ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಶಹಾಬಾದ್ ತಾಲೂಕಿನಲ್ಲಿ ಪ್ರಗತಿಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷದ ಮುಖಂಡರುಗಳು ಬೃಹತ್ ಪ್ರತಿಭಟನ ಮೆರವಣಿಗೆಯನ್ನು ಮಾಡಿದರು.
ನಗರದ ಬಸವೇಶ್ವರ ವೃತದಿಂದ ಮೆರವಣಿಗೆ ಪ್ರಾರಂಭಗೊಂಡು ಮುಖ್ಯ ರಸ್ತೆಯಿಂದ ಸಂಚರಿಸಿ ನೆಹರು ಚೌಕ್ ನಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ರಾಜ್ಯ ದಲಿತ ನಾಯಕರಾದ ಮರಪ್ಪ ಹಳ್ಳಿ ಮಾತನಾಡುತ್ತಾ ದೇಶದ ಪ್ರಧಾನ ಮಂತ್ರಿಗಳೆ ಎರಡುವರೆ ತಿಂಗಳಾದರೂ ಈ ವಿಷಯದ ಬಗ್ಗೆ ಒಂದು ಶಬ್ದವು ಕೂಡ ಮಾತನಾಡದಿರುವುದು ನಾಚಿಕೆಯ ಸಂಗತಿ ಆಗಿದೆ ಎಂದು ಹೇಳಿದರು. ಪೊಲೀಸ್ ಇಲಾಖೆ ಗುಪ್ತಚಾರ ಇಲಾಖೆ ಹಲವಾರು ಇಲಾಖೆಗಳಿಂದ ಕ್ಷಣ ಕ್ಷಣಕ್ಕೂ ಮಾಹಿತಿ ಪಡೆಯುವಂತವರು ಇಷ್ಟು ದೊಡ್ಡ ಘಟನೆ ಆದರೂ ಕೂಡ ಪ್ರತಿಕ್ರಿಯೆ ಮಾಡುತ್ತಿಲ್ಲ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಘಟನೆಗಳು ನಿರಂತರವಾಗಿ ದೇಶದಲ್ಲಿ ನಡೆಯುತ್ತಿವೆ ಇವುಗಳನ್ನೆಲ್ಲ ನಿಲ್ಲಿಸಬೇಕೆಂದು ಹೇಳಿದರು. ಅದೇ ರೀತಿಯಾಗಿ ಡಾಕ್ಟರ್ ಎಮ್ ಎ ರಶೀದ್, ಕೃಷ್ಣಪ್ಪ ಕರ್ಣಿಕ್, ಗಣಪತರಾವ್ ಕೆ ಮಾನೆ, ಗುಂಡಮ್ಮ ಮಡಿವಾಳ, ಸಿಸ್ಟರ್ ಲೀಲಿಯಟ್, ಸಾಬಣ್ಣ ಗುಡುಬಾ, ಸೆಕ್ ಶಾಹಿರಾ ರವರು ಪ್ರತಿಭಟನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಪೂಜಪ್ಪ ಮೆತ್ರೆ, ಬಸವರಾಜ್ ಮಯೂರ್, ಜಗನ್ನಾಥ ಎಸ್ ಹೆಚ್, ಡಾಕ್ಟರ್ ಅಹಮದ್ ಪಟೇಲ್, ಪ್ರವೀಣ್ ರಾಜನ್, ಸಿದ್ದು ಚೌದರಿ . ಸಿರಿದಂತೆ ಹಿಂದೂ ಮುಸ್ಲಿಂ ಕ್ರೈಸ್ತ ಮತ್ತು ಬೌದ್ಧ ಧರ್ಮದ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ವಿರೋಧಿಸಿ ಶಾಬಾದನಲ್ಲಿ ಬೃಹತ್ ಪ್ರತಿಭಟನೆ
Leave a comment
Leave a comment