ಅದ್ದೂರಿ ಆಡಂಬರ ಬೇಡ: ಸಚಿವ ಡಾ.ಜಿ.ಪರಮೇಶ್ವರ್ತುಮಕೂರು : ಭೇಟಿ, ಅಭಿನಂದನೆ, ಸನ್ಮಾನದ ರೂಪದಲ್ಲಿ ನನಗೆ ಹಾರ, ತೂರಾಯಿ, ಶಾಲು, ಪುಷ್ಪಗೂಚ್ಚ, ಶಲ್ಯಗಳನ್ನು ನೀಡುವ ಅದ್ದೂರಿ ಆಡಂಬರ ಬೇಡ ಎಂದು ಸಚಿವರಾದ ಡಾ.ಜಿ.ಪರಮೇಶ್ವರ್
ಅಭಿಮಾನಿಗಳಲ್ಲಿ. ಕರ್ಯರ್ತರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿಗಳು ಈ ರೀತಿಯ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ಇದೀಗ ಮಾಜಿ ಡಿಸಿಎಂ ಹಾಗೂ ಹಾಲಿ ಸಚಿವರಾದ ಡಾ.ಜಿ.ಪರಮೇಶ್ವರ್ ಕೂಡ ಅದ್ದೂರಿ, ಅಡಂಬರದ ಅಭಿನಂದನೆ ಸ್ವಾಗತ ಮಾಡದಂತೆ ಮನವಿಮಾಡಿದ್ದಾರೆ.ಇದು ನನ್ನ ಮನೆ-ಕಚೇರಿ ಹಾಗೂ ಸಮಾರಂಭಗಳಿಗೂ ಅನ್ವಯಿಸಲಿದೆ. ಕಾಣಿಕೆ, ಹಾರ ತೂರಾಯಿಗಳ ಮೂಲಕವೇ ಪ್ರೀತಿ ಗೌರವ ಸಲ್ಲಸಬೇಕೇಂದೇನಿಲ್ಲ, ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರಋಣಿಯಾಗಿದ್ದು, ಈಗಾಗಲೇ ಮುಖ್ಯಮಂತ್ರಿಗಳಾದ ಸಿದ್ದರಾಮ್ಯ ಅವರು ಕೈಗೊಂಡಿರುವ ನರ್ಧಾರವನ್ನು ಅಭಿನಂದಿಸುತ್ತಾ ನಾನೂ ಅವರ ಅನುಸರಿಸಲು ಬಯಸಿದ್ದೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ