ತನಗಿರುವ ಅವಕಾಶಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು ಸಮಾಜದ ಅಭಿವೃದ್ಧಿ ಸಾಧಿಸುವುದು ಪತ್ರಕರ್ತನಿಗಷ್ಟೇ ಸಾಧ್ಯ ಎಂದು ಪತ್ರಕರ್ತ ಪರಶುರಾಮ ಐಕೂರ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಶುಕ್ರವಾರ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಹಳೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಹನ ಕಲೆಯ ಜೊತೆಗೆ ವಿಭಿನ್ನ ಕೌಶಲವುಳ್ಳವರಿಗೆ ಪತ್ರಿಕೋದ್ಯಮ ಅವಕಾಶಗಳ ಆಗರ. ಮುದ್ರಣ ಮಾಧ್ಯಮ ಬಯಸುವುದು ಉತ್ತಮ ಬರೆವಣಿಗೆ, ವಿಷಯವನ್ನು ಅಕ್ಷರಗಳಲ್ಲಿ ನಿರೂಪಿಸುವ ಬಗೆ. ಎಲೆಕ್ಟಾçನಿಕ್ ಮಾಧ್ಯಮ ಬಯಸುವುದು ವಿಷಯ ಹಾಗೂ ನಿರೂಪಣೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯದ ಅಭಾವದ ಕುರಿತು ಮಾಡಿದ ಕವರ್ ಸ್ಟೋರಿಯ ಪರಿಣಮ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ಕೇಂದ್ರ ಸರ್ಕಾರದಿಂದ ೨೦೫೪ ಕೋಟಿ ರುಪಾಯಿ ಅನುದಾನ ಬಿಡುಗಡೆಯಾಯಿತು. ಇಂದು ಯಾದಗಿರಿ ಜಿಲ್ಲೆಯ ಪ್ರತೀ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತಿದೆ. ಇವೆಲ್ಲವೂ ಅಭಿವೃದ್ಧಿ ಪತ್ರಿಕೋದ್ಯಮ. ಇದು ಪತ್ರಕರ್ತನಿಗಿರುವ ಸಾಮರ್ಥ್ಯ ಎಂದರು.
ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರಿಗೆ ಗರಿಷ್ಠ ಅವಕಾಶ’
Leave a comment
Leave a comment