ಶಿಕ್ಷಕರಿಂದ ಉತ್ತಮ ಶಿಕ್ಷಕಣ ದೊರೆತಾಗ ಮಾತ್ರ ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ಕೊಡಲು ಸಾಧ್ಯ ಎಂದು ಶಾಸಕ ಎಂ ವಾಯ ಪಾಟೀಲ್ ಹೇಳಿದರು. ಪಟ್ಟಣದ ಸರಸಂಬಾ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಪಂಚಾಯತ ಕಲಬುರಗಿ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘ ಅಫಜಲಪೂರ ವತಿಯಿಂದ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು,ಈ ಅರ್ಥಪೂರ್ಣ ಕಾರ್ಯಕ್ರಮ ಅಯೋಜಿಸಿದ್ದು ನಿಜಕ್ಕೂ ಸಂತಸ ತಂದಿದ್ದು ಶಿಕ್ಷಕರು ನಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಿದಾಗ ಮಾತ್ರ ಅವರು ಸುಸಂಸ್ಕೃತ ವ್ಯಕ್ತಿಗಳಾಗಿ ನಾಡಿಗೆ ದೇಶಕ್ಕೆ ಹಾಗೂ ಕೀರ್ತಿ ತರುವಂತ ಕೆಲಸ ಮಾಡುತ್ತಾರೆ ಎಂದರು, ಒಂದು ಮಗುವಿಗೆ ತಾಯಿಯೇ ಮೊದಲು ಗುರು ತದನಂತರ ಶಿಕ್ಷಕ ಎರಡನೇ ಗುರುವಾಗಿ ಕಾರ್ಯ ನಿರ್ವಹಿಸುತ್ತಾನೆ ಅಷ್ಟೇ ಅಲ್ಲದೆ ಕಲ್ಲಿನಂತ್ತಿರುವ ಮಕ್ಕಳನ್ನು ಶಿಕ್ಷಣ ಎಂಬ ಉಳಿಯಿಂದ ಸುಂದರವಾಗಿ ಕೆತ್ತಿ ಮೂರ್ತಿಯನ್ನಾಗಿ ಮಾಡುವದರಲ್ಲಿ ಶಿಕ್ಷಕರ ಪಾತ್ರ ಬಹಳಷ್ಟು ಇದೆ ಎಂದರು. ನಂತರ ಮಾತನಾಡಿದ ಶ್ರೀ ಗುರು ಷ. ಬ್ರ.ಮಳೇಂದ್ರ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಅಫಜಲಪೂರ ಅವರು, ಭವಿಷ್ಯದ ಭಾವಿ ಪ್ರಜೆಗಳನ್ನು ತಯಾರಿ ಮಾಡುವಂತ ಕಾರ್ಯದಲ್ಲಿ ನಮ್ಮ ಶಿಕ್ಷಕ ಬಂದುಗಳ ಶ್ರಮ ಬಹಳಷ್ಟು ಇದೆ,ಹಾಗಾಗಿ ಮಕ್ಕಳಲ್ಲಿ ಒಳ್ಳೆಯ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವಂತಹ ಮೌಲ್ಯಯುತ ವಿದ್ಯೆಯನ್ನು ಶಿಕ್ಷಕರಾದವರು ಮಕ್ಕಳಿಗೆ ನೀಡಬೇಕು ಎಂದರು,ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕಾರದ ನರೇಂದ್ರ, ತಾಲೂಕು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಪಾಟೀಲ್, ನಿವೃತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಜಿಮಲಾಂಗ್ ಇಂಡಿಕರ್,ಬಸವರಾಜ ಕಲ್ಲೂರ, ರಾಜಕುಮಾರ ಗುಣಾರಿ, ಸಿದ್ದು ಚಿಂಚೋಳಿ, ಮಾಜಿ ಜಿ ಪಂ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಾಂಧಿ ದಪೆದಾರ, ಸಮನ್ವಯ ಅಧಿಕಾರಿ ಗುಡಮಿ, ಶೋಭರಾಜ ಮ್ಯಾಳೆಸಿ, ರಾಜಶೇಖರ ತಲಾರಿ, ಸೈದಪ್ಪ ಕರಿಕಲ್, ಹೈದರ ಚೌದರಿ, ಸಂಗಮನಾಥ ಮ್ಯಾಳೆಸಿ ಜಗದೇವಪ್ಪ ಸಾತಲಗಾಂವ,ಸಿದ್ದರಾಮ ಮಲ್ಲಬಾದ, ಜಗದೇವಪ್ಪ ಕೊರಳ್ಳಿ,ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.