ್ತಸ್ಥಾನಮಾನಗಳನ್ನು ಹೊಂದಿದ್ದು ವಿವಿಧ ಘಟಕಗಳ ಮುಖಂಡರುಗಳು ನಮ್ಮ ಪಕ್ಷದ ಯಾವುದೇ ನಾಯಕರನ್ನು ಕಾಯದೆ ವಾರ್ಡ್ಗಳು ಮತ್ತು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ನಮ್ಮ ಅಭ್ಯರ್ಥಿ ಮುದ್ದಹನುಮೇಗೌಡ ಅವರಿಗೆ ಮತ ನೀಡಲು ಮನ ಓಲೈಸುತ್ತೇವೆ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಕಾರ್ಡ್ಗಳನ್ನ ಪ್ರತಿ ಮನೆಮನೆಗೆ ತಲುಪಿಸಿದ ನಮಗೆ ಪ್ರತಿ ಮನೆಮನೆಯಿಂದಲೂ ಮತ ಹಾಕಿಸುವ ಜವಾಬ್ದಾರಿ ಇದೆ ಎಂದು ತಿಳಿಸಿದರು.
ಮುಂಚೂಣಿ ಘಟಕದ ಸಭೆಯಲ್ಲಿ ವಿವಿಧ ಘಟಕಗಳ ಮುಖಂಡರುಗಳು ಮಾತನಾಡಿ ಲೋಕಸಭಾ ಚುನಾವಣೆಗೆ ಮಾಡಿದ ತಂತ್ರಗಳು ಹಾಗೂ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಪಂಚಾಕ್ಷರಯ್ಯ ವೀರೇಶ್ ನರಸಿಂಹಯ್ಯ ಸಿದ್ದಲಿಂಗೇಗೌಡ ಕೆಂಪರಾಜು ಲಿಂಗರಾಜು ಶಿವಾಜಿ ರಾಮಯ್ಯ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.