ಕರ್ನಾಟಕ ರಾಜ್ಯೋತ್ಸವ ನಿಮಿತ್ಯವಾಗಿ ಕಲಬುರ್ಗಿ ನಗರಕ್ಕೆ ಆಗಮಿಸಿದ ಸಚಿವ ಪ್ರಿಯಾಂಕ ಖರ್ಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ
ಕಲಬುರಗಿ ನಗರವನ್ನು ಸ್ವಚ್ಛಂವಾಗಿಡಲು ಪ್ಲಾಸ್ಟಿಕ್ ಚೀಲ ನಿಷೇಧಿಸಿ ಬಟ್ಟೆ ಕೈ ಚೀಲ ಬಳಸಲು ಸಲಹೆ ನೀಡಿದರು.
ಇತ್ತೀಚಿಗೆ ನಡೆದ ಕೆಇಎ ಸಂಸ್ಥೆ ನಡೆಸಿದ್ದ ಎಫ್.ಡಿ.ಎ ಮತ್ತು ಎಸ್ಡಿಎ ಪರೀಕ್ಷೆಯಲ್ಲಿ ಅಕ್ರಮವಾಗಿ ಕಿವಿಯಲ್ಲಿ ಬ್ಲೂಟೂತ್ ಚಿಪ್ ಹಾಕಿಕೊಂಡು ಪರೀಕ್ಷೆ ಬರೆಯಲು ಮುಂದಾದ ಅಭ್ಯರ್ಥಿಗಳನ್ನು ಬಂಧಿಸಿ . ಈ ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೆ ಅವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಲು ತಂಡ ರಚನೆ ಮಾಡಿದ್ದೇವೆ. ತಪ್ಪಿಸ್ಥರು ಯಾರೇ ಇರಲಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ .ಹೀಗೆ ಹತ್ತಾರು ವಿಷಯಗಳು ಕುರಿತು ಸುದೀರ್ಘವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕ್ನೂರ್, ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಜಿಲ್ಲಾಧಿಕಾರಿಗಳಾದ ಫೌಜೀಯಾ ತರನುಮ ಸೇರಿದಂತೆ ಮತೀತರು ಉಪಸ್ಥಿತರಿದ್ದರು.