ನನ್ನ ಜೀವನವೇ ನನ್ನ ಸಂದೇಶ ಎಂದ ಮಹಾತ್ಮಗಾಂಧಿ,ಜೈ ಜವಾನ್,ಜೈ ಕಿಸಾನ್ ಎಂಬ ಸಂದೇಶದ ಮೂಲಕ ರೈತರು ಮತ್ತು ಸೈನಿಕರು ಈ ದೇಶದ ಎರಡು ಕಣ್ಣುಗಳು ಎಂದು ತೋರಿಸಿಕೊಟ್ಟ÷ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟçಪಿತ ಮಹಾತ್ಮಗಾಂಧಿ ಅವರು ೧೫೪ ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿç ಅವರ ೧೧೯ನೇ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತಿದ್ದ ಅವರು,ಈ ಇಬ್ಬರು ಮಹನೀಯರು ಕಾಂಗ್ರೆಸ್ ಪಕ್ಷದವರು ಎಂಬುದು ಹೆಮ್ಮೆಯ ಸಂಗತಿ ಎಂದರು.
ಅAದು ಬ್ರಿಟಿಷರು ಕಂದಾಯದ ಹೆಸರಿನಲ್ಲಿ ಈ ದೇಶದ ರೈತರು ಬೆಳೆದ ಬೆಳೆಗಳನ್ನು ತಮ್ಮ ವಶ ಮಾಡಿಕೊಂಡರೆ, ಇಂದು ಜಿ.ಎಸ್.ಟಿ ಮೂಲಕ ಒಕ್ಕೂಟ ಸರಕಾರ ಜನಸಾಮಾನ್ಯರ ದುಡಿಮೆಯನ್ನು ಕಬಳಿಸುತ್ತಿದೆ.ಅಂದು ಗಾಂಧೀಜಿಯವರು ಹೋರಾಟ ಮಾಡಿದ ರೀತಿಯಲ್ಲಿಯೇ,ಒಕ್ಕೂಟ ಸರಕಾರದ ವಿರುದ್ದ ಜನಸಾಮಾನ್ಯರು ಹೋರಾಟ ರೂಪಿಸಬೇಕಿದೆ. ಗಾಂಧಿಜಿಯವರು ಸತ್ಯ ಮತ್ತು ಅಹಿಂಸೆ ಹಾಗೂ ಲಾಲ್ ಬಹದ್ದೂರ್ ಶಾಸ್ತಿçಯವರ ಜೈ ಜವಾನ್,ಜೈ ಕಿಸಾನ್,ಅಲ್ಲದೆ ಅವರ ಸರಳ ಜೀವನ ನಮಗೆಲ್ಲರಿಗೂ ಮಾದರಿಯಾಗಬೇಕು.ಅವರ ತತ್ವ ಸಿದ್ದಾಂತಗಳನ್ನು ನಾವೆಲ್ಲರೂ ಅನುಸರಿಸುವುದೇ ಅವರಿಗೆ ಸಲ್ಲಿಸುವ ಗೌರವ ಎಂದು ಚಂದ್ರಶೇಖರಗೌಡ ನುಡಿದರು.
ಡಿಸಿಸಿ ಮಾಜಿ ಜಿಲ್ಲಾಧ್ಯಕ್ಷ ಕೆಂಚಮಾರಯ್ಯ ಮಾತನಾಡಿ,ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತಿçಗಳು ಅವರುಗಳನ್ನು ಈ ದೇಶದ ಜನರು ಸರಿಯಾಗಿ ಅರ್ಥಮಾಡಿಕೊಂಡು ಮುನ್ನೆಡೆದರೆ,ಇಂದು ಜನರನ್ನು ಕಾಡುತ್ತಿರುವ ದ್ವೇಷ, ಅಸೂಯೇ, ಧರ್ಮ ಧರ್ಮಗಳ ನಡುವಿನ ಸಂಘರ್ಷಕ್ಕೆ ಇತ್ರಿಶ್ರೀ ಹಾಡಬಹುದು.ಮಹಾತ್ಮಗಾಂಧಿಯ ಬದಲು ಗೂಡ್ಸೆಯನ್ನು ಪೂಜಿಸಲು ಹೊರಟಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬಹುದು ಎಂದರು.
ಇAದು ಮೋದಿ ಮತ್ತು ಅವರ ಅನುಯಾಯಿಗಳು ಬೊಬ್ಬೆ ಹೊಡೆಯುತ್ತಿರುವ ಮಹಿಳಾ ಮೀಸಲಾತಿ ಎಂಬುದು ೨೦೩೪ರ ಚುನಾವಣೆ ವೇಳೆ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಅದುವರೆಗೂ ಅದು ಮಹಿಳೆಯರಿಗೆ ಕನ್ನಡಿಯೊಳಗಿನ ಗಂಟು. ದೇಶದಲ್ಲಿ ಮಣಿಪುರ ಗಲಭೆಯಿಂದ,ಇAಡಿಯಾ ಒಕ್ಕೂಟದಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಮೋದಿ ಹೂಡಿದ ಕುತಂತ್ರವಿದೆ.ಇದನ್ನು ಮಹಿಳೆಯರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದು ಕೆಂಚಮಾರಯ್ಯ ನುಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಅವವರುಗಳು ತಮ್ಮ ಜೀವದ ಹಂಗು ತೊರೆದು ಈ ದೇಶಕ್ಕಾಗಿ ದುಡಿದಿದ್ದಾರೆ. ಅಂದು ಬ್ರಿಟಿಷರು ಸಣ್ಣ ಸಣ್ಣ ಸಂಸ್ಥಾನಗಳ ನಡುವೆ ದ್ವೇಷ ತಂದಿಟ್ಟು ಇಡೀ ರಾಷ್ಟçವನ್ನೇ ವಶಪಡಿಸಿಕೊಂಡAತೆ,ಬಿಜೆಪಿ ಸಹ ಧರ್ಮ,ಜಾತಿಗಳ ನಡುವೆ ದ್ವೇಷ ತಂದಿಟ್ಟು ರಾಜಕೀಯ ಅಧಿಕಾರವನ್ನು ಮುಂದುವರೆಸಲು ಹೊರಟಿದೆ.ಇದಕ್ಕೆ ಎಂದಿಗೂ ಅಸ್ಪದ ನೀಡದೆ,ಬಡವರ ಹೊಟ್ಟೆಯ ಮೇಲೆ ಹೊಡೆದು, ಶ್ರೀಮಂತರ ಪರ ನಿಯಮಗಳನ್ನು ರೂಪಿಸುತ್ತಿರುವ ಒಕ್ಕೂಟ ಸರಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲರೂ ತಮ್ಮ ನಡುವಿನ ಬಿನ್ನಾಭಿಪ್ರಾಯ ಮರೆತು ಒಂದಾಗಿ ೨೦೨೪ರ ಲೋಕಸಭಾ ಚುನಾವಣೆ ಎದುರಿಸಿ, ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಮುಖಂಡರಾದ ಅಸ್ಲಾಂಪಾಷ, ಷಣ್ಮುಖಪ್ಪ, ಮಾಜಿ ಅಧ್ಯಕ್ಷ ರಾಮಕೃಷ್ಣಪ್ಪ ಸೇರಿದಂತೆ ಹಲವರು ಮಾತನಾಡಿದರು. ಹೆಚ್.ಸಿ.ಹನುಮಂತಪ್ಪ,ರೆಡ್ಡಿ ಚಿನ್ನಯಲಪ್ಪ, ಆಡಿಟರ್ ಮೊಹಮದ್ ಸುಲ್ತಾನ್, ಕಾರ್ಪೋರೇಟರ್ ಮಹೇಶ್, ಮೆಹಬೂಬ್ ಪಾಷ, ಎ.ಡಿ.ನರಸಿಂಹರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನನ್ನ ಜೀವನವೇ ನನ್ನ ಸಂದೇಶ ಎಂದ ಮಹಾತ್ಮಗಾಂಧಿ

Leave a comment
Leave a comment