ಕೋಲಿ ಸಮಾಜದ ಮಹಾಲಕ್ಷ್ಮಿ ತಂದೆ ಭೀಮಾಶಂಕರ್ ವಯಸ್ಸು 20 ಕಲಬುರಗಿ ನಗರದ ಮಹಾಲಕ್ಷ್ಮಿ ನಗರದಲ್ಲಿರುವ ಈಶ್ವರ ಉದ್ಯಾನವನದಲ್ಲಿ ಇರತಕ್ಕಂತ ಬಾವಿಯಲ್ಲಿ ಬಾವಿಯಲ್ಲಿ ಬಿದ್ದು ಅನುಮಾನಸ್ಫದ ಸಾವು.
ಆಟೋ ಚಾಲಕ ಭೀಮಾಶಂಕರ್ ಅವರ ಮಗಳಾದ ಕುಮಾರಿ ಮಹಾಲಕ್ಷ್ಮಿ ದಿನಾಂಕ 18 -12- 2023 ರಂದು ಸೋಮವಾರದಂದು ಬೆಳಿಗ್ಗೆ 5:00 ಕಾಣೆಯಾಗಿದ್ದು. ಗಾಬರಿಗೊಂಡ ತಾಯಿ ತಂದೆ ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಾರೆ.
ಬಾಲಕಿಯ ತಂದೆ ತಾಯಿ ದೂರ ನೀಡಿ ಮೂರು ದಿನಗಳಾದರು ಅಲ್ಲಿಯ ರಾಘವೇಂದ್ರ ಠಾಣೆಯ ಪೊಲೀಸರು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬಾಲಕಿಯ ತಂದೆ ತಾಯಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ನನ್ನ ಮಗಳ ಸಾವಿಗೆ ಗುಂಡು ಎಂಬ ಯುವಕನ ಮೇಲೆ ಸಂಶಯವಿದೆ ಎಂದು ಹೇಳಿದರು.
ತದನಂತರ ಸ್ಥಳಕ್ಕೆ ಬೇಟಿ ನೀಡಿದ ಸಮಾಜದ ಮುಖಂಡರುಗಳಾದ ಅವ್ವಣ್ಣ ಮ್ಯಾಕೇರಿ, ದಿನದಿಂದ ದಿನಕ್ಕೆ ಇತ್ತೀಚಿಲಾಗಿ ಕೋಲಿ ಸಮಾಜದ ಮೇಲೆ ಮೇಲಿಂದ ಮೇಲೆ ಅನ್ಯಾಯವಾಗುತ್ತಿದೆ ಆದಕಾರಣ ಸ್ಥಳಕ್ಕೆ ಡಿಸಿ ಬರುವರೆಗೂ ಬಾವಿಯಲ್ಲಿರತಕ್ಕಂತ ಬಾಲಕಿಯ ಮೃತ ದೇಹವನ್ನು ಹೊರಗೆ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಕೊಳ್ಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಲ್ಬುರ್ಗಿ ಪೊಲೀಸ್ ಆಯುಕ್ತರಾದ ಆರ್ ಚೇತನ್ ಅವರು ಬಾಲಕಿಯ ತಂದೆ ತಾಯಿ ಮತ್ತು ಸಮಾಜದ ಮುಖಂಡರಾದ ಅವ್ವಣ್ಣ ಮ್ಯಾಕೇರಿ ಯವರಿಗೆ ಘಟನೆ ಬಗ್ಗೆ ವಿಚಾರಿಸಿ ಮೃತದೇಹವನ್ನು ಪರಿಶೀಲಿಸಿ ಬಾಲಕಿಯ ತಂದೆ ತಾಯಿ ಯಾವ ರೀತಿ ದೂರು ನೀಡುತ್ತಾರೆ ಅದರ ಮೇಲೆ ನಾವು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ತದನಂತರ DCP ಕನ್ನಿಕಾ ಸಿಕ್ರೀವಾಲ್ ಅವರು ಕೂಡ ಭೇಟಿ ನೀಡಿ ಪರಿಶೀಲಿಸಿದರು.