Kalburgi ಜಿಲ್ಲಾ ನ್ಯಾಯವಾದಿಗಳ ಸಂಘ ಮತ್ತು ಹೈಕೋರ್ಟ್ ಜಿಲ್ಲಾ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ
ವಕೀಲರಾದ ಈರಣ್ಣಗೌಡ ಪೊಲೀಸ್ ಪಾಟೀಲ್ ಅವರನ್ನು ಹಾಡು ಹಗಲೇ ಬರ್ಬರವಾಗಿ ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆಗೆದ ಆರೋಪಿಗಳನ್ನು ಕೂಡಲೇ ಬಂಧಿಸಿ ತೀವ್ರ ಶಿಕ್ಷೆ ನೀಡಬೇಕು ಈ ರೀತಿ ಹಾಡು ಹೋಗಲೇ ವಕೀಲನನ್ನು ಅಟ್ಟಹಾಡಿಸಿ ಕೊಲೆಗೈದಿರುವದನ್ನು ನೋಡಿದರೆ ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ತಿಳಿದು ಬರುತ್ತದೆ ಈ ರೀತಿ ಕೊಲೆಗೈದಿರುವುದು ನೋಡಿದರೆ ವಕೀಲರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ತಿಳಿದು ಬರುತ್ತದೆ ಎಂದರು.
ಜಿಲ್ಲೆಯ ಸರ್ದಾರ್ ವಲ್ಲಬಾಯ್ ಪಟೇಲ್ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಅಕ್ರೋಶ ಹೊರ ಹಾಕಿದ ವಕೀಲರು ನಂತರ ಪಟೇಲ್ ವೃತ್ತದಿಂದ ಜಿಲ್ಲಾ ಆಯುಕ್ತರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಮುಖಾಂತರ ನಗರ ಪೊಲೀಸ್ ಆಯುಕ್ತಾರಾದ ಆರ್.ಚೇತನ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನ್ಯಾಯದ ಸಂಘ ಕಲ್ಬುರ್ಗಿ ಮತ್ತು ಹೈಕೋರ್ಟ್ ವಕೀಲರ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.