ಚಿತ್ತಾಪುರ ತಾಲೂಕಿನ ಕಲಗುರ್ತಿ ಗ್ರಾಮದ ದೇವಾನಂದ ಕೊರಬು ಆತ್ಮಹತ್ಯೆಗೆ ಕಾರಣರಾದ ಶಿವರಾಜ ಪಾಟೀಲ್, ಪೊಲೀಸ್ ಸಿಬ್ಬಂದಿ, ಮತ್ತು ದೇವಾನಂದ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಬೇಡಿಕೆ ಇಟ್ಟು ನ್ಯಾಯಕ್ಕಾಗಿ ಕೋಲಿ ಕಬ್ಬಲಿಗ ಸಮನ್ವ ಸಮಿತಿ ವತಿಯಿಂದ ಸತತವಾಗಿ 45 ದಿನಗಳ ಕಾಲ ಧರಣಿ ಸತ್ಯಾಗ್ರ ನಡೆಸಿದ್ದರು.
45 ದಿನದ ಸತ್ಯಾಗ್ರ ಸ್ಥಳಕ್ಕೆ ಸಚಿವ ಪ್ರಿಯಾಂಕ ಖರ್ಗೆ ಭೇಟಿ ನೀಡಿ ನಾವು ನೀವು ಒಂದೇ ಗರಡಿಯಲ್ಲಿ ಬೆಳೆದು ಅಣ್ಣ-ತಮ್ಮಂದಿರು ನಾವು ಕೆಲವೊಂದು ಸಂದರ್ಭದಲ್ಲಿ ಸರ್ಕಾರದ ಚೌಕಟ್ಟಿನಲ್ಲಿ ತಾಂತ್ರಿಕವಾಗಿರುಬಹುದು ಬೇರೆ ಬೇರೆ ರೀತಿಯಲ್ಲಿ ವಿಳಂಬವಾಗಿದೆ ಇನ್ಮುಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲಿ ಟೆಂಟ್ ಹಾಕದ ಹಾಗೆ ನೋಡಿಕೊಳ್ಳುತ್ತೇನೆ ನಮ್ಮ ಸರ್ಕಾರ ಆಳುವ ಸರ್ಕಾರ ಅಲ್ಲ ಆಳಿಸುವ ಸರ್ಕಾರ ಎಂದರು. ಈ ಸಂದರ್ಭದಲ್ಲಿ
ನಿಮ್ಮ ಬೇಡಿಕೆಗಳನ್ನು ಅತಿ ಶೀಘ್ರದಲ್ಲಿ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕೋಲಿ ಸಮಾಜ ಗುರುಗಳಾದ ಶಾಂತಭೀಷ್ಮ ಚೌಡಯ್ಯನವರು ಮಾತನಾಡುತ್ತಾ ದೇವಾನಂದ್ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಮತ್ತೆ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಈ ಸಂದರ್ಭದಲ್ಲಿ ಸಚಿವರಿಗೆ ಆದೇಶಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕ್ನೂರ್, ಭೀಮಣ್ಣ ಸಾಲಿ ,ಸೇರಿದಂತೆ ದರಣಿ ಸತ್ಯಾಗ್ರಹದ ಕೇಂದ್ರ ಬಿಂದುಗಳಾದ ಅವಣ್ಣ ಮ್ಯಾಕೇರಿ, ಶರಣಪ್ಪ ತಳವಾರ್ ಬಸವರಾಜ್ ಬುದಿಹಾಳ ,ಗುಂಡು ಐನಾಪುರ್ ,ಪ್ರೇಮ್ ಕೋಲಿ ಮತೀತರು ಉಪಸ್ಥಿತರಿದ್ದರು.