ಸಸ್ಪೆಂಡ್ ಆದ್ರೂ ಡೋಂಟ್ ಕೇರ್ – ಜಿಲ್ಲಾ ಕಾರ್ಮಿಕ ಇಲಾಖೆ ಅಮಾನತ್ತು ಆದ ಅಧಿಕಾರಿಯಿಂದ ರಾತ್ರಿವರೆಗೆ ಕಚೇರಿಯಲ್ಲಿ ಕಳ್ಳಾಟ
ಕಲಬುರಗಿ ಜಿಲ್ಲಾ ಕಾರ್ಮಿಕ ಇಲಾಖೆಯ ಅಮಾನತ್ತಾದ ಜಿಲ್ಲಾ ಅಧಿಕಾರಿ ರಮೇಶ ಸುಂಬಡ್ ರಾತ್ರಿವರೆಗೆ ಕಚೇರಿಯಲ್ಲಿದ್ದು ಫೈಲ್ ಗಳನ್ನು ಕಿತ್ತಾಕ್ಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅವ್ಯವಹಾರ ಮಾಡಿರುವ ಬಗ್ಗೆ ಆಂತರಿಕ ತನಿಖೆಯಲ್ಲಿ ಬಯಲಾದ ಹಿನ್ನಲೆ ನಿನ್ನೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅಮಾನತ್ತು ಮಾಡಿದ್ದಾರೆ.
ನಿನ್ನೆಯೇ ಅಮಾನತ್ತು ಆದೇಶ ಕೂಡಾ ಸಿಕ್ಕರೂ ಇಂದು ಕಾರ್ಮಿಕ ಕಚೇರಿಯಲ್ಲಿ ಅಧಿಕಾರಿ ರಮೇಶ ಸುಂಬಡ ರಾಜಾರೋಷವಾಗಿ ಫೈಲ್ ಗಳನ್ನು ಕಿತ್ತಾಕಿ ಕಳ್ಳಾಟ ನಡೆಸಿದ್ದಾರೆ.
ತಾವು ಮಾಡಿರುವ ಅವ್ಯವಹಾರದ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಕಚೇರಿಯ ಫೈಲ್ಗಳನ್ನು ಕಿತ್ತಾಕಿರುವ ಶಂಕೆ ವ್ಯಕ್ತವಾಗಿದೆ.
ಈ ವೇಳೆ ಕೇಳಲು ಹೋದವರ ಮೇಲೆಯೇ ಮೇಲಾಧಿಕಾರಿಗಳಿಂದ ಅಮಾನತ್ತು ಆದೇಶ ಬಂದಿಲ್ಲ ಅಂತ ವಾಪಸ್ ಅವಾಜ್ ಹಾಕಿದ್ದಾರೆ.
ಕೂಡಲೇ ರಮೇಶ ಸುಂಬಡ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು
ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಬಂಡಾರಿ ಆಗ್ರಹಿಸಿದ್ದಾರೆ..