ಕಲ್ಬುರ್ಗಿ ಜಿಲ್ಲೆಯ ಅಫಜಪೂರ ತಾಲೂಕಿನ ಮದ್ರಾ ಬಿ ಗ್ರಾಮದ ನಿವಾಸಿಯಾದ ದೊಡ್ಡಪ್ಪ ಗೌಡ ಪಾಟೀಲ್ ಇಂದು ಬೆಳಗಿನ ಜಾವ ಚೌಡಾಪುರ್ ಬಸ್ ನಿಲ್ದಾಣದ ಬಳಿ ಬರ್ಬರ ಹತ್ಯೆಯಾಗಿದ್ದಾರೆ.ಇತ್ತೀಚಿಗೆ ಮದರಾ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕೊಲೆಯಾದ ವ್ಯಕ್ತಿಯ ವಯಸ್ಸು ಸುಮಾರು 50 ರಿಂದ 51 ವರ್ಷ. ಈ ಕೊಲೆಗೆ ಹಳೆ ವೈಸಮ್ಯವೇ ಕಾರಣ ಎಂದು ಶಂಕೆ . ಈ ಪ್ರಕರಣವು ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಯಲ್ಲಿ ದಾಖಲಾಗಿದ್ದು ಈ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ.