ಕಲ್ಬುರ್ಗಿಯಲ್ಲಿಂದು ನ್ಯಾಯವಾದಿಗಳ ಸಂಘ ವತಿಯಿಂದ ಬೃಹತ್ ಪ್ರತಿಭಟನೆ!!!
ಕಲ್ಬುರ್ಗಿ ನ್ಯಾಯವಾದಿ ಸಂಘ ಅಧ್ಯಕ್ಷರಾದ ಗುಪ್ತಲಿಂಗ್ ಎಸ್ ಪಾಟೀಲ್ ನೇತೃತ್ವದಲ್ಲಿ ಕಲ್ಬುರ್ಗಿ . ಚಿಕ್ಕಮಂಗಳೂರಿನ ವಕೀಲರಾದ ಪ್ರೀತಂ ಮತ್ತು ಇತರ ನ್ಯಾಯವಾದಿಗಳ ಮೇಲೆ ಕಾನೂನು ಬಹಿರವಾಗಿ ಹಲ್ಲೆ ಮಾಡಿ ಮಾನಸಿಕ ಹಿಂಸೆ ನೀಡಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ ಮುಖಾಂತರ ಕಲ್ಬುರ್ಗಿ ಜಿಲ್ಲಾಧಿಕಾರಿಗಳಾದ ಫೌಜೀಯಾ ತರನುಂ ಅವರಿಗೆ ಮನವಿ ಸಲ್ಲಿಸಿದರು.
ಚಿಕ್ಕಮಂಗಳೂರಿನ ವಕೀಲ ಸಂಘದ ಸದಸ್ಯರಾದ ಶ್ರೀ ಪ್ರೀತಂ ರವರ ಮೇಲೆ ಹೆಲ್ಮೆಟ್ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರಾದ ಪ್ರೀತಂ ಅವರ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆಸಿ ಒಬ್ಬ ಹೆಡ್ ಕಾನ್ಸ್ಟೇಬಲ್ ಮತ್ತು ಮೂವರು ಪೊಲೀಸ್ ಪೇದೆಗಳನ್ನು ವಿರುದ್ಧ ಐಪಿಸಿ 307 ,324, 506 ಸೆಕ್ಷನ್ಗಳ ಅಡಿಯಲ್ಲಿ ಎಫ್ಐ.ಆರ್ ದಾಖಲಿಸಿಕೊಂಡು ಇಲಾಖಾ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ವಿಕ್ರಂ ಆಮಟೆ ಹೇಳಿದರು, ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಹನಗಳನ್ನು ತಡೆಗಟ್ಟಿ ರಾತ್ರಿ ಸಮಯದಲ್ಲಿ ಹೆಲ್ಮೆಟ್ ವಿಚಾರದ ಕುರಿತು ಠಾಣೆಗೆ ಕರೆದುಕೊಂಡು ಹೋಗಿ ವಕೀಲರ ಮೇಲೆ ದೌರ್ಜನ್ಯ ಮತ್ತು ಅವಮಾನ ಮಾಡಬೇಕೆನ್ನುವ ದುರುದ್ದೇಶ ಹೊಂದಿರುತ್ತಾರೆ. ತದನಂತರ ಜಿಲ್ಲಾಧಿಕಾರಿಗಳ ಸದರಿ ನ್ಯಾಯವಾದಿಯ ಮೇಲೆ ರಾತ್ರಿ ಇಡೀ ಹಲ್ಲೇ ಮಾಡಿ ರಕ್ತ ಗಾಯಗೊಳಿಸಿ ಇಡೀ ವಕೀಲ ವೃತ್ತಿಗೆ ಅವಮಾನ ಮಾಡಿದ್ದು ಇರುತ್ತದೆ.
ಅಷ್ಟೇ ಅಲ್ಲದೆ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡು ಒಬ್ಬ ಅಮಾಯಕ ವಕೀಲರ ಮೇಲೆ ಪೊಲೀಸ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತೊಂದರೆ ನೀಡಿದ್ದು ಈ ವಿಷಯವಾಗಿ ನ್ಯಾಯಾಲಯದ ಗಮನಕ್ಕೆ ತಂದಿರುತ್ತೇವೆ ವಕೀಲರಾದ ಪ್ರೀತಂ ರವರನ್ನು ಪೊಲೀಸ್ ಬಂದನು ಕೊಳಪಡಿಸಿರುತ್ತಾರೆ ಅಷ್ಟೇ ಅಲ್ಲದೆ ಸದರಿ ಪ್ರಕರಣದ ವಿಚಾರಣೆಗಾಗಿ ಹೋದ ಜಿಲ್ಲಾ ನ್ಯಾಯಾಧೀಗಳ ಮೇಲೆ ಉದ್ದೇಶಪೂರ್ವಕವಾಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಿರುತ್ತಾರೆ ಮತ್ತು ಚಿಕ್ಕಮಂಗಳೂರು ಪೊಲೀಸ್ ತಮ್ಮ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಸಿಬ್ಬಂದಿಯನ್ನು ಕಾನೂನಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಪೊಲೀಸರು ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಪ್ರೀತಂ ಮತ್ತು ಇತರ ನ್ಯಾಯವಾದಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸರ್ಕಾರವನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈ ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ. ಒಂದು ವೇಳೆ ಈ ಪ್ರಕರಣವನ್ನು ಮುಚ್ಚಿ ಹಾಕಿದರೆ ಮುಂದೆ ನ್ಯಾಯವಾದಿಗಳ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ. ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗುಪ್ತಲಿಂಗ.ಎಸ್. ಪಾಟೀಲ್, ಕಾರ್ಯದರ್ಶಿಗಳಾದ ಬಸವಲಿಂಗಸ್ ನಾಸಿ, ಯುವ ವಕೀಲರು ಗುರುರಾಜ್ ಭಂಡಾರಿ, ಉಪಾಧ್ಯಕ್ಷರಾದ ಧರ್ಮಣ್ಣ ಎಸ್ ಜೈನಾಪುರ್, ಜೈಶೀಲ ಜಿ ಬಡೋಲೇ, ಎಸ್ .ಕೆ. ಚಿಕ್ಕಳ್ಳಿ, ಸಿದ್ದಣ್ಣ ಸಾಹುಕಾರ್ ,ಮಡಿವಾಳಪ್ಪ ರತೀಶ್ ಪಾಟೀಲ್, ಸೇರಿದಂತೆ ಹಲವು ವಕೀಲರು ಉಪಸ್ಥಿತರಿದ್ದರು.