ತುಮಕೂರು : ಸಮೃದ್ಧಿ ಫೌಂಡೇಷನ್ ಮತ್ತು ಸಮೃದ್ಧಿ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ ಇಂದು ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಗರದ ಸಂಘದ ಕಛೇರಿಯಲ್ಲಿ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅತೀಕ್ ಅಹಮ್ಮದ್ರವರು ಸಮೃದ್ಧಿ ತುರ್ತು ಸಹಾಯವಾಣಿಯನ್ನು ಅನಾವರಣ ಮಾಡಿ ತುಮಕೂರು ನಗರದ ಬೀದಿ ಬದಿ ವ್ಯಾಪಾರಿಗಳು ತಮಗೆ ಯಾವುದೇ ರೀತಿಯಾದ ವ್ಯಾಪಾರ ವಹಿವಾಟು ಅಥವಾ ಚಟುವಟಿಕೆಗಳಲ್ಲಿ ತೊಂದರೆ ಅಡಚಣೆ, ಅಧಿಕಾರಿಗಳ ಕಿರುಕುಳ ಸೇರಿದಂತೆ ಇತರೆ ಅಗತ್ಯ ಕಾರ್ಯಗಳಿಗೆ ದೂರವಾಣಿ ಸಂಖ್ಯೆಗೆ ೯೫೩೫೬೩೫೩೬೧ ಕರೆ ಮಾಡುವುದರ ಮೂಲಕ ತಮ್ಮ ನೆರವಿಗೆ ಸಮೃದ್ಧಿ ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರು ಕೂಡಲೇ ಆಗಮಿಸಿ ತಮಗೆ ಅಗತ್ಯ ನೆರವು ನೀಡುವಂತಹ ಮಹತ್ತರವಾದ ಕಾರ್ಯಕ್ಕೆ ಇಂದು ನಾನು ಚಾಲನೆ ನೀಡುತ್ತಿರುವುದು ತುಂಬಾ ಸಂತೋಷ ತಂದಿದೆ, ಇನ್ಮುಂದೆಯು ಸಹ ನಾನು ನನ್ನ ವೈಯುಕ್ತಿಕವಾಗಿ ತಮ್ಮಗಳಿಗೆ ಯಾವುದೇ ರೀತಿಯಾದ ಸಹಕಾರ ಮತ್ತು ಬೆಂಬಲಕ್ಕೆ ಸದಾ ನಿಮ್ಮೊಟ್ಟಿಗೆ ಇರುತ್ತೇನೆಂದು ಭರವಸೆಯನ್ನು ಸಹ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಸಮೃದ್ಧಿ ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರುಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರಗಳನ್ನು ಸಹ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಟಿ.ಕೆ.ಮಂಜುನಾಥ್, ರಾಜ್ಯ ಉಪಾಧ್ಯಕ್ಷರಾದ ರಾಜು (ಗಂಗಸoದ್ರ), ಲೋಕೇಶ್, ಪ್ರಭಾಕರ್, ಪ್ರೇಮ, ಸುರಯ್ಯ ರಾಧಮ್ಮ ಸೇರಿದಂತೆ ಇನ್ನಿತರೆ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.