ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ : ಅನಿತಾ ವಳಕೇರಿ
ಕಲ್ಬುರ್ಗಿ ಆ 1:- ಪ್ರತಿಯೊಬ್ಬರೂ ತಮ್ಮ ತಮ್ಮ ನೇತ್ರದಾನ ಮಾಡಿ ಜಗತ್ತನ್ನೇ ನೋಡದ ಅಂದರ ಬಾಳಿಗೆ ಬೆಳಕಾಗಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅನಿತಾ ಪವನ್ ಕುಮಾರ್ ವಳಕೇರಿ ಹೇಳಿದರು.
ಆ 1 ರಂದು ತಾಲೂಕಿನ ಖಣದಾಳ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಶ್ರೀ ವೆಂಕಟಗಿರಿ ಗ್ರಾಮೀಣ ಅಭಿವೃದ್ಧಿ ಸೌಹಾರ್ದ ಸಹಕಾರಿ ನಿಯಮಿತ ತೆಲ್ಕರ್ ನಗರ ನಂದಿಕೂರ್ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ಕೆಸರಟಗಿಯವರು ಹಾಗೂ ಅನಿತಾ ಪವನ್ ಕುಮಾರ ವಳಕೇರಿವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಣ್ಣಿನ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮವನ್ನು ಉದ್ಘಾಟನೆ ಮಾತನಾಡುತ್ತಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರು ಸುರೇಶ್ ಬಡಿಗೇರ್ ಮಾನವನು ಪಂಚೇಂದ್ರಿಗಳಲ್ಲಿ ಕಣ್ಣು ಅತ್ಯಂತ ಮಹತ್ವದ ಅಂಗ ಒಬ್ಬ ವ್ಯಕ್ತಿ ಸತ್ತ ಮೇಲೆ ಅವರ ಕಣ್ಣುಗಳನ್ನು ಮಣ್ಣು ಪಾಲು ಮಾಡದೆ, ಆ ನೇತ್ರಗಳನ್ನು ಅಂಧರಿಗೆ ಜೋಡಣೆ ಮಾಡುವುದರಿಂದ ಅವರಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ಹೇಳಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಶ್ರೀ ರವೀಂದ್ರ ಪಾಟೀಲ ಸಲಹೆಗಾರರು ತಮ್ಮ ಶ್ರೀ ವೆಂಕಟಗಿರಿ ಗ್ರಾಮೀಣಾಭಿವೃದ್ಧಿ ಸೌಹಾರ್ದ ಸಹಕಾರಿಯ ನಿಯಮಿತ ಸಂಸ್ಥೆಯಿಂದ ಅನೇಕ ಸಾಮಾಜಿಕ ಮತ್ತು ಆರೋಗ್ಯ ಶಿಬಿರಗಳನ್ನು ನಿರಂತರವಾಗಿ ಹಮ್ಮಿಕೊಳುತ್ತಾ ಬರಲಾಗುತ್ತಿದೆ , ಮಹಿಳಾ ಜಾಗೃತಿ ಶಿಬಿರ, ಹಿರಿಯ ನಾಗರಿಕತೆಯ ಉಚಿತ ಆರೋಗ್ಯ ಶಿಬಿರ, ದಂತ ಚಿಕಿತ್ಸೆ, ಚಿಕಿತ್ಸೆ ಶಾಸ್ತ್ರ , ಹಾಗೂ ಕ್ಯಾನ್ಸರ್ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಕಾರ್ಯಕ್ರಮಗಳಿಂದ ಜನಸೇವೆಯ ಮಾಡುತ್ತ ಬರಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖಣದಾಳ ಪ್ರೌಢಶಾಲೆಯ ಸುಮಾರು 250 ಕೂ ಹೆಚ್ಚು ವಿದ್ಯಾರ್ಥಿಯರು ವಿದ್ಯಾರ್ಥಿನಿಯರು ನೇತ್ರ ಚಿಕಿತ್ಸೆಯನ್ನು ಅನುಗ್ರಹ ಕಣ್ಣಿನ ಆಸ್ಪತ್ರೆಯ ವೈದ್ಯರು ತಪಾಸಣೆ ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ 52 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಶನಿವಾರ ಬರಲು ವೈದ್ಯರು ತಿಳಿಸಿರುತ್ತಾರೆ.
ಸಮಾರಂಭದಲ್ಲಿ ಚಂದ್ರಕಾಂತ ಕೆ ಪೂಜಾರಿ ನೂತನ ಅಧ್ಯಕ್ಷರು ಗ್ರಾಮ ಪಂಚಾಯಿತಿ ನಂದಿಕೂರ, ಪ್ರೇಮ್ ಕುಮಾರ್ ರಾಥೋಡ್ ನೂತನ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಖಣದಾಳ, ಶಾಲೆಯ ಮುಖ್ಯ ಗುರುಗಳು ರಮೇಶ್ ಕುಮಾರ್ ದೇವಣಿ ,ಶರಣಗೌಡ ಪಾಟೀಲ್ ನಂದಿಕೂರ್, ಬಸವಲಿಂಗ ಪಾಟೀಲ್, ಸಂಪತ್ ಕುಮಾರ ಬಿ ವಳಕೇರಿ, ಶರಣು ಸುಬೇದಾರ್, ಗುಂಡುರಾಯ ಕಣ್ಣಿ, ವಿಠಾಬಾಯಿ ಪಾಟೀಲ, ಅನಿಲ ಕೊರಭಾ.