ಅಫಜಪೂರ ತಾಲೂಕಿನ ಚಿಣಮಗೇರಾ ಗ್ರಾಮದಲ್ಲಿ 16.11.2023 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದ ಸಮಯದಲ್ಲಿ ಶಿಕ್ಷಕ ಸಿಬ್ಬಂದಿ ಮತ್ತು ಅಡುಗೆ ಸಿಬ್ಬಂದಿ ನಿರ್ಲಕ್ಷದಿಂದ ಸುಡುವ ಸಾಂಬರಿನಲ್ಲಿ ಬಿದ್ದ ಘಟನೆ ಹಿನ್ನೆಲೆಯಲ್ಲಿ 2ನೇ ತರಗತಿ ಓದುತ್ತಿರುವ 8 ವರ್ಷದ ಬಾಲಕಿ ಮಹಾಂತಮ್ಮಳು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ಟೋರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
ಇಂದು ದಿನಾಂಕ 21-11-23 ರಂದು ಸ್ವ ಗ್ರಾಮದಲ್ಲಿ ಬಾಲಕಿ ಮಹಾಂತಮ್ಮಳ ಶವಸಂಸ್ಕಾರ ಮುನ್ನ ತಾಲೂಕಿನ ಶಾಸಕರಾದ ಎಂ. ವೈ ಪಾಟೀಲ್, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕ್ನೂರ್ ಜಿಲ್ಲಾಧಿಕಾರಿಗಳಾದ ಫೌಜೀಯಾ ತರನುಂ, ಪೊಲೀಸ್ ವರಿಷ್ಠಾಧಿಕಾರಿಗಳಾದ ಅಡ್ಡೂರು ಶ್ರೀನಿವಾಸಲು, ಸಿ.ಇ.ಓ ಮತ್ತು ಪೊಲೀಸ್ ಸಮಾಜದ ಸಮನ್ವಯ ಸಮಿತಿಯ ಅಧ್ಯಕ್ಷರಾದ ಅವ್ವಣ್ಣ ಮ್ಯಾಕೇರಿ ಮತ್ತು ಪದಾಧಿಕಾರಿಗಳು, ಕರ್ನಾಟಕ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಅವ್ವಣ್ಣಗೌಡ ಪಾಟೀಲ್, ಕೂಲಿ ಕಬ್ಬಲಿಗ ಸಮಾಜದ ರಾಜ್ಯಾಧ್ಯಕ್ಷರಾದ ಲಚ್ಚಪ್ಪ ಜಮಾದಾರ್ ಇವರೆಲ್ಲ ಸಹಕಾರದೊಂದಿಗೆ ಮಾಂತಮ್ಮಳ ತಾಯಿಗೆ ಸರ್ಕಾರಿ ನೌಕರಿ ,ವಸತಿ ,ಮಾಂತಮ್ಮಳ ತಮ್ಮನಿಗೆ ಪದವಿ ಶಿಕ್ಷಣದ ವರೆಗೆ ಉಚಿತ ಶಿಕ್ಷಣ, ಒಂದು ವರ್ಷದವರೆಗೆ ಪ್ರತಿ ತಿಂಗಳಿಗೆ 4000 ಸಹಾಯಧನ. ಮತ್ತು ಶಿಕ್ಷಣ ಇಲಾಖೆ ಮಕ್ಕಳ ಕ್ಷೇಮಭಿವೃದ್ಧಿ ಇಲಾಖೆಯಿಂದ. ಸಂಘ-ಸಂಸ್ಥೆಗಳಿಂದ 14 ರಿಂದ 15 ಲಕ್ಷದವರೆಗೆ ಕುಟುಂಬದ ಹಿತ ದೃಷ್ಟಿಯಿಂದ ಸಹಾಯ ಮಾಡಿರುತ್ತಾರೆ.