ಪತ್ರಿಕಾ ಗೋಷ್ಟಿ ರಾಜೀವ ಭವನ
ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಹಾಗು ಪತ್ರಿಕಾ ವರದಿಗಳಲ್ಲಿ ಬಂದಂತೆ ಜುಬೇರ್ ಅಹ್ಮದ್ ಎಂಬಾ ವ್ಯಕ್ತಿಯು ಗೃಹಸಚಿವರ ಹೆಸರು ಹೇಳಿಕೊಂಡು ಹತ್ತಾರು ವ್ಯಕ್ತಿಗಳಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ವಿಚಾರವಾಗಿ
ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು ಆದ ಅಶ್ವತ್ಥ ನಾರಾಯಣ ಹಾಗು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ ಎ ಎಸ್ ರವರು ಪತ್ರಿಕಾ ಗೋಷ್ಟಿ ಕರೆದಿದ್ದರು
ಈ ವೇಳೆ ಮಾತನಾಡಿದ ಅಧ್ಯಕ್ಷರುಗಳು ಹಾಗು ಮುಖಂಡರುಗಳು ಈ ವಿಚಾರಕ್ಕೆ ಸಂಭಂದ ಪಟ್ಟಂತೆ ಮಾನ್ಯ ಗೃಹಸಚಿವರಿಗೂ ಹಾಗು ಆರೋಪಿತ ವ್ಯಕ್ತಿಗೂ ಯಾವುದೇ ಸಂಭಂದ ಇರುವುದಿಲ್ಲ ಸಹಜವಾಗಿ ಕ್ಷೇತ್ರದಲ್ಲಿ ಸಾವಿರಾರು ಅಭಿಮಾನಿಗಳು ಫೋಟೋ ತೆಗೆದುಕೊಂಡಿರುತ್ತಾರೆ
ಫೋಟೋ ತೆಗೆದುಕೊಂಡ ಮಾತ್ರಕ್ಕೆ ಯಾರು ಸಹ ಗೃಹಸಚಿವರಾದ ಡಾ ಜಿ ಪರಮೇಶ್ವರ ಅವರ ಆಪ್ತ ಅಥವಾ ಆಪ್ತ ಸಹಾಯಕರಾಗಲು ಸಾದ್ಯವಿಲ್ಲ
ಈತ ಚುನಾವಣಾ ಸಂದರ್ಭಗಳಲ್ಲಿ ಮಾತ್ರ ಜನಗಳ ಮದ್ಯೆ ಪಕ್ಷದ ಕಚೇರಿಗೆ ಬಂದು ಹೋಗಿರುತ್ತಾನೆ ಇತರೆ ಸಂದರ್ಭ ಗಳಲ್ಲಿ ಕಂಡು ಬಂದಿರುವುದಿಲ್ಲ
ಈ ಕ್ಷಣದಿಂದಲೇ ಆತನನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಎಲ್ಲ ರೀತಿಯ ಕಮಿಟಿಗಳ ಅಧಿಕಾರದಿಂದ ವಜಾಗೊಳಿಸಲಾಗಿರುತ್ತದೆ
ಆ ವ್ಯಕ್ತಿಗೂ ಮತ್ತು ನಮ್ಮ ಪಕ್ಷಕ್ಕೂ ಮತ್ತು ಗೃಹ ಸಚಿವರಿಗೂ ಯಾವುದೇ ರೀತಿಯ ಸಂಭಂದ ಇರುವುದಿಲ್ಲ ಎಂದು ತಿಳಿಸಿರುತ್ತಾರೆ
ಜೊತೆಗೆ ಸಾರ್ವಜನಿಕರು ಕೂಡ ಈ ರೀತಿ ಗೃಹ ಸಚಿವರ ಹೆಸರು ಹೇಳಿಕೊಂಡು ಯಾರಾದರೂ ಬಂದಾಗ ತಕ್ಷಣವೇ ಗೃಹ ಸಚಿವರ ಕಚೇರಿಗೆ ಆಗಲಿ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಗಾಗಲಿ ಅಥವಾ ರಾಜೀವ ಭವನ ಕೊರಟಗೆರೆ ಇಲ್ಲಿಗೆ ಆಗಲಿ ಕರೆ ಮಾಡಿ ತಿಳಿಸ ತಕ್ಕದ್ದು
ಇನ್ನು ಮುಂದೆ ಯಾರಾದರೂ ಗೃಹ ಸಚಿವರ ಆಪ್ತಸಹಾಯಕ ಹಾಗು ಗೃಹಸಚಿವರ ಆಪ್ತ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲೇ ಆಗಲಿ ಇತರೆ ಕಚೇರಿಗಳಲ್ಲಿ ಆಗಲಿ ಹೇಳಿಕೊಂಡು ಹಣ ವಸೂಲಿ ಮತ್ತು ಪ್ರಭಾವ ಬೀರುವ ಕೆಲಸಕ್ಕೆ ಕೈ ಹಾಕಿದರೆ ಅಂಥವರ ವಿರುದ್ಧ ದೂರು ನೀಡಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಲಾಯಿತು
ಈ ವೇಳೆ ಕೆಪಿಸಿಸಿ ಸದಸ್ಯರಾದ ಏಡಿ ಬಲರಾಮಯ್ಯ,ಮಹಾಲಿಂಗಪ್ಪ,ಮಕ್ತಿಯರ್ ಅಹ್ಮದ್, ಕೆ ಆರ್ ಓಬಳರಾಜು,ಜಯಮ್ಮ ಇತರರು ಇದ್ದರು