ಶಿಕ್ಷಕರಿಂದ ಆಯ್ಕೆಯಾದ ವಿಧಾನಪರಿಷತ್ ಸದಸ್ಯರುಗಳುಶೈಕ್ಷಣಿಕ ನೀತಿಗಳನ್ನು ರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪಿಸಿದರು.
ಅವರು ತುಮಕೂರು ಗ್ರಾಮಾಂತರದ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಉಪನ್ಯಾಸಕರೊಂದಿಗೆ ಸಮಾಲೋಚನಾ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಹಲವಾರು ವರ್ಷಗಳಿಂದ ನಿರಂತರವಾಗಿ ಶಿಕ್ಷಕರ ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿರುವ ಪರಿಷತ್ ಸದಸ್ಯರು ಶಿಕ್ಷಕರ ಪ್ರತಿನಿಧಿಯಾಗಿ ಶಿಕ್ಷಕರಿಗೆ ಮೋಸ ಮಾಡುತ್ತಾ ಬಂದಿದ್ದಾರೆ.
ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗೀ ಅನುದಾನರಹಿತ ಶಾಲಾ ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಹಾಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದು, ಅವುಗಳನ್ನು ಜೀವಂತವಾಗಿರಿಸಿಕೊಂಡು ಶಿಕ್ಷಕರು ನೀಡಿರುವ ಅಧಿಕಾರವನ್ನು ಅನುಭವಿಸುತ್ತಾ ಬಂದಿದ್ದಾರೆ.
2015ರಿಂದ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಆಗಿಲ್ಲ. ಇದು ಮಕ್ಕಳ ಶೈಕ್ಷಣಿಕ ಮೂಲಭೂತ ಹಕ್ಕಿನ ಹರಣವಾಗಿದ್ದು, ಶಿಕ್ಷಕರ ನೇಮಮಾತಿ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವಲ್ಲಿ ವಿಫಲರಾಗಿದ್ದು, ಇದರ ಮೂಲಕ ಅನುದಾನಿತ ಶಾಲೆಗಳನ್ನು ಮುಚ್ಚಿಸುವ ವ್ಯವಸ್ಥಿತ ತಂತ್ರಗಾರಿಕೆಗೆ ಕೈ ಜೋಡಿಸಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕರ ಓ.ಪಿ.ಎಸ್. ಸಮಸ್ಯೆ, ಟೈಂ ಬಾಂಡ್, ಮುಂಬಡ್ತಿ, ಅನುದಾನಿತ ಶಾಲಾ ಶಿಕ್ಷಕರ ಕಾಲ್ಪನಿಕ ವೇತನ, ಅನುದಾನ ರಹಿತ ಶಾಲಾ ಶಿಲ್ಷಕರಿಗೆ ಶಿಕ್ಷಕರ ಕಲದಯಾಣ ನಿಧಿಯ ಸದಾ್ಯತ್ವ ಕೊಡಿಸುವುದು ಹೀಗೆ ಹತ್ತು ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿ ಯಾವುದೇ ಗಮನ ನೀಡದೇ ಶಿಕ್ಷಕರಿಗೆ ಅನ್ಯಾಯವೆಸಗಿದ್ದಾರೆ.
ಕಳೆದ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವವಿದ್ದ ವೇಳೆ ವೈ.ಎ. ನಾರಾಯಣಸ್ವಾಮಿಯವರು ಸರ್ಕಾರದ ಮುಖ್ಯ ಸಚೇತಕರಾಗಿದ್ದರು, ಆಗಲೂ ಶಿಲ್ಷಕರ ಪರವಾದ ಯಾವುದೇ ನೀತಿಗಳನ್ನು ರೂಪಿಸುವಲ್ಲಿ ವಿಫಲರಾಗಿದ್ದಾರೆ. ಈಗ ಏನಾದರೂ ಕೇಳಿದರೆ ಅದು ಸರ್ಕಾರದ ನೀತಿ ಪಾಲಿಸಿ ಮ್ಯಾಟರ್ ಎಂದು ನುಣುಚಿಕೊಳ್ಳವ ಪ್ರಯತ್ನ ಮಾಡುತ್ತಾರೆ.
ರೂಪ್ಸಾ ಕರ್ನಾಟಕ ಶಾಸನ ಸಭೆಯ ಹೊರಗೆ ಹೋರಾಟ ಮಾಡಿ ಕಳೆದ ನಾಲ್ಕ ವರ್ಷಗಳಲ್ಲಿ ನಾಲ್ಕು ಸರ್ಕಾರದ ನೀತಿಗಳನ್ನು ಬದಲಾಯಿಸಿ ಶೈಕ್ಷಣಿಕ ಸಂಸ್ಥೆಗಳಿಗೆ ಹಾಗೂ ಶಿಕ್ಷಕರಿಗೆ ಅನುಕೂಲ ಕಲ್ಪಿಸಿದೆ.
ಇಚ್ಛಾ ಶಕ್ತಿಯ ಕೊರತೆಯಿರುವ ಇವರು ಯಾವ ರೀತಿಯಲ್ಲಿ ಶಿಕ್ಷಕರನ್ನು ಮತ ಕೇಳುತ್ತಾರೆ? ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ನಾನು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದು, ನನ್ನ ಬೆಂಬಲಕ್ಕೆ ಇಡೀ ಶಿಕ್ಷಕ ಸಮುದಾಯ ನಿಂತಿದೆ. ಹೊದಲ್ಲೆಲ್ಲಾ ಶಿಕ್ಷಕರು ತಮ್ಮ ಸಮಸ್ಯೆಗಳ ಬಗ್ಗೆ ತಮ್ಮ ಬಳಿ ಅಸಮಾಧಾನ ತೋಡಿಕೊಳ್ಳುತ್ತಿದ್ದು, ರೂಪ್ಸಾ ಕರ್ನಾಟಕದ ಹೋರಾಟದ ಬಗ್ಗೆ ಮಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬದಲಾವಣೆಯ ಕೂಗು ಕೇಳಿ ಬಂದಿದ್ದು ಖಂಡಿತವಾಗಿ ಈ ಬಾರಿ ಶಿಕ್ಷಲರು ನನ್ನನ್ನು ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.