ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯದಿಂದ ಯಶಸ್ವಿ ಬಾಯಿ ಮತ್ತು ದವಡೆ ಶಸ್ತç ಚಿಕಿತ್ಸೆ
ತುಮಕೂರು: ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನುರಿತ ದಂತ ತಜ್ಞ ವ್ಶೆದ್ಯರಿಂದ ೮೦ ವರ್ಷದ ವಯೋ ವೃದ್ಧರೊಬ್ಬರಿಗೆ ಬಾಯಿ ಮತ್ತು ದವಡೆ ಶಸ್ತç ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ತುಮಕೂರು ತಾಲೂಕಿನ ದೊಡ್ಡಸಾರಂಗಿ ಗ್ರಾಮದ ರಾಮಕೃಷ್ಣ ಎಂಬುವವರು ಕೃಷಿಕರಾಗಿದ್ದು, ಸರಿ ಸುಮಾರು ಐದು ವರ್ಷಗಳಿಂದ ದವಡೆಯಲ್ಲಿ ಎರಡೂವರೆ ಕೆ.ಜಿ.ಯಷ್ಟು ದೊಡ್ಡ ಗ್ರಾತದ ಗಂಟಿನ ನೋವಿನಿಂದ ಬಳಲುತ್ತಿದ್ದರು, ಚಿಕಿತ್ಸೆಗಾಗಿ ಹಣವಿಲ್ಲದೇ ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ. ನೋವು ಉಲ್ಬಣವಾದ ಕಾರಣ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಒಳ ರೋಗಿಯಾಗಿ ದಾಖಲಾದರು.
ಕ್ಲಿನಿಕಲ್, ರೇಡಿಯೊಲಾಜಿಕಲ್ ಮತ್ತು ಹಿಸ್ಟೋಪಾಥೋಲಾಜಿಕಲ್ ಪರೀಕ್ಷೆಯ ನಂತರ ರೋಗಿಯ ದವಡೆಯಲ್ಲಿ ಬೆಳೆದ ದುರ್ಮಾಂಸವನ್ನು ಪ್ಲೆಕ್ಸಿಫಾರ್ಮ್ ಅಮೆಲೋಬ್ಲಾಸ್ಟೊಮಾ ಎಂಬ ಅಪರೂಪದ ರೋಗ ಎಂದು ಗುರುತಿಸಲಾಯಿತು.
೮೦ ವರ್ಷದ ವೃದ್ಧರಿಗೆ ಶಸ್ತç ಚಿಕಿತ್ಸೆ ನಡೆಸುವುದು ಅಷ್ಟೇನು ಸುಲಭವಾಗಿರಲಿಲ್ಲ. ಆದಾಗ್ಯೂ ಇಂತಹ ಅನೇಕ ಶಸ್ತç ಚಿಕಿತ್ಸೆಗಳನ್ನು ನಡೆಸಿದ ಅನುಭವವಿರುವ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯದ ಬಾಯಿ, ಮುಖ ಮತ್ತು ದವಡೆ ಶಸ್ತç ಚಿಕಿತ್ಸಾ ವಿಭಾಗದ ವೈದ್ಯ ತಂಡ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಈ ಶಸ್ತç ಚಿಕಿತ್ಸೆ ನಡೆಸಲು ತೀರ್ಮಾನಿಸಿತ್ತು. ಸುಮಾರು ಐದು ಘಂಟೆಗಳ ಕಾಲ ಶಸ್ತç ಚಿಕಿತ್ಸೆ ನಡೆಸಿ ಯಶಸ್ಸು ಕಂಡಿತು.
ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯದ ಬಾಯಿ, ದವಡೆ, ಮುಖ ಮತ್ತು ದವಡೆ ಶಸ್ತç ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಮಹೇಶ್ ಕುಮಾರ್ ಮಾತನಾಡಿ, ಅನೇಕ ನರಗಳು ಸೇರುವ ಜಾಗದಲ್ಲಿ ದೊಡ್ಡಗ್ರಾತದ ದುರ್ಮಾಂಸವನ್ನು ತೆಗೆಯುವುದು ಸವಾಲಾಗಿತ್ತು. ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರವೀಣ್ ಬಿ ಕುಡ್ವ ಅವರ ಮಾರ್ಗದರ್ಶನದೊಂದಿಗೆ ಶಸ್ತç ಚಿಕಿತ್ಸೆ ನಡೆಸಿದ ವೈದ್ಯರುಗಳಾದ ಡಾ. ಮರಿಮಲ್ಲಪ್ಪ, ಡಾ.ಸುಪ್ರಿಯೋ ಪಾಲ್, ಅರವಳಿಕೆ ತಜ್ಞ ಡಾ. ರಮೇಶ್, ಡಾ.ಕೃಷ್ಣಮೂರ್ತಿ, ಡಾ.ಅಭಿಷೇಕ್ ಮತ್ತು ಇತರೆ ಸಹಾಯಕರ ತಂಡದೊAದಿಗೆ ಸತತ ಐದು ಘಂಟೆಗಳ ಕಾಲ ನಡೆಸಿದ ಬಳಿಕ ಶಸ್ತç ಚಿಕಿತ್ಸೆ ಪೂರ್ಣಗೊಂಡಿತು ಎಂದು ತಿಳಿಸಿದರು. ಆದ ಕಾರಣ ಯಾವುದೇ ವ್ಯಕ್ತಿಯ ಬಾಯಿರೋಗಗಳನ್ನು ಕಡೆಗಣಿಸದೆ ಸಕಾಲಕ್ಕೆ ಚಿಕಿತ್ಸೆಯನ್ನು ಪಡೆಯಬೇಕೆಂದು ಮತ್ತು ನಿಯಮಿತವಾಗಿ ದಂತ ತಪಾಸಣೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಶಂಸೆ: ಆಸ್ಪತ್ರೆಯ ವೈದ್ಯರ ಸವಾಲಿನ ಮತ್ತು ಯಶಸ್ವಿ ಶಸ್ತç ಚಿಕಿತ್ಸೆ ಪೂರ್ಣಗೊಳಿಸಿರುವುದನ್ನು ಆಸ್ಪತ್ರೆಯ ನಿರ್ದೇಶಕರಾದ ಗೃಹಸಚಿವರಾದ ಡಾ.ಜಿ.ಪರಮೇಶ್ವರಅವರು ಪ್ರಶಂಸೆ ವ್ಯಕ್ತಪಡಿಸಿ, ತಂಡದ ಪ್ರಯತ್ನ ಮುಂದುವರಿಯಲಿ ಎಂದು ಆಶಿಸಿದ್ದಾರೆ.
ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಯಶಸ್ವಿ ಬಾಯಿ ಮತ್ತು ದವಡೆ ಶಸ್ತ್ರ ಚಿಕಿತ್ಸೆ
Leave a comment
Leave a comment