ಬದುಕುವ ಸ್ವಾತಂತ್ರ್ಯಕ್ಕಾಗಿ ಸ್ಲಂ ಜನರಿಂದ ಜನಸತ್ಯಾಗ್ರಹ
ಕಾರ್ಪೊರೇಟಿಕರಣದಿಂದ ಅಸಮಾನತೆಯ ಭಾರತ ನಿರ್ಮಾಣವಾಗುತ್ತಿದೆ – ಎ. ನರಸಿಂಹಮೂರ್ತಿ
77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿವತಿಯಿಂದ ನಗರವಂಚಿತ ಸಂಪನ್ಮೂಲ ಕೇಂದ್ರದಿಂದ ಬದುಕುವ ಸ್ವಾತಂತ್ರ್ಯಕ್ಕಾಗಿ ಸ್ಲಂ ಜನರಿಗೆ ಮತ್ತು ನಿವೇಶನ ವಂಚಿತ ಬಡವರಿಗೆ ಭೂಮಿ, ವಸತಿಗೆ ಆಗ್ರಹಿಸಿ ಜನ ಸತ್ಯಾಗ್ರಹವನ್ನು ನಡೆಸಲಾಯಿತು.
ಜನಸತ್ಯಾಗ್ರಹವನ್ನು ರಾಷ್ಟ್ರ ಧ್ವಜಕ್ಕೆ ಗೌರವಸಲ್ಲಿಸಿ ರಾಷ್ಟ್ರ ಗೀತೆಯೊಂದಿಗೆ ಪ್ರಾರಂಭಿಸಲಾಯಿತು ಸತ್ಯಾಗ್ರಹಿಗಳನ್ನು ಉದ್ದೇಶಿಸಿ ಸ್ಲಂ ಜನಾಂದೋಲನ ಕರ್ನಾಟಕದ ಎ. ನರಸಿಂಹಮೂರ್ತಿ ಭಾರತ ದೇಶ 1947 ರಲ್ಲಿ ಬ್ರಿಟೀಷ್ರಿಂದ ಪಡೆದ ರಾಜಕೀಯ ಸ್ವಾತಂತ್ರ್ಯ 77 ವರ್ಷ ಕಳೆದರು ದೇಶದಲ್ಲಿರುವ ದಲಿತರಿಗೆ ಮಹಿಳೆಯರಿಗೆ, ಆದಿವಾಸಿಗಳಿಗೆ, ಹಿಂದುಳಿದ ಸಲ್ಪಸಂಖ್ಯಾತ ಸಮುದಾಯಗಳಿಗೆ, ಅಲೆಮಾರಿಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗದಿರುವುದರಿಂದ ಅಸಮಾನತೆಯ ಭಾರತ ಸೃಷ್ಠಿಯಾಗಿ ಬಡವರನ್ನು ಸೃಷ್ಟಿಸಿದೆ ದೇಶದಲ್ಲಿ ಬಡತನ ನಿರ್ಮೂಲನೆ ಮಾಡುವ ಯಾವುದೇ ಇಚ್ಛಾಶಕ್ತಿ ಸರ್ಕಾರಗಳಿಗೆ ಇಲ್ಲದ ಪರಿಣಾಮ ಇಂದು ಅಮೃತ ಮಹೋತ್ಸವದ ವಸ್ತಿಲಿನಲ್ಲಿ ಭಾರತ ವಿಶ್ವಗುರುವಾಗಲು ದಾಪುಗಾಲು ಇಟ್ಟಿದ್ದರು ದೇಶದಲ್ಲಿ ಮನೆ ಇಲ್ಲದವರು ಹರ್ ಗರ್ ತಿರಂಗ ಕರೆಗೆ ತಿರಂಗ ಆರಿಸಲು ಮನೆ ಇಲ್ಲದೇ ನಿರಾಶ್ರಿತರ