ನಾರಾಯಣಪೂರ ಶಕ್ತಿ ಲಿಂಗ ಆಶ್ರಮದ ಶ್ರಾವಣ ಮಾಸದ ಆಹ್ವಾನ ಕಾರ್ಯಕ್ರಮ
ಶಹಾಪೂರ್, ಸುರಪೂರ, ಜೇವರ್ಗಿ ತಾಲೂಕುಗಳು ಸಗರನಾಡು ಎಂದು ಕರೆಯಲಾಗುತ್ತದೆ .ಇಂತಹ ಸಗರ ನಾಡಿನಲ್ಲಿ ಅನೇಕ ಸಾಧು-ಸತ್ಪುರುಷರು ಮಠ ಮಂದಿರಗಳು ಜಗದ್ ಕಲ್ಯಾಣಕ್ಕೆ ತಮ್ಮ ಕೊಡುಗೆ ನೀಡುತ್ತಿವೆ.
ಅಂತಹ ಮಠಗಳ ಸಾಲಿನಲ್ಲಿ ಮೇಲಿನಗಡ್ಡಿ ನಾರಾಯಣಪೂರ ಗ್ರಾಮ ಲಿಂಗಸೂರು ಸಮೀಪ ತಾಲೂಕ ಹುಣಸಗಿ ಪೂಜ್ಯ ಹವಾ ಮಲ್ಲಿನಾಥ ಸ್ವಾಮೀಜಿಗಳು ಸ್ಥಾಪಿಸಿದ ಶಕ್ತಿಲಿಂಗ ಆಶ್ರಮದ ಪೂಜ್ಯರಾದ ಶ್ರೀ ಮಹಾದೇವ್ ಮುತ್ಯಾರವರು ಆಶ್ರಮದಲ್ಲಿ ದಿನಾಂಕ 26 -೦8 -2023ರಿಂದ 15-09-2023ರವರೆಗೆ ಅಂದರೆ 21 ದಿವಸಗಳ ಮೌನ ಅನುಷ್ಠಾನ ಕೈಗೊಂಡಿದ್ದರು.
ಪವಿತ್ರ ಶ್ರಾವಣ ಮಾಸದಲ್ಲಿ ನಡೆದ ಈ ಅನುಷ್ಠಾನವನ್ನು ದಿನಾಂಕ 15- 9 -2023 ರಂದು ಮಂಗಳಗೊಳ್ಳುತ್ತದೆ.
ಪೂಜ್ಯ ಹವಾ ಮಲ್ಲಿನಾಥ ಸ್ವಾಮೀಜಿಗಳು ಶ್ರೀ ಮಲ್ಲಯ್ಯ ಮುತ್ಯ ಅವರ ಕೃಪಾ ಆಶೀರ್ವಾದದಿಂದ ಜೈ ಭಾರತ್ ಮಾತಾ ಸೇವಾ ಸಮಿತಿ ನವದೆಹಲಿ ಆಶ್ರಮದಲ್ಲಿ ಈ ಮಠದ ಪೂಜ್ಯರಾದ ಶ್ರೀ ಪರಮಪೂಜ್ಯ ಮಹದೇವ್ ಮುತ್ಯಾ ಅವರ ನೇತೃತ್ವದಲ್ಲಿ ಪೂಜ್ಯಶ್ರೀ ಮಲ್ಲಯ್ಯ ಮುತ್ಯ ಅವರ ಸಾನಿಧ್ಯದಲ್ಲಿ ಅದ್ದೂರಿಯಾಗಿ ಈ ಶ್ರಾವಣ ಮಾಸದ ಮೌನ ಅನುಷ್ಠಾನ ಮಂಗಳಗೊಳ್ಳಲಿದೆ . ಈ ಸಂದರ್ಭದಲ್ಲಿ ದಿನ ನಿತ್ಯ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು . ದಿನನಿತ್ಯ ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ದಿನನಿತ್ಯ ನಿರಂತರ ದಾಸೋಹ ಸೇವೆ ಕೂಡ ನಡೆಯಿತು.
ದಿನಾಂಕ 15 -9- 2023ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಸುತ್ತು ಮುತ್ತಲಿನ ಗ್ರಾಮಸ್ಥರು ಆಗಮಿಸಿ ಡಾ// ಮಲ್ಲಯ್ಯ ಮುತ್ಯಾ ಹಾಗೂ ಪೂಜ್ಯ ಮಹಾದೇವ ಮುತ್ಯಾಅವರ ಕೃಪಾ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೋರಿಕೆ.
ಪೂಜ್ಯಶ್ರೀ ಮಹಾದೇವ ಮುತ್ಯಾರ ಅವರು ಅಫಜಪೂರ ತಾಲೂಕಿನ ಸ್ಟೇಷನ್ ಗಾಣಗಾಪೂರದವರು ತಂದೆ ಬಾಬುರಾವ್ ತಾಯಿ ಅನುಸೂಬಾಯಿ ಅವರ ಉದರದಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಇವರು ದೇವರು, ಭಕ್ತಿ ,ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನೇ ತಾವು ತೋಡಿಗಿಸಿಕೊಂಡಿರುವುದನ್ನು ನೋಡಿದ ಪೂಜ್ಯ ನಿರುಗುಡಿ ಮಲ್ಲಯ್ಯ ಮುತ್ಯಾ ರವರು ಶ್ರೀ ಮಹದೇವ್ ಮುತ್ಯಾ ಅವರನ್ನು ಹುಣಸಗಿ ತಾಲೂಕಿನ ಲಿಂಗಸೂರು ಸಮೀಪ ಮೇಲಿನ ಗಡ್ಡಿ ಪ್ರದೇಶದಲ್ಲಿ ಶ್ರೀ ಮಲ್ಲಯ್ಯ ಮುತ್ಯಾ ಅವರು ಸ್ಥಾಪಿಸಿದ ಶ್ರೀ ಶಕ್ತಿ ಲಿಂಗ ಆಶ್ರಮದ ಉಸ್ತುವಾರಿಯನ್ನು ಪೂಜ್ಯ ಮಹದೇವ್ ಮುತ್ಯಾರವರಿಗೆ ವಹಿಸಲಾಯಿತು. ಅಂದಿನಿಂದ ಇಂದಿನವರೆಗೂ ಈ ಮಠದ ಬೆಳವಣಿಗೆಗೆ ಹಾಗೂ ಈ ಭಾಗದ ಭಕ್ತರು ಧಾರ್ಮಿಕ ಹಸಿವನ್ನು ಹಿಂಗಿಸುತ್ತಿದ್ದಾರೆ.
ಪೂಜ್ಯ ಮಹಾದೇವ ಮುತ್ಯಾ ಅವರು ಈ ಹಿಂದೆ ಎರೆಡು ಸಲ ಮೌನಾನುಷ್ಠಾನ ಕೈಗೊಂಡಿದ್ದಾರೆ. ಈ ಬಾರಿ ಅನುಷ್ಠಾನ ಕೈಗೊಂಡಾಗ ಶ್ರಾವಣ ಮಾಸದ ಈ ಪವಿತ್ರ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರಣರಾದರು.