ತುಮಕೂರು(ಅ.೨೮):- ಇತಿಹಾಸಪೂರ್ವ ಭಾರತದ ಸಾಮಾಜಿಕ, ರಾಜಕೀಯ ಆಡಳಿತ ನೀತಿ, ಭೌಗೋಳಿಕ ಚಿತ್ರಣವನ್ನು ರಾಮಾಯಣ ಮಹಾಕಾವ್ಯದ ಮೂಲಕ ವಿಶ್ವಕ್ಕೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿ ವಿಶ್ವದಾರ್ಶನಿಕ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.ಶನಿವಾರ ತುಮಕೂರಿನ ಮರಳೂರು ದಿಣ್ಣೆಯ ವಾಲ್ಮೀಕಿ ಭವನದಲ್ಲಿ ನಡೆದ ‘ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ’ಯ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು. ಶ್ರೀರಾಮನ ತತ್ವಾರ್ಧಶಗಳು, ಆಡಳಿತದ ಸತ್ಯತೆಯನ್ನು ಕಟ್ಟಿಕೊಟ್ಟಿದ್ದಾರೆ. ರಾಮಾಯಣ ಕಾವ್ಯ ಇಂದಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಸಾವಿರಾರು ವರ್ಷಗಳ ಹಿಂದೆ, ಇತಿಹಾಸದ ಕಲ್ಪನೆಯೇ ಇಲ್ಲದ ಕಾಲಘಟ್ಟದಲ್ಲಿ ಭಾರತದ ರಾಜಕೀಯ ಆಡಳಿತದ ಚಿತ್ರವನ್ನು ಬರೆದು ವಿಶ್ವಕ್ಕೆ ಪರಿಚಯಿಸಿದವರು. ರಾಮಾಯಣ ಕಾವ್ಯದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.ಇಂದಿನ ದಿನಮಾನದಲ್ಲಿ ಸಮಾಜದಲ್ಲಿ ನಡೆಯುವ ಅನೇಕ ಚಿತ್ರಣಗಳು ಅದರಲ್ಲಿವೆ. ಶ್ರೀರಾಮನ ಮನಸ್ಥಿತಿ, ಆಡಳಿತವನ್ನು ಬರೆದ ರಾಜನೀತಿಜ್ಞ. ಜನಸಮುದಾಯದಿಂದ ಬಂದAತಹ ರಾಜ. ನಾಯಕರಾದವರು ಹೇಗಿರಬೇಕು. ಹೆತ್ತವರಿಗೆ, ಗುರುಗಳಿಗೆ, ಪ್ರಜೆಗಳಿಗೆ, ಕಡುಕಷ್ಟಕಾಲದಲ್ಲಿ ಬೆನ್ನೆಲುಬಾಗಿ ನಿಂತವರೊAದಿಗೆ ಹೇಗಿರಬೇಕು ಎಂಬ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಅರ್ಥಪೂರ್ಣವಾಗಿ ಬರೆದ ಸರ್ವತೋಮುಖಿ ಚಿಂತಕ. ಅವರ ಮೌಲ್ಯ, ತತ್ವಾದರ್ಶಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ವಾಲ್ಮೀಕಿ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಮುದಾಯದ ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡಬೇಕು. ಐಎಎಸ್, ಐಪಿಎಸ್, ಐಆರ್ಎಸ್ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ತಿಳಿಸಿದೆ. ಕಾರ್ಯಕ್ರಮದಲ್ಲಿ ಶಾಸಕರಾದ ಜ್ಯೋತಿ ಗಣೇಶ್, ಬಿ.ಸುರೇಶ್ಗೌಡ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಹಾಗು ವಾಲ್ಮೀಕಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.