ತುಮಕೂರು:ನಗರದ ಬಿ.ಜಿ.ಎಸ್ ವೃತ್ತದಲ್ಲಿರುವ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ದಿನಾಂಕ ೧೯-೯-೨೦೨೩ ರ ಮಂಗಳವಾರ ವಿನಾಯಕ ಚತುರ್ಥಿಯಂದು ೬ನೇ ವರ್ಷದ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನೆಯನ್ನು ನಿಶ್ಚಯಿಸಲಾಗಿದೆ ಎಂದು ಹಿಂದೂ ಮಹಾ ಗಣಪತಿ ಸ್ವಾಗತ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಿಂದುಗಳಲ್ಲಿ ಅಡಗಿದ್ದ ಧಾರ್ಮಿಕ ಭಾವನೆಗೆ ಹೊಸರೂಪ ನೀಡಲು ಮನೆಮನೆಯಲ್ಲಿ ನಡೆಯುತ್ತಿದ್ದ ಗಣೇಶನ ಪೂಜೆಯನ್ನು ೧೮೯೩ರಲ್ಲಿ ಲೋಕಮಾನ್ಯ ಬಾಲಗಂಗಾದರ್ ತಿಲಕ್ ರವರು ನಾಡಹಬ್ಬವನ್ನಾಗಿ ಪರಿವರ್ತಿಸಿದರು. ಇದರಿಂದಾಗಿ ಹಿಂದೂಗಳಲ್ಲಿ ಧಾರ್ಮಿಕ ಭಾವನೆಯೊಂದಿಗೆ ಸ್ವತಂತ್ರ÷್ಯ ಹೋರಾಟಕ್ಕೂ ಪ್ರೇರಣೆ ನೀಡಿದರು. ಹಿಂದುಗಳಲ್ಲಿ ಸಾಮರಸ್ಯ, ಸಂಸ್ಕಾರ, ಸಂಸ್ಕöÈತಿ, ಸುಸಂಸ್ಕöÈತ ನಡತೆ ಹಾಗೂ ರಾಷ್ಟಿçÃಯ ಭಾವನೆ ಮೂಡಲು ಆರಂಭಿಸಿತು.ಕಳೆದ ಆರು ವರ್ಷಗಳಿಂದ ತುಮಕೂರಿನಲ್ಲಿ ಹಿಂದೂ ಮಹಾ ಗಣಪತಿ ಮೂರ್ತಿ ಪ್ರತಿಷ್ಠಾನೆ ನಡೆಯುತ್ತಿದ್ದು, ಈವರ್ಷವೂ ಸೆಪ್ಟೆಂಬರ್ ೧೯ ರಂದು ಅದ್ದೂರಿಯಾಗಿ ಗಣೇಶ ಮೂರ್ತಿ ಪ್ರತಿಷ್ಫಾನೆ ನಡೆಯಲಿದೆ ಎಂದರು.
ಮಹಾ ಗಣಪತಿ ಸ್ವಾಗತ ಸಮಿತಿ

Leave a comment
Leave a comment